
ಥೀಮ್ಯಾಟಿಕ್ ಇಟಿಎಫ್ಗಳ ಬಗ್ಗೆ ನೀವು ಕೇಳಿರಬಹುದು. ಇತ್ತೀಚೆಗೆ ಹೆಚ್ಚೆಚ್ಚು ಜನಪ್ರಿಯತೆ ಪಡೆಯುತ್ತಿರುವ ಹೂಡಿಕೆ ಆಯ್ಕೆಗಳಲ್ಲಿ ಇದೂ ಒಂದು. ನಿರ್ದಿಷ್ಟ ತತ್ವ, ಉದ್ಯಮ ಅಥವಾ ಟ್ರೆಂಡ್ನಲ್ಲಿ ಹೂಡಿಕೆ ಮಾಡುವ ಇಟಿಎಫ್ಗಳನ್ನು ಥೀಮ್ಯಾಟಿಕ್ ಇಟಿಎಫ್ ಎನ್ನುತ್ತಾರೆ. ಇಂಥ ಇಟಿಎಫ್ಗಳು ಹೆಚ್ಚು ನಿರ್ದಿಷ್ಟವಾಗಿರುತ್ತವೆ.
ಥಿಮ್ಯಾಟಿಕ್ ಇಟಿಎಫ್ಗಳು ನಿಫ್ಟಿ50ಯಂತಹ ವಿಸ್ತೃತ ಮಾರುಕಟ್ಟೆ ಸೂಚ್ಯಂಕಗಳಲ್ಲಿ ಹೂಡಿಕೆ ಮಾಡುವ ಬದಲು ನಿರ್ದಿಷ್ಟ ಥೀಮ್ ಅನ್ನು ಆಯ್ದುಕೊಳ್ಳುತ್ತವೆ. ಥೀಮ್ಯಾಟಿಕ್ ಫಂಡ್ಗಳು ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತವೆ? ಇಂಥ ಇಟಿಎಫ್ಗಳಲ್ಲಿ ಹೂಡಿಕೆ ಮಾಡುವಾಗ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು? ಈ ಎಲ್ಲಾ ಮಾಹಿತಿಯನ್ನು ನೀವು ಕೆಳಗೆ ನೋಡಬಹುದು.
ಆಗಲೇ ತಿಳಿಸಿದಂತೆ ಥೀಮ್ಯಾಟಿಕ್ ಇಟಿಎಫ್ಗಳು ಬ್ರಾಡ್ ಮಾರ್ಕೆಟ್ ಇಂಡೆಕ್ಸ್ ಬದಲು ನಿರ್ದಿಷ್ಟ ಥೀಮ್ನಲ್ಲಿ ಹೂಡಿಕೆ ಮಾಡುತ್ತವೆ. ಥೀಮ್ ಎನ್ನುವುದಕ್ಕೆ ನಿದರ್ಶನ ನೀಡುವುದಾದರೆ, ಮ್ಯಾನುಫ್ಯಾಕ್ಚರಿಂಗ್, ಫೈನಾನ್ಷಿಯಲ್ ಸರ್ವಿಸಸ್, ಪರಿಸರ, ಎಲೆಕ್ಟ್ರಿಕ್ ವಾಹನ, ನವೀಕರಣ ಇಂಧನ ಇತ್ಯಾದಿಯನ್ನು ಹೆಸರಿಸಬಹುದು.
ಇದನ್ನೂ ಓದಿ: ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್ನ ಪ್ರಯೋಜನಗಳಿವು…
ಥೀಮ್ಯಾಟಿಕ್ ಇಟಿಎಫ್ಗಳು ದೀರ್ಘಾವಧಿಯಲ್ಲಿ ತಮ್ಮ ಬೆಂಚ್ಮಾರ್ಕ್ಗೆ ಸಮೀಪದಷ್ಟು ರಿಟರ್ನ್ ತರಲು ಯತ್ನಿಸುತ್ತವೆ. ಆದರೆ, ಇಂಥ ಇಟಿಎಫ್ಗಳಲ್ಲಿ ರಿಸ್ಕ್ ಅಂಶ ಇಲ್ಲದೇ ಇಲ್ಲ. ವಿಸ್ತೃತ ಮಾರುಕಟ್ಟೆಗಿಂತ ನಿರ್ದಿಷ್ಟ ಥೀಮ್ನ ಇಟಿಎಫ್ ಹೆಚ್ಚು ಸಂಚಲನಶೀಲವಾಗಿರಬಹುದು. ಅಂದರೆ ಹೆಚ್ಚು ಅಲುಗಾಟ ಆಗಬಹುದು. ಹೀಗಾಗಿ, ಥೀಮ್ಯಾಟಿಕ್ ಇಟಿಎಫ್ನಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಸಂಭಾವ್ಯ ಅಪಾಯಗಳ ಬಗ್ಗೆ ಮೊದಲೇ ತಿಳಿದಿರುವುದು ಉತ್ತಮ.
(ಗಮನಿಸಿ: ಈ ಲೇಖನದಲ್ಲಿ ಷೇರು ವಹಿವಾಟಿನ ಬಗ್ಗೆ ಮಾಹಿತಿ ನೀಡಲಾಗಿದೆಯೇ ಹೊರತು, ನಿರ್ದಿಷ್ಟ ಹೂಡಿಕೆಗೆ ಯಾವ ಶಿಫಾರಸುಗಳನ್ನು ಮಾಡಲಾಗಿಲ್ಲ.)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ