ಬಹಳ ಜನರಿಗೆ ಈಗಲೂ ಪ್ರಮುಖ ಹೂಡಿಕೆ ಸ್ಕೀಮ್ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಒಂದು. ಬಹಳ ನಿಶ್ಚಿತ ಮತ್ತು ಸುರಕ್ಷಿತವಾದ ಇನ್ವೆಸ್ಟ್ಮೆಂಟ್ ಪ್ಲಾನ್ ಆಗಿರುವ ಫಿಕ್ಸೆಡ್ ಡೆಪಾಸಿಟ್ ಈಗ ಹೆಚ್ಚು ಜನರನ್ನು ಆಕರ್ಷಿಸತೊಡಗಿದೆ. ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಆಗುತ್ತಿರುವುದು ಹೂಡಿಕೆದಾರರು ಸಾಂಪ್ರದಾಯಿಕ ಹೂಡಿಕೆ ಯಂತ್ರಗಳತ್ತ ವಾಲುತ್ತಿದ್ದಾರೆ. ಬ್ಯಾಂಕುಗಳಲ್ಲಿ ಫಂಡಿಂಗ್ ಅವಶ್ಯಕತೆ ಬಹಳ ಇರುವುದರಿಂದ ಈಗ ನಿಶ್ಚಿತ ಠೇವಣಿಗಳಿಗೆ ಉತ್ತಮ ಬಡ್ಡಿ ಆಫರ್ ಮಾಡಲಾಗಿದೆ. ಪ್ರಮುಖ ಬ್ಯಾಂಕುಗಳು ಶೇ. 7ರಿಂದ 8ರಷ್ಟು ಬಡ್ಡಿಯನ್ನು ಎಫ್ಡಿಗೆ ನೀಡುತ್ತವೆ. ಇನ್ನೂ ಹೆಚ್ಚಿನ ಬಡ್ಡಿ ಸಿಗಬೇಕೆಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು.
ಕರ್ನಾಟಕದಲ್ಲಿ ಬಹಳಷ್ಟು ಒಳ್ಳೆಯ ಸಹಕಾರಿ ಬ್ಯಾಂಕುಗಳಿವೆ. ಇಲ್ಲಿ ಶೇ. 9ರ ಆಸುಪಾಸಿನ ದರದಷ್ಟು ಬಡ್ಡಿಯನ್ನು ಎಫ್ಡಿ ಪ್ಲಾನ್ಗಳಿಗೆ ನೀಡಲಾಗುತ್ತದೆ. ಆದರೆ, ಕೋ ಆಪರೇಟಿವ್ ಬ್ಯಾಂಕುಗಳು ಬಹಳ ರಿಸ್ಕಿ ಎಂದು ಭಾವಿಸುವವರಿಗೆ ಉತ್ತಮ ಪರ್ಯಾಯ ಆಯ್ಕೆ ಎಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು. ಈ ಕಿರು ಹಣಕಾಸು ಬ್ಯಾಂಕುಗಳು ಆರ್ಬಿಐನಿಂದ ಮಾನ್ಯತೆ ಹೊಂದಿರುತ್ತವೆ. ಶೇ. 8ರಿಂದ 9ರಷ್ಟು ಎಫ್ಡಿ ದರಗಳನ್ನು ಹೊಂದಿರುತ್ತವೆ. ಎಸ್ಬಿಐ, ಎಚ್ಡಿಎಫ್ಸಿ ಇತ್ಯಾದಿ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಿಗೆ ಹೋಲಿಸಿದರೆ ಈ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ದರ ಉತ್ತಮವಾಗಿರುತ್ತದೆ.
ಇದನ್ನೂ ಓದಿ: DTI ratio: ಪರ್ಸನಲ್ ಲೋನ್: ನಿಮ್ಮ ಡಿಟಿಐ ರೇಶಿಯೋ ಪರಿಶೀಲಿಸಿ ನಿರ್ಧರಿಸುತ್ತದೆ ಬ್ಯಾಂಕು
ಇಲ್ಲಿ ಹಿರಿಯ ನಾಗರಿಕರ ಠೇವಣಿಗಳಿಗೆ ಸಾಮಾನ್ಯವಾಗಿ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರ ಒಂದು ವರ್ಷದ ಎಫ್ಡಿಗಳಿಗೆ ಶೇ. 9ರಷ್ಟು ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Mon, 18 November 24