AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips for Money: ಹೆಚ್ಚು ಹಣ ಗಳಿಸಲು, ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಲು ಈ ವಾಸ್ತು ಟಿಪ್ಸ್ ಅನುಸರಿಸಿ

ಉತ್ತಮ ಹಣ ಗಳಿಕೆಗೆ ಮತ್ತು ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಲು ವಾಸ್ತು ತಜ್ಞರು ನೀಡಿರುವ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Vastu Tips for Money: ಹೆಚ್ಚು ಹಣ ಗಳಿಸಲು, ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಲು ಈ ವಾಸ್ತು ಟಿಪ್ಸ್ ಅನುಸರಿಸಿ
ಪ್ರಾತಿನಿಧಿಕ ಚಿತ್ರImage Credit source: rastriyakhabars.com
TV9 Web
| Edited By: |

Updated on: Jan 18, 2023 | 12:35 PM

Share

ಕೋವಿಡ್ ಸಾಂಕ್ರಾಮಿಕವು (Covid-19) ಕಳೆದ 2-3 ವರ್ಷಗಳಲ್ಲಿ ಜನರ ಆರೋಗ್ಯ, ಹಣಕಾಸಿನ (Finance) ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ ಇನ್ನು ಅನೇಕ ಮಂದಿ ಸಂಪತ್ತನ್ನು (Wealth) ಕಳೆದುಕೊಂಡಿದ್ದಾರೆ. ಹಲವಾರು ಜನರಿಗೆ ಸಾಂಕ್ರಾಮಿಕದಿಂದಾಗಿ ಅನಾರೋಗ್ಯ, ಸಂಪತ್ತು ನಾಶ ಆಗಿದೆ. ಉತ್ತಮ ಆರೋಗ್ಯ ಮತ್ತು ಹಣ ವೃದ್ಧಿಗೆ ಮನೆಯ ವಾಸ್ತು (Vatu Tips) ಕೂಡ ಕಾರಣ ಎಂದಿದ್ದಾರೆ ವಾಸ್ತು ತಜ್ಞೆ ದೀಪಾ ಜೋಶಿ. ಗುರುದೇವ್ ಕಾಶ್ಯಪ್ ಅವರು ಸ್ಥಾಪಿಸಿರುವ ‘ಅಖಿಲ ಭಾರತ ಅತೀಂದ್ರಿಯ ವಿಜ್ಞಾನಗಳ ಸಂಸ್ಥೆ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಾ ಜೋಶಿ, ಹಣಕಾಸಿಗೆ ಸಂಬಂಧಿಸಿದ ವಾಸ್ತು ವಿಚಾರಗಳ ಬಗ್ಗೆ ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಮನೆಯೊಳಗಿನ ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಮಹತ್ವ ಇದೆ. ಅಡುಗೆ ಮಾಡುವ, ತಿನ್ನುವ, ಕುಳಿತುಕೊಳ್ಳುವ, ಕೆಲಸ ಮಾಡುವ ಮತ್ತು ಮಲಗುವ ಜಾಗಗಳಿಗೆ ಅವುಗಳದ್ದೇ ಆದ ಮಹತ್ವ ಇದೆ. ಇವುಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಮನುಷ್ಯನ ದೇಹದಲ್ಲಿ ವಿವಿಧ ಅಂಗಗಳಿಗೆ ಹೇಗೆ ಅದರದ್ದೇ ಆದ ಮಹತ್ವ ಇದೆಯೋ ಮನೆಯೊಳಗಿನ ಜಾಗಗಳೂ ಹಾಗೆಯೇ. ಮನೆಯ ವಿವಿಧ ಭಾಗಗಳ ವಾಸ್ತು ಕೂಡ ಮುಖ್ಯ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಗಳಿಸಿಕೊಳ್ಳಲು ನಿಮ್ಮ ಅರ್ಹತೆ, ಕೌಶಲ ಹೇಗೆ ಮುಖ್ಯವೋ ಅದೇ ರೀತಿ ವಾಸ್ತು ಕೂಡ ಮುಖ್ಯ. ನಿಮ್ಮ ಹಣೆಬರಹಕ್ಕೆ ಸ್ಪಷ್ಟ ರೂಪ ನೀಡುವಲ್ಲಿ ವಾಸ್ತು ಮುಖ್ಯ ಪಾವತ್ರವಹಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಉತ್ತಮ ಉದ್ಯೋಗ ಸಿಗಬೇಕಾದರೆ ಮನೆಯ ವಾಸ್ತು ಸರಿಯಾಗಿರಬೇಕು. ದಿನದ 24 ಗಂಟೆಯ ಅವಧಿಯಲ್ಲಿ ಸರಾಸರಿ 14ರಿಂದ 15 ತಾಸು ಮನೆಯಲ್ಲೇ ಇರುತ್ತೇವೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಅದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ, ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ ದೀಪಾ ಜೋಶಿ.

ಇದನ್ನೂ ಓದಿ: Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ

ಉತ್ತಮ ಹಣ ಗಳಿಕೆಗೆ ಮತ್ತು ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಲು ಅವರು ನೀಡಿರುವ ಕೆಲವು ವಾಸ್ತು ಸಲಹೆಗಳು ಇಲ್ಲಿವೆ;

  • ಮನೆಯ ಉತ್ತರ ದಿಕ್ಕಿಗೆ ಕುಳಿತುಕೊಳ್ಳುವ ಜಾಗ ಇರಲಿ. ಇದು ಹಣ, ಸಂಪತ್ತಿನ ಒಡೆಯ ಕುಬೇರನಿಗೆ ಸಂಬಂಧಿಸಿದ ದಿಕ್ಕಾಗಿದೆ.
  • ನೀವು ಲ್ಯಾಪ್​ಟಾಪ್, ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನದಲ್ಲಿ ಕೆಲಸ ಮಾಡುವುದಾದರೆ ಚಾರ್ಜಿಂಗ್ ಪಾಯಿಂಟ್ ಆಗ್ನೇಯ ಮೂಲೆಯಲ್ಲಿರಲಿ.
  • ವಸ್ತುಗಳ ಮಾರಾಟದಿಂದ ಯಶಸ್ವಿ ಉದ್ಯಮಿಯಾಗಬೇಕೆಂದು ಬಯಸಿದರೆ ವಸ್ತುಗಳನ್ನು ವಾಯವ್ಯ ಮೂಲೆಯಲ್ಲಿಡಿ. ಮನೆಯ ವಾಯವ್ಯ ಮೂಲೆ ವಾಯುವಿಗೆ ಸಂಬಂಧಿಸಿದ ಜಾಗವಾಗಿದೆ.
  • ಮನೆಯ ದಕ್ಷಿಣ ಭಾಗದಲ್ಲಿ ಯಾವುದೇ ಕಿಟಕಿ ಇಡಬೇಡಿ.
  • ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಾಗಿ ಪೂರ್ವ-ದಕ್ಷಿಣ-ಪೂರ್ವ ಮೂಲೆಯಲ್ಲಿ ಕುಳಿತುಕೊಳ್ಳಿ.

ಈ ಮೇಲಿನ ಸಲಹೆಗಳನ್ನು ಅನುಸರಿಸುವುದರ ಜತೆಗೆ ದೇವರ ಜತೆ ನಂಬಿಕೆ ಇಡಬೇಕು. ಮನೆಯ ಹಿರಿಯರ ಆಶೀರ್ವಾದ ಪಡೆಯಬೇಕು. ಬಳಿಕ ನಿಮ್ಮ ಕರ್ತವ್ಯ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ದೀಪಾ ಜೋಶಿ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ