ಇನ್ಷೂರೆನ್ಸ್ ಸ್ಕೀಮ್ಗಳನ್ನು (Insurance Policies) ಬಹಳ ಮಂದಿ ತಪ್ಪಾಗಿ ಅರ್ಥ ಮಾಡಿಕೊಂಡಿರುವುದುಂಟು. ಹಲವು ಸ್ಕೀಮ್ಗಳಲ್ಲಿ ನೀವು ಇಷ್ಟು ವರ್ಷ ಕಟ್ಟಿದ್ದಕ್ಕೆ ತಮಗೆ ಅಷ್ಟು ಮಾತ್ರವಾ ರಿಟರ್ನ್ ಎಂದು ಹೇಳುವುದುಂಟು. ಬ್ಯಾಂಕ್ನಲ್ಲಿ ಎಫ್ಡಿಯೋ, ಆರ್ಡಿಯೋ ಇಟ್ಟಿದ್ದರೆ ಇದಕ್ಕಿಂತ ಹೆಚ್ಚು ಹಣ ರಿಟರ್ನ್ ಸಿಗುತ್ತಿತ್ತು ಎಂದು ಹೇಳುವವರಿದ್ದಾರೆ. ಇಲ್ಲಿ ಇನ್ಷೂರೆನ್ಸ್ ಸ್ಕೀಮ್ಗಳ ಉದ್ದೇಶವೇ ಬೇರೆ, ಬ್ಯಾಂಕ್ ಠೇವಣಿಗಳ ಉದ್ದೇಶವೇ ಬೇರೆ ಎಂಬುದನ್ನು ಗಮನಿಸಬೇಕು.
ಬ್ಯಾಂಕ್ ಠೇವಣಿಗಳಾಗಲೀ, ಮ್ಯೂಚುವಲ್ ಫಂಡ್ ಎಸ್ಐಪಿಗಳಾಗಲೀ ಅಪ್ಪಟ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಾಗಿವೆ. ಆದರೆ, ಇನ್ಷೂರೆನ್ಸ್ ಪ್ಲಾನ್ಗಳು ನಿಮಗೆ ನಿರ್ದಿಷ್ಟ ರಿಟರ್ನ್ ಕೊಡುವುದಷ್ಟೇ ಅಲ್ಲ, ಆಕಸ್ಮಿಕವಾಗಿ ಸಾವಾದಾಗ ಪರಿಹಾರ ಕೊಡುತ್ತದೆ. ಹೀಗಾಗಿ, ವಿಮೆ ಮತ್ತು ಠೇವಣಿ ಸ್ಕೀಮ್ಗಳ ಉದ್ದೇಶಗಳು ಭಿನ್ನ ಇರುತ್ತವೆ. ಆದಾಗ್ಯೂ ಬ್ಯಾಂಕ್ ಠೇವಣಿ ಮತ್ತು ಇನ್ಷೂರೆನ್ಸ್ ಪಾಲಿಸಿ ಬಗ್ಗೆ ಪ್ರಾಕ್ಟಿಕಲ್ ಆಗಿ ಲೆಕ್ಕ ಮಾಡಿ ಹೋಲಿಸುವ ಕೆಲಸ ಮಾಡಿಯೂ ನೋಡಬಹುದು.
ಎಲ್ಐಸಿ ನ್ಯೂ ಜೀವನ್ ಆನಂದ್ ಮತ್ತು ಬ್ಯಾಂಕ್ ಆರ್ಡಿ ಮಧ್ಯೆ ಒಂದು ಹೋಲಿಕೆ…. ಸುಮ್ಮನೆ ಉದಾಹರಣೆಗೆ ಮಾತ್ರ ಪಾಲಿಸಿಯನ್ನು ಆಯ್ಕೆ ಮಾಡಿದ್ದೇವೆ…
ಎಲ್ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ
ಇದನ್ನೂ ಓದಿ: LIC Aadhaar Shila: ಎಲ್ಐಸಿ ಆಧಾರ್ ಶಿಲಾ ಪಾಲಿಸಿ: ದಿನಕ್ಕೆ 58 ರೂನಂತೆ ಕಟ್ಟಿ, 8 ಲಕ್ಷ ರೂ ಲಾಭ ಮಾಡಿ
ಈಗ ನೀವು ಎಲ್ಐಸಿ ಪಾಲಿಸಿಗೆ ಕಟ್ಟುವ ಹಣವನ್ನೇ ಬ್ಯಾಂಕ್ ಡೆಪಾಸಿಟ್ ಸ್ಕೀಮ್ಗಳಲ್ಲಿ ಉಪಯೋಗಿಸಿದರೆ ಎಷ್ಟು ಸಿಗಬಹುದು? ಅದನ್ನೂ ಲೆಕ್ಕ ಮಾಡಿ ನೋಡೋಣ…
ಬ್ಯಾಂಕ್ ಆರ್ಡಿಯಲ್ಲಿ ಶೇ. 8ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ ಎಂದು ಪರಿಗಣಿಸೋಣ. ವರ್ಷಕ್ಕೆ 10,922 ರೂ ಹಣವನ್ನು 21 ವರ್ಷ ಕಟ್ಟಿದಾಗ ಎಷ್ಟು ಹಣ ಸಿಗುತ್ತೆ? ಮೆಚ್ಯೂರ್ ಆಗುವ ಮೊತ್ತ 5,94,776 ರೂ.
ಎಲ್ಐಸಿಯಲ್ಲಿ ಮೆಚ್ಯೂರ್ ಆಗುವುದು 4.36 ಲಕ್ಷ ರೂ; ಆರ್ಡಿಯಿಂದ ಬರುವುದು 5.95 ಲಕ್ಷ ರೂ. ಅಬ್ಬಾ 1.6 ಲಕ್ಷದಷ್ಟು ವ್ಯತ್ಯಾಸವಾ ಎಂದನಿಸಬಹುದು. ಆದರೆ, ಟ್ವಿಸ್ಟ್ ಸಿಗುವುದು ಇಲ್ಲಿಯೇ…
ಆರ್ಡಿಯಲ್ಲಿ ನೀವು ಪಡೆಯುವ ಬಡ್ಡಿ ಹಣಕ್ಕೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ನೀವು ಆರ್ಡಿಯಿಂದ 21 ವರ್ಷದಲ್ಲಿ ಗಳಿಸುವ ಬಡ್ಡಿ 3.65 ಲಕ್ಷ ರೂನಷ್ಟು. ಇದಕ್ಕೆ ಆದಾಯ ತೆರಿಗೆ ಪಾವತಿಸಬೇಕಾದ್ದು 73,083 ರೂ. ಅಂದರೆ, ಮೆಚ್ಯೂರ್ ಮೊತ್ತವಾದ 5,94,776 ರೂನಿಂದ 73,083 ರೂ ಅನ್ನು ಕಳೆದರೆ ಉಳಿಯುವುದು 5,21,693 ರೂ.
ಇದನ್ನೂ ಓದಿ: LIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ
ಈಗ ಎಲ್ಐಸಿಯಲ್ಲಿ ಮೆಚ್ಯೂರ್ ಆಗುವ ಮೊತ್ತ 4,35,800 ರೂ. ಈ ವೇಳೆ ನೀವು ತೆರಿಗೆ ಲಾಭ ಬಳಸಿಕೊಂಡರೆ 22,936 ರೂ ಉಳಿತಾಯ ಮಾಡಬಹುದು. ಅಂದರೆ ನಿಮಗೆ ಈ ಪಾಲಿಸಿಯಿಂದ ಸಿಗುವ ಲಾಭ 4,58,736 ರೂ.
ಆದಾಯ ತೆರಿಗೆ, ತೆರಿಗೆ ಉಳಿತಾಯ ಎಲ್ಲವನ್ನೂ ಗಣಿಸಿದಾಗಲೂ ಆರ್ಡಿಯಿಂದ ಸಿಗುವ ಹಣ ಎಲ್ಐಸಿಗಿಂತ 62,957 ರೂನಷ್ಟು ಹೆಚ್ಚು. ಆದರೆ, ಈ ಎಲ್ಐಸಿ ಪಾಲಿಸಿ ಮೆಚ್ಯೂರ್ ಆದಾಗ ಸರೆಂಡರ್ ಮಾಡಿದಾಗ 60,000 ರೂ ಉಳಿಯುತ್ತದೆ. ಸುಮಾರು 3,000 ರೂನಷ್ಟು ವ್ಯತ್ಯಾಸ ಬರುತ್ತದೆ. ಎಲ್ಐಸಿ ನ್ಯೂ ಜೀವನ್ ಆನಂದ್ ಪಾಲಿಸಿಯು ಮೆಚ್ಯೂರ್ ಆದ ಬಳಿಕವೂ ಲೈಫ್ ಕವರ್ ನೀಡುತ್ತದೆ. ಆಕಸ್ಮಿಕವಾಗಿ ಸತ್ತಾಗ 2,00,000 ರೂ ಹಣವು ವಾರಸುದಾರರಿಗೆ ಸಲ್ಲುತ್ತದೆ. ಈ ಕಾರಣದಿಂದ ನೋಡಿದಾಗ ಬ್ಯಾಂಕ್ ಆರ್ಡಿಗಿಂತ ಎಲ್ಐಸಿ ನ್ಯೂ ಜೀವನ್ ಆನಂದ್ ಕೈ ಮೇಲು ಎನಿಸುತ್ತದೆ. ಆದರೆ ಹೂಡಿಕೆ ದೃಷ್ಟಿಯಿಂದ ಬ್ಯಾಂಕ್ನ ಠೇವಣಿ ಯೋಜನೆಗಳು ಉತ್ತಮ ಎನಿಸುತ್ತವೆ. ಆದರೆ, ಶೇ. 8ಕ್ಕಿಂತ ಕಡಿಮೆ ಬಡ್ಡಿ ದರ ಇದ್ದರೆ ಹೆಚ್ಚು ರಿಟರ್ನ್ ಸಿಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ