Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಆಗಿರುವ ನ್ಯಾಷನಲ್ ಪೆನ್ಷನ್ ಸ್ಕೀಮ್ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರವಾ? ಬೇರೆಯವರೂ ಈ ಯೋಜನೆ ಹೇಗೆ ಪಡೆಯುವುದು?

NPS Updates: ಪಿಎಫ್​ಆರ್​ಡಿಎ ನಿರ್ವಹಿಸುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸರ್ಕಾರಿ ಉದ್ಯೋಗಿಗಳಷ್ಟೇ ಅಲ್ಲದೇ ಕಾರ್ಪೊರೇಟ್ ಉದ್ಯೋಗಿಗಳು ಹಾಗು ಇತರ ಸಾಮಾನ್ಯರೂ ಕೂಡ ಪಡೆಯಬಹುದು. ನ್ಯಾಷನಲ್ ಪೆನ್ಷನ್ ಸ್ಕೀಮ್ ಈಕ್ವಿಟಿಗೆ ಜೋಡಿತವಾದ ಯೋಜನೆಯಾಗಿದ್ದು ಇದರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಬ್ಯಾಂಕ್ ಹಾಗು ಪೋಸ್ಟ್ ಆಫೀಸ್​ಗಳಲ್ಲಿ ನೀವು ಎನ್​ಪಿಎಸ್ ಖಾತೆ ತೆರೆಯಬಹುದು. ನಿವೃತ್ತಿನ ನಂತರದ ಬದುಕಿನ ಭದ್ರತೆಗೆ ಇದು ಉತ್ತಮ ಯೋಜನೆ ಎನಿಸಿದೆ.

ಸೂಪರ್ ಹಿಟ್ ಆಗಿರುವ ನ್ಯಾಷನಲ್ ಪೆನ್ಷನ್ ಸ್ಕೀಮ್ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರವಾ? ಬೇರೆಯವರೂ ಈ ಯೋಜನೆ ಹೇಗೆ ಪಡೆಯುವುದು?
ಪೆನ್ಷನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2023 | 2:10 PM

ನ್ಯಾಷನಲ್ ಪೆನ್ಷನ್ ಸ್ಕೀಮ್ ದಿನೇ ದಿನೇ ಜನಪ್ರಿಯವಾಗುತ್ತಿದೆ. ಸರ್ಕಾರಿ ಉದ್ಯೋಗಿಗಳಿಗೆ ಈ ಹಿಂದೆ ಇದ್ದ ಪಿಂಚಣಿ ವ್ಯವಸ್ಥೆಯ ಬದಲಾಗಿ ಹೊಸದಾಗಿ ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು (National Pension System) ಜಾರಿಗೆ ತರಲಾಗಿತ್ತು. ಆದರೆ, ಈ ಯೋಜನೆಯನ್ನು ಈಗ ಎಲ್ಲರಿಗೂ ವಿಸ್ತರಿಸಲಾಗಿದೆ. ಭಾರತದ ಯಾವುದೇ ಪ್ರಜೆ ಈ ಎನ್​ಪಿಎಸ್ ಅನ್ನು ಪಡೆಯಬಹುದಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ಸಂಸ್ಥೆ ನ್ಯಾಷನಲ್ ಪೆನ್ಷಲ್ ಸಿಸ್ಟಂ ಅನ್ನು ನಿರ್ವಹಿಸುತ್ತದೆ. ಇದು ಮಾರುಕಟ್ಟೆ ಜೋಡಿತ ಸ್ಕೀಮ್ (Market Linked Scheme) ಆಗಿರುವುದರಿಂದ ದೀರ್ಘಾವಧಿಗೆ ಉತ್ತಮ ಲಾಭ ತರಬಲ್ಲುದು. ಹೀಗಾಗಿ, ಇದರ ಜನಪ್ರಿಯತೆ ಹೆಚ್ಚುತ್ತಿದೆ.

ಎನ್​ಪಿಎಸ್ ಯಾರಿಗೆಲ್ಲಾ ಇದೆ?

ನ್ಯಾಷನಲ್ ಪೆನ್ಷನ್ ಸಿಸ್ಟಂ ವಿವಿಧ ವರ್ಗದ ಜನರ ಅಗತ್ಯಗಳಿಗೆ ತಕ್ಕಂತೆ ವಿವಿಧ ಮಾದರಿಯ ಸ್ಕೀಮ್ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಒಂದು ಮಾಡೆಲ್, ಕಾರ್ಪೊರೇಟ್ ಕಂಪನಿಗಳಿಗೆ ಬೇರೊಂದು ಮಾಡಲ್, ಇತರ ಸಾಮಾನ್ಯರಿಗೆ ಬೇರಿನ್ನೊಂದು ಮಾದರಿಯ ಎನ್​ಪಿಎಸ್ ಇದೆ.

ಎನ್​ಪಿಎಸ್​ನಲ್ಲಿ ಟಯರ್1 ಮತ್ತು ಟಯರ್2 ಎಂದು ಎರಡು ಭಾಗ ಇದೆ. ಟಯರ್ 1 ಖಾತೆಯು ಪೆನ್ಷನ್ ಅಕೌಂಟ್ ಆಗಿರುತ್ತದೆ. ಇದರಲ್ಲಿರುವ ಹಣವನ್ನು ಹಿಂಪಡೆಯಲು ನಿರ್ಬಂಧಗಳಿರುತ್ತವೆ. ಟಯರ್2 ಐಚ್ಛಿಕವಾಗಿದ್ದು, ಈ ಖಾತೆಯಲ್ಲಿ ತೊಡಗಿಸುವ ಹಣವನ್ನು ಸುಲಭವಾಗಿ ವಿತ್​ಡ್ರಾ ಮಾಡಬಹುದು.

ಇದನ್ನೂ ಓದಿ: ಇಪಿಎಫ್ ಕ್ಲೈಮ್ ಅಥವಾ ರೀಫಂಡ್​ನಲ್ಲಿ ಸಮಸ್ಯೆಯಾಗಿದೆಯೇ? ದೂರುಗಳಿಗೆಂದೇ ಇಪಿಎಫ್​ನಿಂದ ವಿಶೇಷ ಪೋರ್ಟಲ್; ಇಲ್ಲಿ ಕಂಪ್ಲೇಂಟ್ ದಾಖಲಿಸುವ ಪ್ರಕ್ರಿಯೆ ತಿಳಿಯಿರಿ

ಸರ್ಕಾರಿ ಉದ್ಯೋಗಿಗಳಿಗೆ ಇರುವ ಎನ್​ಪಿಎಸ್ ಸ್ಕೀಮ್ ಪ್ರಕಾರ, ಉದ್ಯೋಗಿಯ ಸಂಬಳದ ಶೇ. 10ರಷ್ಟು ಹಣವನ್ನು ಎನ್​ಪಿಎಸ್ ಖಾತೆಗೆ ಜಮೆ ಮಾಡಲಾಗುತ್ತದೆ. ಸಂಸ್ಥೆಯ ಕೊಡುಗೆ ಶೇ. 14ರಷ್ಟು ಇರಬೇಕು.

ಜನಸಾಮಾನ್ಯರು ಎನ್​ಪಿಎಸ್ ಪಡೆಯುವುದು ಹೇಗೆ?

ಇನ್ನು, ಸರ್ವ ನಾಗರಿಕರ ಎನ್​ಪಿಎಸ್ ಮಾದರಿಯಲ್ಲಿ, 18 ವರ್ಷದಿಂದ 70 ವರ್ಷದವರೆಗಿನ ವಯಸ್ಸಿನವರು ಯೋಜನೆ ಪಡೆಯಬಹುದು. ಯಾವುದೇ ಪೋಸ್ಟ್ ಆಫೀಸ್​ನಲ್ಲಿ ಇದನ್ನು ಆರಂಭಿಸಬಹುದು. ಅಥವಾ ಆರ್​ಬಿಐ ನಿಗದಿಪಡಿಸಿದ ಕೆಲ ಬ್ಯಾಂಕುಗಳಲ್ಲೂ ನ್ಯಾಷನಲ್ ಪೆನ್ಷನ್ ಸಿಸ್ಟಂನ ಖಾತೆ ಆರಂಭಿಸಬಹುದು. ನೀವು ಎನ್​ಪಿಎಸ್ ಯೋಜನೆ ಆರಂಭಿಸಿದಾಗ ಪರ್ಮನೆಂಟ್ ರಿಟೈರ್ಮೆಂಟ್ ಅಕೌಂಟ್ ನಂಬರ್ (ಪಿಆರ್​ಎಎನ್) ಕೊಡಲಾಗುತ್ತದೆ.

ಇದನ್ನೂ ಓದಿ: ಉದ್ಯೋಗಿ ಆಗದೇ ಬ್ಯಾಂಕ್​ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ

ನೀವು ಎಲ್ಲಿಯೇ ಎನ್​ಪಿಎಸ್ ಮಾಡಿಸಿದರೂ, ಅದಕ್ಕೆ ಹಣವನ್ನು ಎಲ್ಲಿಂದ ಬೇಕಾದರೂ ತುಂಬಿಸಬಹುದು. ದೇಶದ ಯಾವುದೇ ಪೋಸ್ಟ್ ಆಫೀಸ್ ಶಾಖೆ, ಅಥವಾ ಯಾವುದೇ ಬ್ಯಾಂಕ್ ಕಚೇರಿಯಿಂದಲೂ ನೀವು ಹಣ ಪಾವತಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ