AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಷ್ಕ್ರಿಯ ಪಿಎಂ ಜನ್ ಧನ್ ಅಕೌಂಟ್ ಮುಚ್ಚಲು ಬ್ಯಾಂಕುಗಳಿಗೆ ತಿಳಿಸಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Finance ministry says, no instruction give to close inactive PMJDY accounts: ಇನಾಪರೇಟಿವ್ ಆಗಿರುವ ಪಿಎಂಜೆಡಿವೈ ಅಕೌಂಟ್​​ಗಳನ್ನು ಮುಚ್ಚಲಾಗುವುದು ಎನ್ನುವಂತಹ ಸುದ್ದಿಯನ್ನು ಸರ್ಕಾರ ತಳ್ಳಿಹಾಕಿದೆ. ನಿಷ್ಕ್ರಿಯ ಪಿಎಂ ಜನ್ ಧನ್ ಅಕೌಂಟ್​​ಗಳನ್ನು ಮುಚ್ಚಲು ಬ್ಯಾಂಕುಗಳಿಗೆ ತಿಳಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ. ಪಿಎಂಜೆಡಿವೈ, ಅಟಲ್ ಪೆನ್ಷನ್ ಸ್ಕೀಮ್ ಇತ್ಯಾದಿ ಅಕೌಂಟ್​​ಗಳ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಜುಲೈ 1ರಿಂದ ಜಾಗೃತಿ ಅಭಿಯಾನ ನಡೆಸಿದೆ.

ನಿಷ್ಕ್ರಿಯ ಪಿಎಂ ಜನ್ ಧನ್ ಅಕೌಂಟ್ ಮುಚ್ಚಲು ಬ್ಯಾಂಕುಗಳಿಗೆ ತಿಳಿಸಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2025 | 12:25 PM

Share

ನವದೆಹಲಿ, ಜುಲೈ 9: ನಿಷ್​ಕ್ರಿಯಾಗಿರುವ ಪಿಎಂ ಜನ್ ಧನ್ ಖಾತೆಗಳನ್ನು (Inoperative PMJDY account) ಮುಚ್ಚುವಂತೆ ಬ್ಯಾಂಕುಗಳಿಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಹೋಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಅವು ನಿಷ್ಕ್ರಿಯವಾಗಿದ್ದರೆ ಮುಚ್ಚಲಾಗುವುದು ಎನ್ನುವಂತಹ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ಕೊಟ್ಟಿದೆ.

ಬ್ಯಾಂಕಿಂಗ್ ವ್ಯಾಪ್ತಿಗೆ ಬರದ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಬೇಕೆನ್ನುವುದು ಪಿಎಂ ಜನ್ ಧನ್ ಯೋಜನೆಯ ಮೂಲ ಉದ್ದೇಶ. ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಇದನ್ನೂ ಓದಿ: ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ

ಇದನ್ನೂ ಓದಿ
Image
ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ
Image
ಟ್ರಂಪ್ ಟ್ಯಾರಿಫ್​​ನಿಂದ ಬಾಂಗ್ಲಾ ತತ್ತರ; ಭಾರತಕ್ಕೆ ಲಾಭ
Image
ಅದಾನಿ ಪವರ್ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ
Image
ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಭಾರತಕ್ಕೆ 4ನೇ ಸ್ಥಾನ

ಇದೇ ವೇಳೆ, ಹಣಕಾಸು ಸೇವೆಗಳ ಇಲಾಖೆಯು ಜುಲೈ 1ರಿಂದ ಪಿಎಂ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಬಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಮತ್ತಿತರ ವೆಲ್​​ಫೇರ್ ಸ್ಕೀಮ್​​ಗಳ ಬಗ್ಗೆ ದೇಶಾದ್ಯಂತ ಮೂರು ತಿಂಗಳ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನದ ವೇಳೆ ಬ್ಯಾಂಕುಗಳು ಈ ಎಲ್ಲಾ ಖಾತೆಗಳಿಗೆ ಮತ್ತೊಮ್ಮೆ ಕೆವೈಸಿ ಪಡೆಯಲಿವೆ. ಈ ಸಂದರ್ಭದಲ್ಲಿ ಉಪಯೋಗಿಸದೇ ಉಳಿದಿರುವ, ಇನಾಪರೇಟಿವ್ ಆಗಿರುವ ಪಿಎಂಜೆಡಿವೈ ಅಕೌಂಟ್​​ಗಳನ್ನು ಇಲಾಖೆಯ ಗಮನಿಸಲಿದೆ. ಅಂಥ ಖಾತೆಗಳ ಮಾಲೀಕರನ್ನು ಸಂಪರ್ಕಿಸಿ, ಮತ್ತೆ ಸಕ್ರಿಯಗೊಳಿಸಲು ಯತ್ನಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.

ಇದೇ ವೇಳೆ, ಇನಾಪರೇಟಿವ್ ಅಥವಾ ನಿಷ್ಕ್ರಿಯವಾಗಿರುವ ಪಿಎಂಜೆಡಿವೈ ಅಕೌಂಟ್​​ಗಳನ್ನು ಮುಚ್ಚಲಾಗುವುದು ಎನ್ನುವಂತಹ ವರದಿಗಳು ಕೆಲವೆಡೆ ಬಂದಿದ್ದುವು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ನಿನ್ನೆ ಮಂಗಳವಾರ ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.

ಪಿಎಂಜೆಡಿವೈ ಅಕೌಂಟ್​​ಗಳು ಸರ್ಕಾರಕ್ಕೆ ಮುಖ್ಯ…

ಸರ್ಕಾರ ನಡೆಸುವ ಹಲವು ಕಲ್ಯಾಣ ಯೋಜನೆಗಳಿಗೆ ಬಿಡುಗಡೆ ಆಗುವ ಹಣ ಈ ಮೊದಲು ಸಾಕಷ್ಟು ಪೋಲಾಗುತ್ತಿತ್ತು. ಅನರ್ಹರು, ಮಧ್ಯವರ್ತಿಗಳಿಗೆ ಸಾಕಷ್ಟು ಹಣ ಹೋಗುತ್ತಿತ್ತು. ಅದನ್ನು ತಪ್ಪಿಸಲು ಸರ್ಕಾರವು ಪಿಎಂ ಜನ್ ಧನ್ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಖಾತೆಯೇ ಇಲ್ಲದ ಗ್ರಾಮೀಣ ಭಾಗದವರಿಗೆ ಸುಲಭವಾಗಿ ಅಕೌಂಟ್ ತೆರೆಯಲು ಅವಕಾಶ ಕೊಡಲಾಯಿತು. ಆಧಾರ್ ಮಾಡುವ ಮೂಲಕ ಸಬ್ಸಿಡಿ ಇತ್ಯಾದಿ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಗೆ ಹೋಗಲು ಸಾಧ್ಯವಾಗಿದೆ.

ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್​ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?

ಪಿಎಂ ಜನ್ ಧನ್ ಯೋಜನೆಯ ಖಾತೆಗಳು ಮಿನಿಮಮ್ ಬ್ಯಾಲನ್ಸ್ ನಿಯಮ ಹೊಂದಿರುವುದಿಲ್ಲ. ಝೀರೋ ಬ್ಯಾಲನ್ಸ್ ಖಾತೆಗಳಾಗಿವೆ. ಇದಕ್ಕೆ ಡೆಬಿಟ್ ಕಾರ್ಡ್​ಗಳೂ ಸಿಗುತ್ತವೆ. ಅಲ್ಪ ಮೊತ್ತಕ್ಕೆ ಇನ್ಷೂರೆನ್ಸ್ ಕೂಡ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ