ನವದೆಹಲಿ, ಅಕ್ಟೋಬರ್ 8: ಆದಾಯ ತೆರಿಗೆ ಕಾಯ್ದೆಯನ್ನು ಸಾಧ್ಯವಾದಷ್ಟೂ ಸರಳಗೊಳಿಸಲು ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಬಳಸಲಾಗಿರುವ ಭಾಷೆಯನ್ನು ಸರಳಗೊಳಿಸುವುದು; ವ್ಯಾಜ್ಯ ಕಡಿಮೆಗೊಳಿಸುವುದು; ನಿಯಮ ನಿಬಂಧನೆಗಳನ್ನು ಸರಳಗೊಳಿಸುವುದು; ನಿರುಪಯುಕ್ತ ಅಂಶಗಳನ್ನು ತೆಗೆದುಹಾಕುವುದು, ಈ ಅಂಶಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ತರಲು ಯತ್ನಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಸಿಬಿಡಿಟಿ ಒಂದು ಆಂತರಿಕ ಸಮಿತಿಯನ್ನು ರಚಿಸಿದೆ. ಹಾಗೆಯೇ, ಸಾರ್ವಜನಿಕರೂ ಕೂಡ ಈ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆದಾಯ ತೆರಿಗೆ ಕಾಯ್ದೆ ಪರಿಷ್ಕರಣೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಯಾಚಿಸಲಾಗಿದೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಇದಕ್ಕೆ ಅವಕಾಶ ಕೊಡಲಾಗಿದೆ. ನಾಲ್ಕು ನಿರ್ದಿಷ್ಟ ವಿಚಾರದ ಬಗ್ಗೆ ಮಾತ್ರವೇ ಸಾರ್ವಜನಿಕರು ಸಲಹೆ ನೀಡಲು ಅವಕಾಶ ಹೊಂದಿರುತ್ತಾರೆ.
ಇದನ್ನೂ ಓದಿ: ವಿದೇಶೀ ಹೂಡಿಕೆಗಳಲ್ಲೇ ವಿವಿಧ ಬಗೆ; ಎಫ್ಡಿಐ, ಎಫ್ಪಿಐ ಮತ್ತು ಎಫ್ಐಐ ಮಧ್ಯೆ ವ್ಯತ್ಯಾಸಗಳೇನು?
ಇನ್ಕಮ್ ಟ್ಯಾಕ್ಸ್ ಪೋರ್ಟಲ್ನ ಮುಖ್ಯಪುಟದಲ್ಲಿ ಎಡಬದಿಯಲ್ಲಿರುವ ಕ್ವಿಕ್ ಲಿಂಕ್ಸ್ ಪಟ್ಟಿಯಲ್ಲಿ ಮೊದಲಿಗೆ ‘ಸಜೆಶನ್ಸ್ ಫಾರ್ ರೀವ್ಯಾಂಪ್ ಆಫ್ ಐಟಿ ಆ್ಯಕ್ಟ್’ ಕಾಣಬಹುದು. ಅದರ ನೇರ ಲಿಂಕ್ ಇಲ್ಲಿದೆ: eportal.incometax.gov.in/iec/foservices/#/pre-login/ita-comprehensive-review
ಸಾರ್ವಜನಿಕರು ಈ ಪೋರ್ಟಲ್ ಲಿಂಕ್ ಬಳಸಿ ತಮ್ಮ ಅನಿಸಿಕೆಗಳನ್ನು ಪೋಸ್ಟ್ ಮಾಡಬಹುದು. ಮೊದಲಿಗೆ ಮೊಬೈಲ್ ನಂಬರ್ ನಮೂದಿಸಿ ಅದನ್ನು ಒಟಿಪಿ ಮೂಲಕ ದೃಢೀಕರಿಸಬೇಕು. ಆ ಬಳಿಕ ಆದಾಯ ತೆರಿಗೆ ಕಾಯ್ದೆಯಲ್ಲಿರುವ ಯಾವುದಾದರೂ ನಿಯಮದಲ್ಲಿ ಬದಲಾವಣೆ ಆಗಬೇಕಿದ್ದರೆ ಅದನ್ನು ನಿರ್ದಿಷ್ಟಪಡಿಸಬೇಕು.
ಕಳೆದ ಬಾರಿಯ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಕಾಯ್ದೆಯಲ್ಲಿ ವ್ಯಾಜ್ಯಗಳು ಮತ್ತು ವಿವಾದಗಳು ತಲೆದೋರದ ಹಾಗೆ ಸ್ಪಷ್ಟತೆ ತರುವ ಗುರಿ ಇದೆ ಎಂದು ಹೇಳಿದ್ದರು. 2025ರ ಜನವರಿಯೊಳಗೆ ಈ ಸುಧಾರಣೆ ಆಗಬೇಕೆಂದು ಅವರು ಗುರಿ ಸೆಟ್ ಮಾಡಿದ್ದಾರೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರ ಗಮನಕ್ಕೆ; ಸೆಬಿ ತರುತ್ತಿದೆ ನಾಮಿನಿ, ಕೆವೈಸಿ ನಿಯಮ ಬದಲಾವಣೆ
ತಜ್ಞರ ಸಮಿತಿಯಿಂದ ಅವಲೋಕನೆಯ ಕಾರ್ಯವಾಗುತ್ತಿದೆ. ಅದೇ ಹೊತ್ತಲ್ಲಿ ಸಾರ್ವಜನಿಕರೂ ಕೂಡ ಸಲಹೆ ಸೂಚನೆಗಳನ್ನು ಸಿಬಿಡಿಟಿಗೆ ಕೊಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ