ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Yojana) ಅಥವಾ ಪಿಎಂ ಕಿಸಾನ್ ಯೋಜನೆಯ ಹನ್ನೊಂದನೇ ಕಂತು ಮುಂಬರುವ ವಾರಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2000 ರೂಪಾಯಿ ಜಮೆ ಆಗಲಿದೆ ಎಂದು ವರದಿಗಳು ತಿಳಿಸಿವೆ. ನಾಲ್ಕು ತಿಂಗಳಿಗೆ ಒಮ್ಮೆ 2000 ರೂಪಾಯಿಯಂತೆ ಮೂರು ಕಂತಿನಲ್ಲಿ, ಅಂದರೆ ವಾರ್ಷಿಕ 6000 ರೂಪಾಯಿ ಬಿಡುಗಡೆ ಮಾಡಲಾಗುವುದು. ಸರ್ಕಾರದ ಬೆಂಬಲ ಇರುವಂಥ ಪಿಂಚಣಿ ಯೋಜನೆಗಳಲ್ಲಿ ಪಿಎಂ- ಕಿಸಾನ್ ಸಹ ಒಂದು. ಇದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರಂಭಿಸಿದೆ. 2018ರ ಡಿಸೆಂಬರ್ನಲ್ಲಿ ಈ ಯೋಜನೆ ಘೋಷಣೆ ಮಾಡಲಾಯಿತು. ರೈತರ ಕುಟುಂಬಗಳಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ಆರಂಭಿಸಲಾಯಿತು. ಆದರೆ ಚಾಲನೆ ಸಿಕ್ಕಿದ್ದು 2019ರ ಫೆಬ್ರವರಿಯಲ್ಲಿ. ಕೇಂದ್ರ ಸರ್ಕಾರದಿಂದ ಈ ತನಕ 1.57 ಲಕ್ಷ ಕೋಟಿ ರೂಪಾಯಿಯನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೀಡಲಾಗಿದೆ. ಈಗಾಗಲೇ 10 ಕಂತು ಬಿಡುಗಡೆ ಮಾಡಿದ್ದು, ಲಕ್ಷಾಂತರ ರೈತರಿಗೆ ಇದರಿಂದ ನೆರವಾಗಿದೆ.
ರೈತ ಫಲಾನುಭವಿಗಳ ಪಟ್ಟಿಯನ್ನು ಪಂಚಾಯತ್ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಮಾಹಿತಿಯಲ್ಲಿ ಪಾರದರ್ಶಕತೆ ಇರಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯ ಭಾಗವಾಗಿವೆ. ಸಿಸ್ಟಮ್ ಮೂಲಕ ಜನರೇಟ್ ಆದ ಎಸ್ಸೆಮ್ಮೆಸ್ ಮೂಲಕ ಫಲಾನುಭವಿ ರೈತರಿಗೆ ಮಾಹಿತಿ ನೀಡುವ ಜವಾಬ್ದಾರಿ ಅವುಗಳಿಗೆ ಇರುತ್ತದೆ. ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್ನಲ್ಲಿನ ಫಾರ್ಮರ್ ಕಾರ್ನರ್ನಲ್ಲಿ ಫಲಾನುಭವಿಗಳ ಸ್ಥಿತಿ-ಗತಿ ಪರಿಶೀಲಿಸಬಹುದು.
ಪಿಎಂ ಕಿಸಾನ್ ಫಲಾನುಭವಿ ಸ್ಥಿತಿ ಪರಿಶೀಲನೆ ಹೇಗೆ?
ಹಂತ 1: pmkisan.gov.in ವೆಬ್ಸೈಟ್ಗೆ ತೆರಳಬೇಕು
ಹಂತ 2: ಹೋಮ್ ಪೇಜ್ನಲ್ಲಿ ಫಾರ್ಮರ್ ಕಾರ್ನರ್ ಎಂಬ ಪ್ರತ್ಯೇಕ ಸೆಕ್ಷನ್ ಕಾಣಿಸುತ್ತದೆ.
ಹಂತ 3: ಫಾರ್ಮರ್ ಕಾರ್ನರ್ ವಿಭಾಗದಲ್ಲಿ “ಬೆನಿಫಿಷಿಯರಿ ಸ್ಟೇಟಸ್” ಎಂಬುದು ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಪರ್ಯಾಯವಾಗಿ, https://pmkisan.gov.in/BeneficiaryStatus,aspx ಲಿಂಕ್ ನೇರವಾಗಿ ಕ್ಲಿಕ್ ಮಾಡಬೇಕು.
ಹಂತ 5: ಅಗತ್ಯ ಪುಟದಲ್ಲಿ ಪ್ರವೇಶಿಸಿದ ಮೇಲೆ ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಇವುಗಳಲ್ಲೊಂದು ನಮೂದಿಸಬೇಕು.
ಹಂತ 6: ಮಾಹಿತಿ ಭರ್ತಿ ಮಾಡಿದ ಮೇಲೆ Get Data ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಪಿಎಂ ಕಿಸಾನ್ ಅರ್ಹತೆ ಮಾನದಂಡ
ಸರ್ಕಾರದ ಯಾವುದೇ ಯೋಜನೆಗೆ ಅರ್ಹತಾ ಮಾನದಂಡ ಇರುತ್ತದೆ. ಪಿಎಂ ಕಿಸಾನ್ ಯೋಜನೆಗೆ ಸಣ್ಣ ಪ್ರಮಾಣದ ಭೂ ಹಿಡುವಳಿ ಹೊಂದಿರುವ ರೈತರಾಗಿದ್ದು, ಭಾರತೀಯ ನಾಗರಿಕರಾಗಿರಬೇಕು. ಇದನ್ನು ಹೊರತುಪಡಿಸಿ, ತಮ್ಮ ಹೆಸರಲ್ಲಿ ಕೃಷಿ ಮಾಡುವುದಕ್ಕೆ ಭೂಮಿ ಹೊಂದಿರುವಂಥ ಎಲ್ಲ ಕೃಷಿಕ ಕುಟುಂಬಗಳು ಅನುಕೂಲ ಪಡೆಯಲು ಅರ್ಹವಾಗಿರುತ್ತವೆ.
ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ