AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ; ಏನಿದೆ ಸೌಲಭ್ಯ ಇದರಲ್ಲಿ?

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಸಂಸ್ಥೆ ಹೊಸ ಜೀವ ವಿಮಾ ಪಾಲಿಸಿ ಜೀವನ್ ಕಿರಣ್ ಅನ್ನು ಜಾರಿಗೆ ತಂದಿದೆ. ಇದು 18ರಿಂದ 65 ವರ್ಷದೊಳಗಿನವರು 10ರಿಂದ 40 ವರ್ಷಗಳವರೆಗೆ ಮಾಡಿಸಬಹುದಾದ ಪಾಲಿಸಿ ಇದು.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ; ಏನಿದೆ ಸೌಲಭ್ಯ ಇದರಲ್ಲಿ?
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2023 | 6:14 PM

Share

ಭಾರತೀಯ ಜೀವ ವಿಮಾ ನಿಗಮ (LIC) ಆಗಾಗ್ಗೆ ಹೊಸ ಸ್ಕೀಮ್​ಗಳನ್ನ ಪ್ರಕಟಿಸುತ್ತಿರುತ್ತದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿಮಾ ಪಾಲಿಸಿಗಳನ್ನು ಎಲ್​ಐಸಿ ಹೊಂದಿದೆ. ಇದೀಗ ಎಲ್​ಐಸಿ ಜೀವನ್ ಕಿರಣ್ (Jeevan Kiran) ಎಂಬ ಹೊಸ ಲೈಫ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ ಮಾಡಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದ್ದು, ಜೀವ ವಿಮೆಗೆ (Life Risk Coverage) ಹೇಳಿ ಮಾಡಿಸಿದ್ದಾಗಿದೆ. 18 ವರ್ಷದಿಂದ 65 ವರ್ಷದ ವಯೋಮಾನದ ಜನರು ಎಲ್​ಐಸಿ ಜೀವನ್ ಕಿರಣ್ ಪಾಲಿಸಿ ಮಾಡಿಸಬಹುದು.

ಎಲ್​​ಐಸಿ ಜೀವನ್ ಕಿರಣ್ ಪಾಲಿಸಿಯ ಅವಧಿ 10 ವರ್ಷದಿಂದ ಆರಂಭವಾಗಿ 40 ವರ್ಷಗಳವರೆಗೂ ಇದೆ. ಕನಿಷ್ಠ ಭರವಸೆ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 15 ಲಕ್ಷ ರೂ ಇದೆ. ಅದಕ್ಕೂ ಮೇಲ್ಪಟ್ಟ ಮೊತ್ತವನ್ನೂ ಆಯ್ಕೆ ಮಾಡಿಕೊಳ್ಳಬಹುದು. ವಯಸ್ಸು, ಪಾಲಿಸಿ ಅವಧಿಯ ಮೇಲೆ ಪ್ರೀಮಿಯಮ್ ಹಣ ನಿಗದಿಯಾಗುತ್ತದೆ. ಕನಿಷ್ಠ ಪ್ರೀಮಿಯಮ್ ತಿಂಗಳಿಗೆ 3,000 ರೂ ಇದೆ. ಇದರಲ್ಲಿ ಸಿಂಗಲ್ ಪ್ರೀಮಿಯಮ್ ಪಾಲಿಸಿಯೂ ಇದೆ. ಇದರಲ್ಲಿ ಕನಿಷ್ಠ ಪ್ರೀಮಿಯಮ್ 30,000 ರೂನದ್ದಾಗಿದೆ.

ಇನ್ನು ರೆಗ್ಯುಲರ್ ಪ್ರೀಮಿಯಮ್​ನ ಪಾಲಿಸಿಯಲ್ಲಿ 20 ಲಕ್ಷ ಬೇಸಿಕ್ ಸಮ್ ಅಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ವಯಸ್ಸು 40 ವರ್ಷವಾಗಿದ್ದು, 10 ವರ್ಷದ ಪಾಲಿಸಿ ಪಡೆದರೆ ನೀವು ವರ್ಷಕ್ಕೆ 22,500 ರೂ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: Dhan Vriddhi Policy: ಎಲ್​ಐಸಿ ಧನ ವೃದ್ಧಿ ಯೋಜನೆ; ಇದು ನಿಮ್ಮ ಪಾಲಿನ ಮನಿಪ್ಲಾಂಟ್; ಬೇಕಷ್ಟು ಬೆಳೆಸಿ, ಬೇಕೆಂದಾಗ ಹಿಂಪಡೆಯಿರಿ

ಎಲ್​ಐಸಿ ಜೀವನ್ ಕಿರಣ್ ಪಾಲಿಸಿ ಮಧ್ಯದಲ್ಲಿ ಮೃತಪಟ್ಟರೆ ಹೇಗೆ?

ಜೀವನ್ ಕಿರಣ್ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟಾಗ 3 ಅಂಶಗಳನ್ನು ಪರಿಗಣಿಸಲಾಗುತ್ತದೆ.

  1. ಬೇಸಿಕ್ ಸಮ್ ಅಶೂರ್ಡ್
  2. ಆವರೆಗೂ ಕಟ್ಟಲಾದ ಒಟ್ಟು ಪ್ರೀಮಿಯಮ್​ನ ಶೇ. 105ರಷ್ಟು ಮೊತ್ತ
  3. ವರ್ಷದ ಪ್ರೀಮಿಯಮ್ ಮೊತ್ತದ ಏಳು ಪಟ್ಟು ಮೊತ್ತ

ಈ ಮೂರರಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ವಾರಸುದಾರರಿಗೆ ಕೊಡಲಾಗುತ್ತದೆ. ಒಂದು ವೇಳೆ ಸಿಂಗಲ್ ಪ್ರೀಮಿಯಮ್ ಪಾಲಿಸಿಯಾದರೆ ಪ್ರೀಮಿಯಮ್ ಮೊತ್ತದ ಶೇ. 125ರಷ್ಟು ಹಣವನ್ನು ನೀಡಲಾಗುತ್ತದೆ. ಅಥವಾ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕೊಡಲಾಗುತ್ತದೆ.

ಇದನ್ನೂ ಓದಿ: LIC Loan: ಎಲ್​ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಧೂಮಪಾನಿಗಳಿಗೆ ಹೆಚ್ಚು ಪ್ರೀಮಿಯಮ್

ಧೂಮಪಾನಿಗಳಲ್ಲದ ಸಾಮಾನ್ಯ ಗ್ರಾಹಕರಿಗೆ ಪ್ರೀಮಿಯಮ್ ಕಡಿಮೆ ಇರುತ್ತದೆ. ಧೂಮಪಾನಿಗಳಿಗೆ ಹೆಚ್ಚಿನ ಪ್ರೀಮಿಯಮ್ ಇರುತ್ತದೆ. ಹಾಗೆಯೇ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದವರಿಗೂ ಧೂಮಪಾನಿಗಳಷ್ಟೇ ಹೆಚ್ಚಿನ ಪ್ರೀಮಿಯಮ್ ನಿಗದಿ ಮಾಡಲಾಗುತ್ತದೆ.

ಒಂದು ವೇಳೆ, ಪಾಲಿಸಿದಾರ ಪಾಲಿಸಿ ಮೆಚ್ಯೂರ್ ಆಗುವುದರೊಳಗೆ ಸಾಯದಿದ್ದರೆ ಆಗ ಮೆಚ್ಯೂರಿಟಿ ಬಳಿಕ ಒಟ್ಟು ಪ್ರೀಮಿಯಮ್ ಮೊತ್ತವನ್ನು ಮರಳಿಸಲಾಗುತ್ತದೆ.

ಈ ಪಾಲಿಸಿಯಿಂದ ಬಡ್ಡಿ ಬರುವುದಿಲ್ಲವಾದರೂ ಡೆತ್ ಕವರೇಜ್ ಇರುವುದರಿಂದ ಉಪಯುಕ್ತ ಹೂಡಿಕೆ ಎನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರದ ಮಾತು
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಬಾಲ್ಯದ ದಿನಗಳಲ್ಲಿ ಮಿಠಾಯಿ, ತಂಬಿಟ್ಟು ತಿಂತಿರೋ ಕಥೆ ಬಿಚ್ಚಿಟ್ಟ ಸಿಎಂ!
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ