AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಒಂದು ರೂಪಾಯಿ ನೋಟಿಗೆ ಬರೋಬ್ಬರಿ ಏಳು ಲಕ್ಷ ರೂ ಬೆಲೆ; ಏನಿದರ ವೈಶಿಷ್ಟ್ಯ ನೋಡಿ…

Rs 1 note sold for Rs 7 lakh: ಕಾಯಿನ್ ಬಜಾರ್ ಪ್ಲಾಟ್​ಫಾರ್ಮ್​ನಲ್ಲಿ ಇತ್ತೀಚೆಗೆ ಒಂದು ರೂ ಹಳೆಯ ನೋಟೊಂದು ಏಳು ಲಕ್ಷ ರೂಗೆ ಮಾರಾಟವಾಗಿದೆ. ಸ್ವಾತಂತ್ರ್ಯಪೂರ್ವದ ಬ್ರಿಟಿಷರ ಆಡಳಿತದ ವೇಳೆ, 1935ರಲ್ಲಿ ಈ ಒಂದು ರೂ ನೋಟನ್ನು ಮುದ್ರಿಸಲಾಗಿತ್ತು. ಈಗ ಚಲಾವಣೆಯಲ್ಲಿ ಇಲ್ಲದ ಹಳೆಯ ನಾಣ್ಯ, ನೋಟುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇರುತ್ತದೆ.

ಈ ಒಂದು ರೂಪಾಯಿ ನೋಟಿಗೆ ಬರೋಬ್ಬರಿ ಏಳು ಲಕ್ಷ ರೂ ಬೆಲೆ; ಏನಿದರ ವೈಶಿಷ್ಟ್ಯ ನೋಡಿ...
ಒಂದು ರೂ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2024 | 12:13 PM

Share

ನವದೆಹಲಿ, ನವೆಂಬರ್ 7: ನಿಮಗೆ ಕಾಯಿನ್ ಕಲೆಕ್ಷನ್, ಕರೆನ್ಸಿ ಕಲೆಕ್ಷನ್ ಹವ್ಯಾಸ ಇದ್ದರೆ, ಅವು ಎಷ್ಟು ಅಮೂಲ್ಯ ಎಂಬುದು ಗೊತ್ತಿರುತ್ತದೆ. ಹಳೆಯ ವಸ್ತುಗಳಿಗೆ ಡಿಮ್ಯಾಂಡ್ ಜಾಸ್ತಿ ಇದೆ. ಅದರಲ್ಲೂ ಪುರಾತನ ಶಿಲ್ಪಗಳು, ಹಳೆಯ ಕಾಯಿನ್, ಹಳೆಯ ನೋಟು ಇವೆಲ್ಲಕ್ಕೂ ಬೇಡಿಕೆ ಇದೆ. ಒಂದು ಪೈಸೆ ನಾಣ್ಯ, 5 ಪೈಸೆ ನಾಣ್ಯ, 25 ಪೈಸೆ ನಾಣ್ಯ, ಒಂದು ಆಣಿ ನಾಣ್ಯ ಇತ್ಯಾದಿ ಇವೆಲ್ಲವೂ ಈಗ ಸಿಗುವುದಿಲ್ಲ. ಅವುಗಳನ್ನು ಹೊಂದಿದವರು ಶ್ರೀಮಂತರಾಗಬಹುದು. ಕಾಯಿನ್ ಬಜಾರ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಇವುಗಳನ್ನು ಖರೀದಿಸಬಹುದು, ಮಾರಬಹುದು.

ಕಾಯಿನ್ ಬಜಾರ್​ನಲ್ಲಿ ಹಳೆಯ ಒಂದು ರೂ ಮುಖಬೆಲೆಯ ನೋಟೊಂದು ಆನ್​ಲೈನ್​ನಲ್ಲಿ ಏಳು ಲಕ್ಷ ರೂಗೆ ಮಾರಾಟವಾಗಿ ಅಚ್ಚರಿ ಮೂಡಿಸಿತು. ಒಂದು ರೂ ನೋಟನ್ನು ಈಗಿನ ತಲೆಮಾರಿನವರೆಲ್ಲರೂ ನೋಡಿರಬಹುದು. ಆದರೆ, ಕಾಯಿನ್ ಬಜಾರ್​ನಲ್ಲಿ ಹರಾಜಿನಲ್ಲಿ ಇದ್ದ ಒಂದು ರೂ ನೋಟು ಸಾಮಾನ್ಯವಾದುದಲ್ಲ. ಅದು ಬ್ರಿಟಿಷರ ಕಾಲದಲ್ಲಿ ಮುದ್ರಣವಾಗಿದ್ದ ನೋಟು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಸಖತ್ ಹೆಚ್ಚಳ; ವಿಶ್ವ ಶ್ರೀಮಂತರ ಪಟ್ಟಿ

ಹೆಚ್ಚೂಕಡಿಮೆ 90 ವರ್ಷದ ಹಿಂದೆ, 1935ರಲ್ಲಿ ಒಂದು ರೂ ನೋಟನ್ನು ಮುದ್ರಿಸಲಾಗಿತ್ತು. ಅಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಜೆಡಬ್ಲ್ಯು ಕೆಲ್ಲಿ ಅವರ ಹಸ್ತಾಕ್ಷರ ಅದರಲ್ಲಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬಿಡುಗಡೆ ಆಗಿದ್ದ ಆ ಒಂದು ರೂ ನೋಟು ಈಗ ಬಹಳ ಕಡಿಮೆ ಮಂದಿಯ ಸುಪರ್ದಿಯಲ್ಲಿದೆ. ಈ ಒಂದು ನೋಟಿಗೆ ಕಾಯಿನ್ ಬಜಾರ್​ನಲ್ಲಿ ಏಳು ಲಕ್ಷ ರೂ ಬೆಲೆ ಸಿಕ್ಕಿದೆ.

ಬೇರೆ ಬೇರೆ ಕರೆನ್ಸಿ, ನೋಟುಗಳಿಗೆ ಉತ್ತಮ ಬೇಡಿಕೆ ಇದ್ದೇ ಇದೆ. ಹೀಗಾಗಿ, ಕಾಯಿನ್ ಕಲೆಕ್ಷನ್ ಹವ್ಯಾಸ ಇರುವವರು ಯಾವುದೇ ಕಾಲಘಟ್ಟದಲ್ಲಿ ಮುದ್ರಣವಾಗುವ ಪ್ರತಿಯೊಂದು ನೋಟು, ನಾಣ್ಯಗಳನ್ನು ಎತ್ತಿಟ್ಟುಕೊಳ್ಳುವುದುಂಟು. ಹಲವು ವರ್ಷಗಳ ಬಳಿಕ ಇವುಗಳಿಗೆ ಡಿಮ್ಯಾಂಡ್ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: 48 ಲಕ್ಷ ಮದುವೆ, 6 ಲಕ್ಷ ಕೋಟಿ ರೂ ವ್ಯವಹಾರ… ಅಬ್ಬಬ್ಬ ವಿವಾಹ ‘ಬಿಸಿನೆಸ್’ ಇದು…

ಈ ಹಳೆಯ ನಾಣ್ಯಗಳು, ನೋಟುಗಳು ಚಲಾವಣೆಗೆ ಅಯೋಗ್ಯವಾಗಿರುತ್ತವೆ. ಹಣಕಾಸು ಮಾರುಕಟ್ಟೆಯಲ್ಲಿ ಇವುಗಳಿಗೆ ಮೌಲ್ಯ ಇಲ್ಲ. ಯಾವ ವಸ್ತುಗಳನ್ನು ಖರೀದಿಸಲು ಬರುವುದಿಲ್ಲ. ಆದರೆ, ಕಾಯಿನ್ ಕಲೆಕ್ಷನ್ ಮಾರುಕಟ್ಟೆಯಲ್ಲಿ ಇವುಗಳಿಗೆ ಒಳ್ಳೆಯ ಬೇಡಿಕೆ ಇರುತ್ತದೆ. ಕಾಯಿನ್ ಬಜಾರ್, ಕಲೆಕ್ಟರ್ ಬಜಾರ್ ಮೊದಲಾದ ಪ್ಲಾಟ್​ಫಾರ್ಮ್​ಗಳಲ್ಲಿ ಇವುಗಳನ್ನು ಮಾರಬಹುದು, ಖರೀದಿಸಬಹುದು. ಫ್ಲಿಪ್​ಕಾರ್ಟ್ ಮೊದಲಾದೆಡೆಯೂ ಇವು ಲಭ್ಯ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ