PF interest: ಈ ದಿನದೊಳಗೆ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ ಶೇ 8.5ರಷ್ಟು ಪಿಎಫ್ ಬಡ್ಡಿ, ಪರಿಶೀಲನೆ ಮಾಡಿಕೊಳ್ಳಿ
2020- 21ನೇ ಸಾಲಿಗೆ ಪಿಎಫ್ ಬಡ್ಡಿ ದರ ಶೇ 8.5ರಷ್ಟು ಚಂದಾದಾರರ ಖಾತೆಗೆ ಯಾವಾಗ ಜಮೆ ಆಗಲಿದೆ ಎಂಬ ವಿವರ ಇಲ್ಲಿದೆ. ಕಳೆದ ವರ್ಷ ಬಡ್ಡಿ ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.
ಪ್ರಮುಖ ದಿನಪತ್ರಿಕೆಗಳ ವರದಿ ಪ್ರಕಾರ, ಇಪಿಎಫ್ಒದಿಂದ ಬಡ್ಡಿ ದರವನ್ನು ಜುಲೈ ಕೊನೆ ಹೊತ್ತಿಗೆ ಕ್ರೆಡಿಟ್ ಮಾಡಲಾಗುತ್ತದೆ. ಯಾರೆಲ್ಲ ಇಪಿಎಫ್ ಚಂದಾದಾರರಿದ್ದಾರೋ ಅವರ ಖಾತೆಗಳಿಗೆ 2020- 21ನೇ ಹಣಕಾಸು ವರ್ಷದ ಶೇ 8.5ರಷ್ಟು ಬಡ್ಡಿ ದರವು ಖಾತೆಗೆ ಜಮೆ ಆಗುತ್ತದೆ. ಅಂದ ಹಾಗೆ ಶೇ 8.5ರ ಬಡ್ಡಿ ದರಕ್ಕೆ ಕಾರ್ಮಿಕ ಸಚಿವಾಲಯದಿಂದಲೂ ಒಪ್ಪಿಗೆ ಸಿಕ್ಕಿತ್ತು. ಮಾರ್ಚ್ನಲ್ಲಿ ಶ್ರೀನಗರ್ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂಡಳಿ ಟ್ರಸ್ಟಿಗಳ (CBT) ಸಭೆಯಲ್ಲಿ ಇಪಿಎಫ್ ದರವನ್ನು ಶೇ 8.5 ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು.
ಅಂದಹಾಗೆ ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒದಿಂದ ತನ್ನ ಸದಸ್ಯರಿಗೆ ಕೋವಿಡ್- 19 ಮುಂಗಡ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಹೇಗೆ ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಪಿಎಫ್ ವಿಥ್ಡ್ರಾಗೆ ಅರ್ಜಿ ಹಾಕಿಕೊಳ್ಳಲಾಗಿತ್ತೋ ಅದೇ ರೀತಿಯಲ್ಲಿ ಈ ಸಲವೂ ಅಪ್ಲೈ ಮಾಡಬಹುದಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇನ್ನು ಜೂನ್ 1ರಿಂದ ಅನ್ವಯ ಆಗುವಂತೆ ಪಿಎಫ್ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಡದಿದ್ದಲ್ಲಿ ಉದ್ಯೋಗದಾತರ ಪಿಎಫ್ ಕೊಡುಗೆ ಖಾತೆಗೆ ಜಮೆ ಆಗುವುದಿಲ್ಲ. ಈ ಬಾರಿ ಆಧಾರ್ ಜೋಡಣೆ ಜವಾಬ್ದಾರಿಯನ್ನು ಉದ್ಯೋಗದಾತರಿಗೆ ನೀಡಲಾಗಿದೆ. ತಮ್ಮ ಉದ್ಯೋಗಿಗೆ ಸೂಚನೆ ನೀಡಿ, ಆಧಾರ್ ಜತೆಗೆ ಪಿಎಫ್ ಖಾತೆ ಜೋಡಣೆ ಆಗಿದೆಯಾ ಎಂಬುದನ್ನು ಖಾತ್ರಿ ಪಡಿಸಬೇಕಾಗುತ್ತದೆ.
ಇದನ್ನೂ ಓದಿ: How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್ ಖಾತೆ ಜೋಡಣೆ ಮಾಡುವುದು ಹೇಗೆ?
ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್ ವಿಥ್ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ
(EPFO will credit PF interest of 8.5% to subscribers account by this date)
Published On - 12:23 pm, Wed, 2 June 21