ಐಟಿಆರ್
2022-23ರ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಫೈಲ್ ಮಾಡುವ ಸಮಯ ಇದು. ಐಟಿಆರ್ ಸಲ್ಲಿಕೆಗೆ (IT Returns Filing) ಜುಲೈ 31ರವರೆಗೂ ಕಾಲಾವಕಾಶ ಇರುತ್ತದೆ. ನಮ್ಮಲ್ಲಿ ಬಹುತೇಕರು ಐಟಿ ರಿಟರ್ನ್ಸ್ ಸಲ್ಲಿಕೆಗೆ ಯಾವುದಾದರೂ ಏಜೆನ್ಸಿಗೋ, ಆಡಿಟರ್ಗೋ ಜವಾಬ್ದಾರಿ ವಹಿಸಿ ಸುಮ್ಮನಾಗುತ್ತಾರೆ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ನೀವು ಅಂದುಕೊಂಡಷ್ಟು ಸಂಕೀರ್ಣವಾಗಿಲ್ಲ. ಬಹುತೇಕ ಎಲ್ಲರೂ ಕೂಡ ಸುಲಭವಾಗಿ ರಿಟರ್ನ್ಸ್ ಸಲ್ಲಿಕೆ ಮಾಡಬಹುದು. ಸಂಬಳದಾರರಾಗಿರುವ ತೆರಿಗೆದಾರರು ಅಥವಾ ಉದ್ಯೋಗಿಗಳು ಐಟಿ ರಿಟರ್ನ್ಸ್ ಹೇಗೆ ಫೈಲ್ ಮಾಡಬಹುದು ಎಂಬ ವಿವರ ಈ ಲೇಖನದಲ್ಲಿದೆ.
ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯ 50 ಲಕ್ಷ ರೂಗಿಂತ ಕಡಿಮೆ ಇದ್ದರೆ, ಒಂದು ಮನೆ, ಕುಟುಂಬ ಪಿಂಚಣಿ ಆದಾಯ, 5000 ರೂವರೆಗಿನ ಕೃಷಿ ಆದಾಯ, ಬ್ಯಾಂಕ್ ಠೇವಣಿಗಳಿಂದ ಬಡ್ಡಿ ಇತ್ಯಾದಿ ರೀತಿಯ ಆದಾಯ ಮಾತ್ರ ಇದ್ದರೆ ಅಂತಹವರು ಐಟಿಆರ್-1 ಫಾರ್ಮ್ ಅನ್ನು ಆರಿಸಿಕೊಳ್ಳಬೇಕು. ಭಾರತದಲ್ಲಿರುವ ಬಹುತೇಕ ಸಂಬಳದಾರರಿಗೆ ಐಟಿಆರ್-1 ಫಾರ್ಮ್ ಅನ್ವಯ ಆಗುತ್ತದೆ.
ಇದನ್ನೂ ಓದಿ: Railway Travel Insurance: ರೈಲಿನಲ್ಲಿ ಹೋಗುತ್ತೀರಾ? ಕೇವಲ 35 ಪೈಸೆ ಕಟ್ಟಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಪಡೆಯಿರಿ
ಆನ್ಲೈನ್ನಲ್ಲಿ ಐಟಿಆರ್ ಫೈಲ್ ಮಾಡುವ ಕ್ರಮಗಳು
- ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ. ಅದರ ಯುಅರ್ಎಲ್ ಇಲ್ಲಿದೆ: www.incometax.gov.in/iec/foportal/
- ಇ ಫೈಲಿಂಗ್ ಪೋರ್ಟಲ್ಗೆ ಯೂಸರ್ ಐಡಿ, ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ಇಲ್ಲಿ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಮುಖ್ಯಪುಟದಲ್ಲಿ ಕಾಣುವ ‘ಇ–ಫೈಲ್’ ಮೆನು ಕೆಳಗೆ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಲಿಂಕ್ ಅನ್ನು ಕ್ಲಿಕ್ ಮಾಡಿ
- ಇಲ್ಲಿ ನೀವು ಅಸೆಸ್ಮೆಂಟ್ ವರ್ಷ, ಆನ್ಲೈನ್ ಮೋಡ್ ಆಯ್ಕೆ ಮಾಡಬೇಕು. ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ. ಅದಾದ ನಂತರ ಫೈಲಿಂಗ್ ಪ್ರಕ್ರಿಯೆ ಆರಂಭಿಸಬಹುದು.
- ಐಟಿಆರ್ ಫಾರ್ಮ್ ಸಂಖ್ಯೆ ಆರಿಸಿಕೊಳ್ಳಬೇಕು. ಫೈಲಿಂಗ್ ಟೈಪ್ ಅನ್ನು ಒರಿಜಿನಲ್ ಅಥವಾ ರಿವೈಸ್ಡ್ ರಿಟರ್ನ್ ಎಂದು ಆರಿಸಬೇಕು. ಸಬ್ಮಿಶನ್ ಮೋಡ್ ಅನ್ನು ಪ್ರಿಪೇರ್ ಅಂಡ್ ಸಬ್ಮಿಟ್ ಆನ್ಲೈನ್ ಎಂದು ಆರಿಸಿಕೊಳ್ಳಬೇಕು.
- ನಂತರ ಕಂಟಿನ್ಯೂ ಕ್ಲಿಕ್ ಮಾಡಿ
- ಆನ್ಲೈನ್ ಐಟಿಆರ್ ಫಾರ್ಮ್ನಲ್ಲಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಜಾಗ್ರತೆಯಿಂದ ಮಾಹಿತಿ ತುಂಬಿರಿ.
- ಅದಾ ಬಳಿಕ ಸೇವ್ ಡ್ರಾಫ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಡ್ರಾಫ್ಟ್ 30 ದಿನಗಳವರೆಗೂ ನಿಮ್ಮ ದತ್ತಾಂಶವನ್ನು ಉಳಿಸಿಟ್ಟಿರುತ್ತದೆ.
- ಒಟ್ಟು ಆದಾಯ, ಡಿಡಕ್ಷನ್, ಪಾವತಿಸಿದ ತೆರಿಗೆ, ತೆರಿಗೆ ಬಾಕಿ ಇತ್ಯಾದಿ ಎಲ್ಲಾ ವಿವರವೂ ಭರ್ತಿಯಾಗಿರಲಿ. ತೆರಿಗೆ ಉಳಿಸುವ ಯಾವುದೇ ಹೂಡಿಕೆ ಇದ್ದರೂ ಅದರ ವಿವರ ಇಲ್ಲಿ ತಪ್ಪದೇ ಹಾಕಿ. ಇದರಿಂದ ಹೆಚ್ಚು ತೆರಿಗೆ ಉಳಿಸಬಹುದು.
- ಈಗ ವೆರಿಫಿಕೇಶನ್ ಪ್ರಕ್ರಿಯೆ. ‘ಟ್ಯಾಕ್ಸಸ್ ಪೇಯ್ಡ್ ಅಂಡ್ ವೆರಿಫಿಕೇಶನ್’ ಟ್ಯಾಬ್ನಲ್ಲಿ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕು. ನೀವು ಇವೆರಿಫೈ ಮಾಡುವ ಬದಲು ಫಾರ್ಮ್ ಅನ್ನು ಪೋಸ್ಟ್ ಮೂಲಕ ಸಿಪಿಸಿ ಕಚೇರಿಗೆ ಕಳುಹಿಸುವುದಾದರೆ ಮೂರನೇ ಆಯ್ಕೆ ಚೆಕ್ ಮಾಡಬೇಕು.
- ಇದಾದ ಬಳಿಕ ಪ್ರಿವ್ಯೂ ಅಂಡ್ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಐಟಿಆರ್ನಲ್ಲಿ ನಮೂದಾದ ಎಲ್ಲಾ ಮಾಹಿತಿ ವೆರಿಫೈ ಆಗುತ್ತದೆ. ಈಗ ಐಟಿಆರ್ ಸಬ್ಮಿಟ್ ಮಾಡಿ.
- ಒಂದು ವೇಳೆ ನೀವು ಇ–ವೆರಿಫೈ ಆಯ್ಕೆ ಆರಿಸಿಕೊಂಡರೆ ಅದರಲ್ಲೂ ವಿವಿಧ ಆಯ್ಕೆಗಳಿವೆ. ಇವಿಸಿ ಅಥವಾ ಒಟಿಪಿ ಮೂಲಕ ವೆರಿಫಿಕೇಶನ್ ಮಾಡಬಹುದು. ನೊಂದಾಯಿತ ಮೊಬೈಲ್ ನಂಬರ್ಗೆ ಇವಿಸಿ ಅಥವಾ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆರಿಫಿಕೇಶನ್ ಪೂರ್ಣಗೊಳಿಸಬೇಕು.
- ಒಟಿಪಿಯನ್ನು 60 ಸೆಕೆಂಡ್ನೊಳಗೆ ನಮೂದಿಸಿ ಸಬ್ಮಿಟ್ ಮಾಡದಿದ್ದರೆ ಮೈ ಅಕೌಂಟ್ ಹಾಗೂ ಇವೆರಿಫೈ ರೆಟರ್ನ್ಗೆ ಹೋಗಿ ಮತ್ತೊಮ್ಮೆ ವೆರಿಫಿಕೇಶನ್ ಮಾಡಬೇಕಾಗುತ್ತದೆ.
- ಇ ವೆರಿಫಿಕೇಶನ್ ಆದ ಬಳಿಕ ನಿಮ್ಮ ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೀವು ಇದೇ ಪೋರ್ಟಲ್ನಲ್ಲಿ ಸಲ್ಲಿಕೆಯಾದ ಐಟಿಆರ್ ಅನ್ನು ವೀಕ್ಷಿಸಬಹುದು.
ಇದನ್ನೂ ಓದಿ: LIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ