Petrol Diesel Price on August 14: ಮತ್ತೆ 80 ಡಾಲರ್​ ದಾಟಿದ ಕಚ್ಚಾತೈಲ ಬೆಲೆ, ದೆಹಲಿಯಲ್ಲಿ ಪೆಟ್ರೋಲ್ ಅಗ್ಗ

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಿದೆ. ಇಂಧನ ಬೆಲೆಯಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಹಳೆಯ ಬೆಲೆಯಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಬಹುದಾಗಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ಬಳಿಕ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

Petrol Diesel Price on August 14: ಮತ್ತೆ 80 ಡಾಲರ್​ ದಾಟಿದ ಕಚ್ಚಾತೈಲ ಬೆಲೆ, ದೆಹಲಿಯಲ್ಲಿ ಪೆಟ್ರೋಲ್ ಅಗ್ಗ
ಪೆಟ್ರೋಲ್Image Credit source: Times Of India
Follow us
|

Updated on:Aug 14, 2024 | 7:11 AM

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಮತ್ತೊಮ್ಮೆ ಏರಲಾರಂಭಿಸಿದ್ದು, ಪ್ರತಿ ಬ್ಯಾರೆಲ್​ಗೆ 77 ಡಾಲರ್​ಗಿಂತ  ಕೆಳಗೆ ಬಂದು ಇಂದು 80 ಡಾಲರ್​ ದಾಟಿದೆ. ಬ್ರೆಂಟ್ ಕೂಡ ಪ್ರತಿ ಬ್ಯಾರೆಲ್​ಗೆ 81.92ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 79.65ಡಾಲರ್​ನಂತೆ ವಹಿವಾಟು ನಡೆಸುತ್ತಿದೆ.

ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ.

ದೇಶದ ಇತರ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ ರೂ 94.83 ಮತ್ತು ಡೀಸೆಲ್ ಲೀಟರ್‌ಗೆ ರೂ 87.96

ಗುರುಗ್ರಾಮ: ಪೆಟ್ರೋಲ್ ಲೀಟರ್‌ಗೆ 95.19 ಮತ್ತು ಡೀಸೆಲ್ ಲೀಟರ್‌ಗೆ 88.05 ರೂ.

ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 102.86 ಮತ್ತು ಡೀಸೆಲ್ ಲೀಟರ್‌ಗೆ 88.94 ರೂ.

ಮತ್ತಷ್ಟು ಓದಿ: Petrol Diesel Price on August 13: ಮುಂಬೈಗಿಂತ ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ

ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಪರಿಶೀಲಿಸುವುದು ಹೇಗೆ? ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಇತ್ತೀಚಿನ ದರಗಳನ್ನು ನೀವು SMS ಮೂಲಕ ತಿಳಿದುಕೊಳ್ಳಬಹುದು. ನೀವು ಫೋನ್‌ನಲ್ಲಿ RSP ಸ್ಪೇಸ್ ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ಟೈಪ್ ಮಾಡಬಹುದು ಮತ್ತು ಸಂದೇಶವನ್ನು 92249 92249 ಗೆ ಕಳುಹಿಸಬಹುದು.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಂಡೀಗಢ: ಪ್ರತಿ ಲೀಟರ್ ಪೆಟ್ರೋಲ್ 94.24 ರೂ. ಮತ್ತು ಡೀಸೆಲ್ ಲೀಟರ್ ಗೆ 82.40 ರೂ

ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 107.41 ರೂ. ಮತ್ತು ಡೀಸೆಲ್ ಲೀಟರ್‌ಗೆ 95.65 ರೂ.

ಜೈಪುರ: ಪೆಟ್ರೋಲ್ ಲೀಟರ್‌ಗೆ 104.88 ಮತ್ತು ಡೀಸೆಲ್ ಲೀಟರ್‌ಗೆ 90.36 ರೂ.

ಪಾಟ್ನಾ: ಪೆಟ್ರೋಲ್ ಲೀಟರ್‌ಗೆ 105.18 ಮತ್ತು ಡೀಸೆಲ್ ಲೀಟರ್‌ಗೆ 92.04 ರೂ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:07 am, Wed, 14 August 24