Post Office Schemes: ಸುರಕ್ಷಿತ ಹೂಡಿಕೆಗಳಿಗೆ ಬೇಕು ಪೋಸ್ಟ್ ಆಫೀಸ್ ಸ್ಕೀಮ್​ಗಳು; ಇಲ್ಲಿದೆ ಹಲವು ಆಯ್ಕೆ

|

Updated on: Jul 30, 2023 | 12:02 PM

Savings and Investments Options: ಸುಕನ್ಯ ಸಮೃದ್ಧಿ ಯೋಜನೆಯಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ಪೋಸ್ಟ್ ಆಫೀಸ್​ನಲ್ಲಿ ಹಲವು ಹೂಡಿಕೆ ಮತ್ತು ಉಳಿತಾಯ ಸ್ಕೀಮ್​ಗಳಿವೆ. ಅವುಗಳಲ್ಲಿ ಆಯ್ದ ಕೆಲ ಯೋಜನೆಗಳ ವಿವರ ಇಲ್ಲಿದೆ...

Post Office Schemes: ಸುರಕ್ಷಿತ ಹೂಡಿಕೆಗಳಿಗೆ ಬೇಕು ಪೋಸ್ಟ್ ಆಫೀಸ್ ಸ್ಕೀಮ್​ಗಳು; ಇಲ್ಲಿದೆ ಹಲವು ಆಯ್ಕೆ
ಪೋಸ್ಟ್ ಆಫೀಸ್
Follow us on

ಭಾರತದಲ್ಲಿ ಅಂಚೆ ಕಚೇರಿಗಳು (Post Office) ಈಗ ಕೇವಲ ಅಂಚೆಗಳನ್ನು ವಿಲೇವಾರಿ ಮಾಡುವುದಕ್ಕೆ ಸೀಮಿತವಾಗಿ ಉಳಿದಿಲ್ಲ. ಜನಸಾಮಾನ್ಯರಿಗೆ ಬಹಳಷ್ಟು ಉಳಿತಾಯ ಸ್ಕೀಮ್​ಗಳ ಆಯ್ಕೆ ಒದಗಿಸುತ್ತದೆ. ಸರ್ಕಾರಿ ಸ್ವಾಮ್ಯದ ಇಂಡಿಯಾ ಪೋಸ್ಟ್ ಸಂಸ್ಥೆ (India Post) ನಿರ್ವಹಿಸುವ ಈ ಸೇವಿಂಗ್ ಮತ್ತು ಹೂಡಿಕೆ ಯೋಜನೆಗಳು ಸುರಕ್ಷಿತ ಆಯ್ಕೆ ಜೊತೆಗೆ ಉತ್ತಮ ರಿಟರ್ನ್ ಕೂಡ ಕೊಡಬಲ್ಲುವು. ಅನೇಕ ನಿಶ್ಚಿತ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿ ಕೊಡುತ್ತವೆ ಕೆಲ ಪೋಸ್ಟ್ ಆಫೀಸ್ ಸ್ಕೀಮ್​ಗಳು. ಶೇ. 7.5ರಿಂದ ಶೇ. 8ಕ್ಕಿಂತ ಹೆಚ್ಚಿನ ವಾರ್ಷಿಕ ಬಡ್ಡಿ ದರದಲ್ಲಿ ನಿಮ್ಮ ಹಣವನ್ನು ಇವು ಬೆಳೆಸಬಲ್ಲುವು.

ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆ

ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಜನಪ್ರಿಯ ಹೂಡಿಕೆ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಒಂದು. ಈ ಸ್ಕೀಮ್​ನಲ್ಲಿ ವರ್ಷಕ್ಕೆ 7.50 ರ ದರದಲ್ಲಿ ಹಣ ಬೆಳೆಯುತ್ತದೆ. ಇದು 10 ವರ್ಷ 3 ತಿಂಗಳಿಗೆ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸುಬಲ್ಲುದು. 18 ವರ್ಷಕ್ಕಿಂತ ಹೆಚ್ಚಿನ ಯಾವುದೇ ವಯಸ್ಸಿನವರೂ ಈ ಸ್ಕೀಮ್ ಪಡೆಯಬಹುದು. ಕನಿಷ್ಠ ಹೂಡಿಕೆ 10,000 ರೂ ಆಗಿರುತ್ತದೆ.

ಸುಕನ್ಯ ಸಮೃದ್ಧಿ ಯೋಜನೆ

10 ವರ್ಷದೊಳಗಿನ ಹೆಣ್ಮಗುವಿನ ಹೆಸರಿನಲ್ಲಿ ಪಡೆಯಬಹುದಾದ ಸ್ಕೀಮ್ ಸುಕನ್ಮ ಸಮೃದ್ಧಿ ಯೋಜನೆ. ಇದರಲ್ಲಿ ನಮ್ಮ ಹೂಡಿಕೆಗೆ ವರ್ಷಕ್ಕೆ ಶೇ. 8ರಷ್ಟು ಬಡ್ಡಿ ಕೊಡಲಾಗುತ್ತದೆ.

ಇದನ್ನೂ ಓದಿ: Post Office: ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಮಸಾಹಿಕೋ ಮೆಟೋಕಿ

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್​ಸಿಎಸ್​ಎಸ್)

ಹಿರಿಯ ನಾಗರಿಕರಿಗೆಂದು ರೂಪಿಸಲಾದ ಈ ಸ್ಕೀಮ್​ನಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಸಿನವರು ಹೂಡಿಕೆ ಮಾಡಬಹುದು. ಶೇ. 8.2ರಷ್ಟು ಬಡ್ಡಿ ಒದಗಿಸುತ್ತದೆ ಈ ಸ್ಕೀಮ್.

ನ್ಯಾಷನಲ್ ಸೇವಿಂಗ್ಸ್ ಸ್ಕೀಮ್

ನ್ಯಾಷನಲ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಹೂಡಿಕೆ 100 ರೂನಿಂದ ಆರಂಭವಾಗಿ 1.5 ಲಕ್ಷ ರೂವರೆಗೂ ಮಾಡಬಹುದು. ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್

ಅಂಚೆ ಕಚೇರಿಯ ಜನಪ್ರಿಯ ಹೂಡಿಕೆ ಸ್ಕೀಮ್​ಗಳಲ್ಲಿ ಅದರ ಟೈಮ್ ಡೆಪಾಸಿಟ್ ಯೋಜನೆ ಒಂದು. ಬ್ಯಾಂಕುಗಳಲ್ಲಿರುವ ಫಿಕ್ಸೆಡ್ ಡೆಪಾಸಿಟ್​ನಂತೆ ಅಂಚೆ ಕಚೇರಿಯಲ್ಲಿ ಟೈಮ್ ಡೆಪಾಸಿಟ್ ಇದೆ. ಈ ಅವಧಿ ಠೇವಣಿಯಲ್ಲಿ 1ರಿಂದ 5 ವರ್ಷದವರೆಗೆ ಆಯ್ಕೆಗಳಿವೆ. 5 ವರ್ಷದ ಟೈಮ್ ಡೆಪಾಸಿಟ್​ಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Mahila Samman Savings scheme: ಮಹಿಳಾ ಸಮ್ಮಾನ್ ಸೇವಿಂಗ್ ಸ್ಕೀಮ್: 2 ವರ್ಷಕ್ಕೆ ಮೆಚ್ಯೂರಿಟಿ; ಬಡ್ಡಿ ಎಷ್ಟು? ತೆರಿಗೆ ಬೀಳುತ್ತಾ?

ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಅಕೌಂಟ್

ಬ್ಯಾಂಕುಗಳಲ್ಲಿರುವ ಆರ್​ಡಿ ಸ್ಕೀಮ್​ಗಳಂತೆ ಅಂಚೆ ಕಚೇರಿಯಲ್ಲೂ ರಿಕರಿಂಗ್ ಡೆಪಾಸಿಟ್ ಅವಕಾಶ ಇದೆ. ಐದು ವರ್ಷದ ಆರ್​ಡಿಗೆ ವರ್ಷಕ್ಕೆ ಶೇ. 6.20ರಷ್ಟು ಬಡ್ಡಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ