Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

Money secrets to achieve financial independence: ಹಣ ಗಳಿಸಬೇಕು, ಹಣ ಉಳಿಸಬೇಕು ಮತ್ತು ಹಣ ಹೂಡಿಕೆ ಮಾಡಬೇಕು. ಈ ಮೂಲಭೂತ ಅಂಶಗಳು ಹಣವಂತಿಕೆಗೆ ಅತ್ಯಗತ್ಯ. ಹಾಗೆಯೇ, ಬೇಡವಾದ ಖರ್ಚುಗಳಿಗೆ ಕಡಿವಾಣ ಹಾಕುವುದು, ಎಮರ್ಜೆನ್ಸಿ ಫಂಡ್ ರಚಿಸುವುದು, ಹೂಡಿಕೆಗಳನ್ನು ಆಟೊಮೇಟ್ ಮಾಡುವುದು ಇತ್ಯಾದಿ ಹಲವು ಸರಳ ಉಪಾಯಗಳನ್ನು ಅನುಸರಿಸುವುದು ಉತ್ತಮ.

Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ...
ಹಣ

Updated on: Feb 09, 2026 | 1:15 PM

ಶ್ರೀಮಂತಿಕೆ (rich) ಪಡೆಯುವುದು ನಾವು ಬಹುತೇಕ ಜನರು ಆಸೆ ಪಡುವ ಗುರಿ. ಆದರೆ, ಶ್ರೀಮಂತಿಕೆ ಸಾಧಿಸುವುದು ಸುಲಭವೂ ಹೌದು, ಕಷ್ಟವೂ ಹೌದು. ಶ್ರೀಮಂತರಾಗಲು ಮೂಲಭೂತ ಅಂಶಗಳೆಂದರೆ, ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಕೂಡ ಸಮತೋಲಿತವಾಗಿದ್ದರೆ ಬದುಕು ಚೆನ್ನ. ನೀವು ತಿಂಗಳಿಗೆ ನಾಲ್ಕೈದು ಲಕ್ಷ ರೂ ಸಂಪಾದಿಸಿ, ಅದರಲ್ಲಿ ಏನೂ ಉಳಿಸಲಿಲ್ಲವೆಂದರೆ ಪ್ರಯೋಜನ ಇರೋದಿಲ್ಲ. ನೀವು ತಿಂಗಳಿಗೆ 10,000 ರೂ ದುಡಿದು ಅದರಲ್ಲಿ 8,000 ರೂ ಉಳಿಸಿದರೂ ದೊಡ್ಡ ಪ್ರಯೋಜನವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತಿಳಿದಿರಬೇಕಾದ ಕೆಲ ಹಣಕಾಸು ಜಾಣ್ಮೆಯ ಮಾತುಗಳು ಇಲ್ಲಿವೆ…

ಹಣದ ಹರಿವು ನಿಯಂತ್ರಣದಲ್ಲಿರಲಿ….

ನಿಮಗೆ ಸಿಕ್ಕಾಪಟ್ಟೆ ಖರ್ಚು ಮಾಡುವ ಉಮೇದಿದ್ದರೆ ಅದಕ್ಕೆ ಕಡಿವಾಣ ಹಾಕಲು 50-30-20 ಸೂತ್ರ ಮಾಡಿಕೊಳ್ಳಿ. ಇಲ್ಲಿ 50 ಎಂದರೆ ಮನೆ ಬಾಡಿಗೆ, ಬಿಲ್​ಗಳು, ದಿನಸಿ ಇತ್ಯಾದಿ ಅತ್ಯಗತ್ಯ ವೆಚ್ಚಗಳಿಗೆ ಶೇ. 50 ಹಣ ಮೀಸಲಿಡಿ. ಮನರಂಜನೆ, ಪ್ರಯಾಣ, ಹೊರಗೆ ಊಟ ಇತ್ಯಾದಿ ಲಕ್ಷುರಿಗೆ ಶೇ. 30 ಹಣ ಎತ್ತಿಡಿ. ಇದು ಈ ಮಿತಿ ದಾಟದಂತೆ ನೋಡಿಕೊಳ್ಳಿ. ಇನ್ನು, ಶೇ. 20ರಷ್ಟು ಹಣವನ್ನು ಹೂಡಿಕೆಗೆ ಸಮರ್ಪಿಸಿ. ಹೂಡಿಕೆಯು ಇದಕ್ಕಿಂತ ಕಡಿಮೆ ಇರಬಾರದು. ನಿಮ್ಮ ಲಕ್ಷುರಿ ವೆಚ್ಚಗಳನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸಿ, ಆ ಹಣವನ್ನು ಹೂಡಿಕೆಗೆ ಸೇರಿಸುತ್ತಾ ಹೋಗಬಹುದು.

ಇದನ್ನೂ ಓದಿ: Mutual Funds: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ಹೂಡಿಕೆಯನ್ನು ಆಟೊಮೇಟ್ ಮಾಡಿ…

ನಿಮ್ಮ ಆದಾಯದಲ್ಲಿ ಕನಿಷ್ಠ ಶೇ. 20ರಷ್ಟಾದರೂ ಹಣವು ಉಳಿತಾಯವಾಗಬೇಕು. ಈ ಹಣ ಎತ್ತಿಡುವಷ್ಟರಲ್ಲಿ ಎಲ್ಲಾ ಖರ್ಚಾಗಿ ಹೋಗುತ್ತದೆ ಎನಿಸಿದರೆ ಈ ಕೆಳಗಿನ ಉಪಾಯ ಮಾಡಿ. ಸಂಬಳ ಬಂದ ಕೂಡಲೇ ಶೇ. 20ರಷ್ಟು ಹಣವನ್ನು ಬೇರೊಂದು ಸೇವಿಂಗ್ಸ್ ಅಕೌಂಟ್​ಗೆ ವರ್ಗಾಯಿಸಿ. ಅಥವಾ ಮ್ಯುಚುವಲ್ ಫಂಡ್ ಎಸ್​ಐಪಿಯಂತಹ ಹೂಡಿಕೆಗೆ ಆಟೊಮೇಟ್ ಮಾಡಿ.

ಸ್ಯಾಲರಿ ಹೈಕ್ ಆದರೆ ಏನು ಮಾಡಬೇಕು?

ಸಂಬಳ ಹೆಚ್ಚಾದರೆ, ಆ ಹೆಚ್ಚುವರಿ ಸಂಬಳ ಕಣ್ಣಿಗೆ ಕಾಣದಂತೆ ಖರ್ಚಾಗಿ ಹೋಗುವುದುಂಟು. ಅದಕ್ಕೆ ಅವಕಾಶ ಕೊಡಬೇಡಿ. ಸಂಬಳ ಹೆಚ್ಚಾದಾಗ ನಿಮ್ಮ ಜೀವನಶೈಲಿ ಮತ್ತು ವೆಚ್ಚ ಈ ಮೊದಲಿನಂತೆಯೇ ಮುಂದುವರಿಯಲಿ. ಆ ಹೆಚ್ಚುವರಿ ಸಂಬಳವನ್ನು ಉಳಿಸುತ್ತಾ ಹೋಗಬಹುದು.

ಅಧಿಕ ಬಡ್ಡಿಯ ಸಾಲ ತೀರಿಸಿ

ನಾವು ನಾನಾ ಕಾರಣಗಳಿಗೆ ಸಾಲ ಮಾಡಿರುತ್ತೇವೆ. ತುರ್ತಾಗಿ ಬೇಕೆಂದು ಪರ್ಸನಲ್ ಲೋನ್ ಪಡೆದುಕೊಂಡಿರುತ್ತೇವೆ. ಇವು ಅಧಿಕ ಬಡ್ಡಿ ಹೊಂದಿರುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಉಳಿದಾಗಲೂ ಅದಕ್ಕೆ ಅಧಿಕ ಬಡ್ಡಿ ಇರುತ್ತದೆ. ಮೊದಲಿಗೆ ಅತ್ಯಧಿಕ ಬಡ್ಡಿ ಇರುವ ಸಾಲವನ್ನು ತೀರಿಸಲು ಗಮನ ಕೊಡಿ.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

ನಿವೃತ್ತಿಯಾಗುವವರಿಗೆ 4 ಪರ್ಸೆಂಟ್ ರೂಲ್

ನೀವು ನಿವೃತ್ತಿಯಾದಾಗ ಲಂಪ್ಸಮ್ ಆಗಿ ಹಣ ಹೊಂದಿದಾಗ, ಅದನ್ನು ನಿಭಾಯಿಸಲು 4% ವಿತ್​ಡ್ರಾಯಲ್ ರೂಲ್ ನೆರವಿಗೆ ಬರುತ್ತದೆ. ನಿಮ್ಮ ಒಟ್ಟು ಫಂಡ್​ನಿಂದ ಮೊದಲ ವರ್ಷ ಶೇ. 4ರಷ್ಟು ಹಣವನ್ನು ವಿತ್​ಡ್ರಾ ಮಾಡಿದರೆ, ಆ ಫಂಡ್ ಕನಿಷ್ಠ 30 ವರ್ಷವಾದರೂ ಖಾಲಿಯಾಗದೇ ಉಳಿದಿರುತ್ತದೆ. ಅದು ಶೇ. 10-12ರಷ್ಟು ವಾರ್ಷಿಕ ರಿಟರ್ನ್ ನೀಡುತ್ತಿರುವ ಫಂಡ್ ಆಗಿದ್ದಿರಬೇಕು.

ಎಮರ್ಜೆನ್ಸಿ ಫಂಡ್

ಇದು ಬಹಳ ಮುಖ್ಯ. ಯಾರಿಗೆ ಬೇಕಾದರೂ ದಿಢೀರ್ ಖರ್ಚು ಎರಗಿಬರಬಹುದು. ಅಂಥದ್ದಕ್ಕೆಂದು ಒಂದಿಷ್ಟು ಹಣವನ್ನು ಪ್ರತ್ಯೇಕವಾಗಿ ಎತ್ತಿ ಇಟ್ಟಿರುವುದು ಬಹಳ ಒಳ್ಳೆಯದು. ನಿಮ್ಮ ಮಾಸಿಕ ಖರ್ಚಿನ ಆರು ಪಟ್ಟು ಹಣ ಇದಾಗಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ