ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

Sukanya Samriddhi Yojana details: ಸ್ಮಾಲ್ ಸೇವಿಂಗ್ ಸ್ಕೀಮ್ ಎನಿಸಿದ ಸುಕನ್ಯಾ ಸಮೃದ್ಧಿ ಅಕೌಂಟ್ 10 ವರ್ಷದೊಳಗಿನ ವಯಸ್ಸಿನ ಬಾಲಕಿಯರಿಗೆಂದು ಇರುವುದು. ಅತಿಹೆಚ್ಚು ಬಡ್ಡಿ ನೀಡುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇದೂ ಒಂದು. ಹೂಡಿಕೆ ಅವಧಿ 15 ವರ್ಷ, ಮೆಚ್ಯೂರಿಟಿ ಅವಧಿ 21 ವರ್ಷ. ವಾರ್ಷಿಕವಾಗಿ ಹೂಡಿಕೆ ಮಿತಿ ಒಂದೂವರೆ ಲಕ್ಷ ರೂ. ಒಟ್ಟು 76 ಲಕ್ಷ ರೂವರೆಗೆ ರಿಟರ್ನ್ಸ್ ಪಡೆಯುವ ಅವಕಾಶ.

ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?
ಹೆಣ್ಮಗು
Image Credit source: Shutterstock

Updated on: Mar 24, 2026 | 10:05 PM

ಸರ್ಕಾರದಿಂದ ನಡೆಸಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Saving Schemes) ಹೆಚ್ಚು ಬಡ್ಡಿ ಕೊಡುವುದು ಸುಕನ್ಯಾ ಸಮೃದ್ಧಿ ಸ್ಕೀಮ್ (Sukanya Samriddhi Yojana). 2014-15ರಲ್ಲಿ ಆರಂಭವಾದ ಈ ಯೋಜನೆಯನ್ನು ಬಾಲಕಿಯರ ಭವಿಷ್ಯದ ಭದ್ರತೆಗೆಂದು ರೂಪಿಸಲಾಗಿದೆ. 10 ವರ್ಷದೊಳಗಿನ ವಯಸ್ಸಿನ ಬಾಲಕಿಯರ ಹೆಸರಿನಲ್ಲಿ ಸುಕನ್ಯಾ ಸಮೃದ್ದಿ ಸ್ಕೀಮ್​ನ ಅಕೌಂಟ್ ತೆರೆಯಬಹುದು. ಯಾವುದಾದರೂ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಅಕೌಂಟ್ ಆರಂಭಿಸಬಹುದು.

ಹೂಡಿಕೆ ಅವಧಿ 15 ವರ್ಷ ಇರುತ್ತದೆ. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಅಂದರೆ, ಇವತ್ತು ನೀವು ಅಕೌಂಟ್ ತೆರೆದರೆ, 2031ರವರೆಗೆ ಪ್ರತೀ ವರ್ಷ ನೀವು ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ. ಅದಾದ ಬಳಿಕ ಹೂಡಿಕೆ ನಿಲ್ಲಿಸಬೇಕು. ಆದರೆ, ಆ ಅಕೌಂಟ್ 21 ವರ್ಷದವರೆಗೂ ಚಾಲನೆಯಲ್ಲಿರುತ್ತದೆ. ಅಂದರೆ 2037ಕ್ಕೆ ಮೆಚ್ಯೂರ್ ಆಗುತ್ತದೆ. ಅಲ್ಲಿಯವರೆಗೆ ವಾರ್ಷಿಕ ಬಡ್ಡಿ ಜಮೆ ಆಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಸುಕನ್ಯಾ ಸಮೃದ್ದಿ ಯೋಜನೆ 2014-15ರಲ್ಲಿ ಆರಂಭವಾಗಿದೆ. ಆ ವರ್ಷ 4.2 ಲಕ್ಷ ಮಂದಿ ಹೂಡಿಕೆ ಮಾಡಿದ್ದರು. 2024-25ರಲ್ಲಿ 4.25 ಕೋಟಿ ಅಕೌಂಟ್​ಗಳು ಆರಂಭಗೊಂಡಿವೆ. ಹೆಚ್ಚೂಕಡಿಮೆ 3 ಲಕ್ಷ ಕೋಟಿ ರೂ ಹಣದ ಹೂಡಿಕೆ ಆಗಿದೆ.

2014-15ರಲ್ಲಿ ಸುಕನ್ಯಾ ಸಮೃದ್ಧಿ ಸ್ಕೀಮ್​ನಲ್ಲಿ ಶೇ. 9.1 ಬಡ್ಡಿ ನೀಡಲಾಗುತ್ತಿತ್ತು. 2015ರ ಏಪ್ರಿಲ್ 1ರಂದು ಅದು ಶೇ. 9.2ಕ್ಕೆ ಏರಿಸಲಾಯಿತು. ಅದಾದ ಬಳಿಕ ಬಡ್ಡಿಯಲ್ಲಿ ಏರುಪೇರುಗಳಾಗಿವೆ. 2020ರ ಏಪ್ರಿಲ್ 1ರಂದು ಶೇ. 7.6 ಬಡ್ಡಿ ಕನಿಷ್ಠ ಮಟ್ಟದ್ದಾಗಿದೆ. 2024ರ ಜನವರಿ 1ರಿಂದ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ.

ಒಂದು ವೇಳೆ 2014-15ರಲ್ಲಿ ನೀವು ಈ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂ ವಾರ್ಷಿಕ ಹೂಡಿಕೆ ಮಾಡಿದ್ದರೆ ನಿಮಗೆ ಎಷ್ಟು ರಿಟರ್ನ್ ಸಿಗಬಹುದು? ಅಲ್ಲಿಂದ ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಬಡ್ಡಿದರಗಳನ್ನು ಪರಿಗಣಿಸುತ್ತಾ, ಮತ್ತು ಈಗಿರುವ ಶೇ. 8.2ರ ಬಡ್ಡಿದರವೇ ಮುಂದುವರಿಯುತ್ತದೆ ಎಂದು ಭಾವಿಸುತ್ತಾ ಲೆಕ್ಕ ಹಾಕಿ ನೋಡಿ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

2014-15ರಲ್ಲಿ ಹೂಡಿಕೆ ಆರಂಭಿಸಿದರೆ 2035-36ಕ್ಕೆ ಅದು ಮೆಚ್ಯೂರ್ ಆಗುತ್ತದೆ. 15 ವರ್ಷದ ಪಾವತಿ ಅವಧಿಯಲ್ಲಿ ನೀವು ಮಾಡಿರುವ ಒಟ್ಟು ಹೂಡಿಕೆ 22.50 ಲಕ್ಷ ರೂ ಆಗಿರುತ್ತದೆ. ಅದು ವಾರ್ಷಿಕ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದಾಗ. 2035-36ರಲ್ಲಿ ನಿಮ್ಮ ಅಕೌಂಟ್ ಮೆಚ್ಯೂರ್ ಆದಾಗ ನಿಮಗೆ ಸಿಗುವ ಒಟ್ಟು ರಿಟರ್ನ್ 76 ಲಕ್ಷ ರೂ ಆಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us