
ಪ್ರಧಾನಮಂತ್ರಿ ಜನ್‌ಧನ್ ಯೋಜನೆ (PM-JDY) ಆರಂಭವಾಗಿ 12 ವರ್ಷ ಪೂರ್ಣಗೊಂಡಿದೆ. 2014ರಲ್ಲಿ ಚಾಲನೆಗೊಂಡ ಈ ಪಿಎಂ ಜನ್ ಧನ್ ಯೋಜನೆಯು ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ಡಿಬಿಟಿಯಲ್ಲಿ ಇರುವ ಎರಡು ಪ್ರಮುಖ ಅಂಶಗಳಲ್ಲಿ ಜನ್ ಧನ್ ಖಾತೆಯೂ ಒಂದು. ಜನ್ ಧನ್ ಯೋಜನೆಯ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಮೂಲಕ ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್ಫರ್ (DBT) ತಂತ್ರಜ್ಞಾನದ ಅಡಿಯಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ. ಇದು ವಿಶ್ವದಲ್ಲೇ ಬೇರಾವ ದೇಶದಲ್ಲೂ ಇಷ್ಟು ವ್ಯಾಪಕವಾಗಿ ಹಣ ವರ್ಗಾವಣೆ ಆಗುವುದಿಲ್ಲ.
ಇದನ್ನೂ ಓದಿ: ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?
ಇದನ್ನೂ ಓದಿ: ಇರಾನ್ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ
ಯಾವುದೇ ಬ್ಯಾಂಕ್ನ ಯಾವುದೇ ಬ್ರ್ಯಾಂಚ್ಗೆ ಹೋಗಿ ಅಲ್ಲಿ ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯಬಹುದು. ಕೆವೈಸಿ ದಾಖಲೆಗಳಿದ್ದರೆ ಸಾಕು.
ಕೆವೈಸಿ ದಾಖಲೆಗಳೆಂದರೆ ಆಧಾರ್ ಕಾರ್ಡ್, ಐಡಿ ಪ್ರೂಫ್, ಅಡ್ರೆಸ್ ಪ್ರೂಫ್, ಫೋಟೋ. ಇಲ್ಲಿ ಐಡಿ ಪ್ರೂಫ್ ಎಂದರೆ ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ರೇಶನ್ ಕಾರ್ಡ್ ಆಗಬಹುದು. ಅಡ್ರೆಸ್ ಪ್ರೂಫ್ ದಾಖಲೆಯಾಗಿ ಪಾಸ್ಪೋರ್ಟ್, ಡಿಎಲ್, ಯುಟಿಲಿಟಿ ಬಿಲ್ಗಳಲ್ಲಿ ಒಂದನ್ನು ನೀಡಬಹುದು. ಹೆಚ್ಚಿನ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಬ್ಯಾಂಕ್ ಅಕೌಂಟ್ ತೆರೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ