Petrol Diesel Price on January 13: ಕಚ್ಚಾತೈಲ ಬೆಲೆ ಏರಿಕೆ, ಭಾರತದಾದ್ಯಂತ ಇಂಧನ ದರ ಎಷ್ಟಿದೆ?

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಜನವರಿ 13, ಸೋಮವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿದೆ. ಕಚ್ಚಾ ತೈಲ ಏರಿಕೆಯಾಗಿದ್ದರೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೂ ಪರಿಣಾಮ ಬೀರಬಹುದು. ಆದಾಗ್ಯೂ, ಜನವರಿ 13, 2025 ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಜನವರಿ 13 ರಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದೇ ಆಗಿದ್ದು, ಇಲ್ಲಿ ಯಾವುದೇ ಬದಲಾವಣೆ ಇಲ್ಲ.

Petrol Diesel Price on January 13: ಕಚ್ಚಾತೈಲ ಬೆಲೆ ಏರಿಕೆ, ಭಾರತದಾದ್ಯಂತ ಇಂಧನ ದರ ಎಷ್ಟಿದೆ?
ಪೆಟ್ರೋಲ್ Image Credit source: Scimed
Follow us
ನಯನಾ ರಾಜೀವ್
|

Updated on: Jan 13, 2025 | 7:17 AM

ಪೆಟ್ರೋಲ್-ಡೀಸೆಲ್ ಇತ್ತೀಚಿನ ಬೆಲೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಬ್ರೆಂಟ್ ಕ್ರೂಡ್ ಮತ್ತು ಡಬ್ಲ್ಯುಟಿಐ ಕ್ರೂಡ್ ಬೆಲೆಯಲ್ಲಿ ಶೇಕಡಾ 2.50 ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ. ಕಚ್ಚಾ ತೈಲ ಏರಿಕೆಯಾಗಿದ್ದರೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೂ ಪರಿಣಾಮ ಬೀರಬಹುದು.

ಜನವರಿ 13, 2025 ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಜನವರಿ 13 ರಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದೇ ಆಗಿದ್ದು, ಇಲ್ಲಿ ಯಾವುದೇ ಬದಲಾವಣೆ ಇಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ಬೆಲೆಯಲ್ಲಿ ಎಷ್ಟೇ ಏರಿಕೆಯಾಗಲಿ, ಇಳಿಕೆಯಾಗಲಿ ಅದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಕಾಣಿಸುತ್ತಿಲ್ಲ. ಜನವರಿ 13 ರಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದೇ ಆಗಿವೆ.

ದೆಹಲಿಯಲ್ಲಿ ಪೆಟ್ರೋಲ್ 94.72 ರೂ. ಡೀಸೆಲ್ 87.62 ರೂ., ಮುಂಬೈನಲ್ಲಿ ಪೆಟ್ರೋಲ್ 103.44 ರೂ., ಡೀಸೆಲ್ 89.97 ರೂ., ಕೋಲ್ಕತ್ತಾದಲ್ಲಿ 103.94 ರೂ., ಡೀಸೆಲ್ 90.76 ರೂ., ಚೆನ್ನೈನಲ್ಲಿ ಪೆಟ್ರೋಲ್ 100.85 ರೂ., ಡೀಸೆಲ್ 92.44 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ., ಲಕ್ನೋದಲ್ಲಿ ಪೆಟ್ರೋಲ್ 94.65 ರೂ., ಡೀಸೆಲ್ 87.708 ರೂ, ಗುರುಗ್ರಾಮದಲ್ಲಿ ಪೆಟ್ರೋಲ್ 94.65 ರೂ., ಡೀಸೆಲ್ 87.701 ರೂ., ಚಂಡೀಗಢದಲ್ಲಿ ಪೆಟ್ರೋಲ್ 94.24 ರೂ. ಡೀಸೆಲ್ 82.40 ರೂ., ಪಾಟ್ನಾದಲ್ಲಿ ಪೆಟ್ರೋಲ್ 105.18 ರೂ. ಡೀಸೆಲ್ 92.04 ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

2024ರ ಮಾರ್ಚ್​ 14 ರಂದು ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ 2 ರೂ.ಗಳಷ್ಟು ಕಡಿಮೆ ಮಾಡಿತ್ತು.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಹೋಗಬೇಕು ಅಥವಾ SMS ಕಳುಹಿಸಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಗಳನ್ನು (ವ್ಯಾಟ್) ವಿಧಿಸುತ್ತವೆ. ಈ ತೆರಿಗೆಗಳು ರಾಜ್ಯದಿಂದ ಬದಲಾಗುತ್ತವೆ, ಇದು ದೇಶದಾದ್ಯಂತ ಬೆಲೆ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ