AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್​ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ

Public suggestions invited for reforming IT act: ಆದಾಯ ತೆರಿಗೆ ಕಾಯ್ದೆಯಲ್ಲಿ ವೈರುದ್ಧ್ಯ ಅಂಶಗಳಿದ್ದರೆ, ವ್ಯಾಜ್ಯಕ್ಕೆ ಕಾರಣವಾಗುವಂತಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತರಲು ನಿಮಗೆ (ಸಾರ್ವಜನಿಕರು) ಅವಕಾಶ ಇದೆ. ಈ ಕಾಯ್ದೆಯಲ್ಲಿ ಅಮೂಲಾಗ್ರವಾಗಿ ಸುಧಾರಣೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಎಲ್ಲರಿಗೂ ಅರ್ಥವಾಗುವಂತೆ ಭಾಷೆ ಇರಬೇಕು, ವ್ಯಾಜ್ಯ ಅಥವಾ ಬಿಕ್ಕಟ್ಟು ಸೃಷ್ಟಿಯಾಗುವ ಅಂಶಗಳನ್ನು ಸರಿಪಡಿಸಬೇಕು ಇವೇ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯತ್ನಿಸಲಾಗುತ್ತಿದೆ.

ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್​ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 08, 2024 | 3:54 PM

Share

ನವದೆಹಲಿ, ಅಕ್ಟೋಬರ್ 8: ಆದಾಯ ತೆರಿಗೆ ಕಾಯ್ದೆಯನ್ನು ಸಾಧ್ಯವಾದಷ್ಟೂ ಸರಳಗೊಳಿಸಲು ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಬಳಸಲಾಗಿರುವ ಭಾಷೆಯನ್ನು ಸರಳಗೊಳಿಸುವುದು; ವ್ಯಾಜ್ಯ ಕಡಿಮೆಗೊಳಿಸುವುದು; ನಿಯಮ ನಿಬಂಧನೆಗಳನ್ನು ಸರಳಗೊಳಿಸುವುದು; ನಿರುಪಯುಕ್ತ ಅಂಶಗಳನ್ನು ತೆಗೆದುಹಾಕುವುದು, ಈ ಅಂಶಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ತರಲು ಯತ್ನಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಸಿಬಿಡಿಟಿ ಒಂದು ಆಂತರಿಕ ಸಮಿತಿಯನ್ನು ರಚಿಸಿದೆ. ಹಾಗೆಯೇ, ಸಾರ್ವಜನಿಕರೂ ಕೂಡ ಈ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆದಾಯ ತೆರಿಗೆ ಕಾಯ್ದೆ ಪರಿಷ್ಕರಣೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಯಾಚಿಸಲಾಗಿದೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿ ಇದಕ್ಕೆ ಅವಕಾಶ ಕೊಡಲಾಗಿದೆ. ನಾಲ್ಕು ನಿರ್ದಿಷ್ಟ ವಿಚಾರದ ಬಗ್ಗೆ ಮಾತ್ರವೇ ಸಾರ್ವಜನಿಕರು ಸಲಹೆ ನೀಡಲು ಅವಕಾಶ ಹೊಂದಿರುತ್ತಾರೆ.

ಇದನ್ನೂ ಓದಿ: ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್​ಡಿಐ, ಎಫ್​ಪಿಐ ಮತ್ತು ಎಫ್​ಐಐ ಮಧ್ಯೆ ವ್ಯತ್ಯಾಸಗಳೇನು?

ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನ ಮುಖ್ಯಪುಟದಲ್ಲಿ ಎಡಬದಿಯಲ್ಲಿರುವ ಕ್ವಿಕ್ ಲಿಂಕ್ಸ್ ಪಟ್ಟಿಯಲ್ಲಿ ಮೊದಲಿಗೆ ‘ಸಜೆಶನ್ಸ್ ಫಾರ್ ರೀವ್ಯಾಂಪ್​ ಆಫ್ ಐಟಿ ಆ್ಯಕ್ಟ್’ ಕಾಣಬಹುದು. ಅದರ ನೇರ ಲಿಂಕ್ ಇಲ್ಲಿದೆ: eportal.incometax.gov.in/iec/foservices/#/pre-login/ita-comprehensive-review

ಸಾರ್ವಜನಿಕರು ಈ ಪೋರ್ಟಲ್ ಲಿಂಕ್ ಬಳಸಿ ತಮ್ಮ ಅನಿಸಿಕೆಗಳನ್ನು ಪೋಸ್ಟ್ ಮಾಡಬಹುದು. ಮೊದಲಿಗೆ ಮೊಬೈಲ್ ನಂಬರ್ ನಮೂದಿಸಿ ಅದನ್ನು ಒಟಿಪಿ ಮೂಲಕ ದೃಢೀಕರಿಸಬೇಕು. ಆ ಬಳಿಕ ಆದಾಯ ತೆರಿಗೆ ಕಾಯ್ದೆಯಲ್ಲಿರುವ ಯಾವುದಾದರೂ ನಿಯಮದಲ್ಲಿ ಬದಲಾವಣೆ ಆಗಬೇಕಿದ್ದರೆ ಅದನ್ನು ನಿರ್ದಿಷ್ಟಪಡಿಸಬೇಕು.

ಕಳೆದ ಬಾರಿಯ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಕಾಯ್ದೆಯಲ್ಲಿ ವ್ಯಾಜ್ಯಗಳು ಮತ್ತು ವಿವಾದಗಳು ತಲೆದೋರದ ಹಾಗೆ ಸ್ಪಷ್ಟತೆ ತರುವ ಗುರಿ ಇದೆ ಎಂದು ಹೇಳಿದ್ದರು. 2025ರ ಜನವರಿಯೊಳಗೆ ಈ ಸುಧಾರಣೆ ಆಗಬೇಕೆಂದು ಅವರು ಗುರಿ ಸೆಟ್ ಮಾಡಿದ್ದಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ

ತಜ್ಞರ ಸಮಿತಿಯಿಂದ ಅವಲೋಕನೆಯ ಕಾರ್ಯವಾಗುತ್ತಿದೆ. ಅದೇ ಹೊತ್ತಲ್ಲಿ ಸಾರ್ವಜನಿಕರೂ ಕೂಡ ಸಲಹೆ ಸೂಚನೆಗಳನ್ನು ಸಿಬಿಡಿಟಿಗೆ ಕೊಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ