PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್​ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ

PM Kisan Scheme, 23rd installment release date: ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 9 ಕೋಟಿಗೂ ಅಧಿಕ ರೈತರು 23ನೇ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ ತಿಂಗಳಲ್ಲಿ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 23ನೆಯದು ಜೂನ್​ನಲ್ಲಿ ಆಗುವ ಸಂಭವ ಇದೆ ಎನ್ನಲಾಗುತ್ತಿದೆ. ಇಕೆವೈಸಿ ಅಪ್​ಡೇಟ್ ಮಾಡದ ಫಲಾನುಭವಿಗಳಿಗೆ 23ನೇ ಕಂತಿನ ಹಣ ಸಿಕ್ಕದೇ ಹೋಗಬಹುದು.

PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್​ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ
ರೈತ
Image Credit source: Shutterstock

Updated on: May 29, 2026 | 4:21 PM

ನವದೆಹಲಿ, ಮೇ 29: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 23ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 22ನೇ ಕಂತಿನ ಹಣ ಮಾರ್ಚ್ 13ರಂದು ರಿಲೀಸ್ ಆಗಿತ್ತು. 9 ಕೋಟಿಗೂ ಅಧಿಕ ಫಲಾನುಭವಿ ಸಂಖ್ಯೆ ಇರುವ ಈ ಯೋಜನೆಯಲ್ಲಿ ಸರ್ಕಾರ ಪ್ರತೀ ಕಂತಿನಲ್ಲಿ 2,000 ರೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ರವಾನೆ ಮಾಡುತ್ತದೆ. ಈ ಸ್ಕೀಮ್​ನಲ್ಲಿ ರೈತರಿಗೆ (Farmers) ಸರ್ಕಾರ ಪ್ರತೀ ವರ್ಷ 3 ಕಂತುಗಳಲ್ಲಿ ಒಟ್ಟು 6,000 ರೂ ನೀಡುತ್ತದೆ. ವ್ಯವಸಾಯಕ್ಕೆ ಅನುಕೂಲವಾಗಲೆಂದು ರೈತರಿಗೆ ನೀಡಲಾಗುವ ಸಹಾಯಧನ ಇದು.

2018-19ರಲ್ಲಿ ಶುರುವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದಲೇ ಹಣ ಪಾವತಿಯಾಗುತ್ತದೆ. ಈ ಯೋಜನೆಗೆ ಫಲಾನುಭವಿಗಳಾಗಬಯಸುವವರು ಸ್ವಂತ ಕೃಷಿಭೂಮಿ ಹೊಂದಿದವರಾಗಿರಬೇಕು. ಅಷ್ಟು ಮಾತ್ರವಲ್ಲ, ಎಂಜಿನಿಯರ್, ವೈದ್ಯ ಇತ್ಯಾದಿ ವೃತ್ತಿಪರರು, ಶಾಸಕರು, ಸಂಸದರು, ಸರ್ಕಾರಿ ನೌಕರರು, ಪಿಂಚಣಿದಾರರು ಕೃಷಿ ಭೂಮಿ ಹೊಂದಿದರೂ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ

ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಪಿಎಂ ಕಿಸಾನ್ ಸ್ಕೀಮ್​ನ ಫಲಾನುಭವಿಗಳಾಗಲು ಬರುವುದಿಲ್ಲ. 2019ರ ನಂತರ ಕೃಷಿ ಭೂಮಿ ಮಾಲಕತ್ವ ಪಡೆದವರಿಗೂ ಹಣ ಸಿಗುವುದಿಲ್ಲ. ಹಾಗೆಯೇ, ತಂದೆ ಅಥವಾ ತಾಯಿ ಜೀವಂತ ಇರುವಾಗಲೇ ಅವರಿಂದ ವರ್ಗಾವಣೆಯಾದ ಕೃಷಿಭೂಮಿಯನ್ನು ಹೊಂದಿದವರಿಗೂ ಯೋಜನೆ ಹಣ ಸಿಗೋದಿಲ್ಲ.

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದೀರಾ? ಫಲಾನುಭವಿಗಳ ಪಟ್ಟಿ ಗಮನಿಸಿ

ನೀವು ಈಗಾಗಲೇ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇರುತ್ತದೆ. ಅದನ್ನು ನೋಡಲು ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಬೇಕು. ಅದರ ವಿಳಾಸ:

ಇಲ್ಲಿ ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸಿಗುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಒತ್ತಬೇಕು. ನಂತರ ರಾಜ್ಯ, ಜಿಲ್ಲೆ, ತಾಲೂಕು, ನಿಮ್ಮ ಊರನ್ನು ಆಯ್ದುಕೊಳ್ಳಬೇಕು. ಆಗ ಆ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.

ಇದನ್ನೂ ಓದಿ: ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ಯೋಜನೆಗೆ ನೊಂದಾಯಿಸಿದ್ದರೂ ಈ ಕಾರ್ಯ ಮಾಡದಿದ್ದರೆ ಬರೋದಿಲ್ಲ ದುಡ್ಡು

ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿ, ಈ ಹಿಂದೆ ಹಣವನ್ನು ಸ್ವೀಕರಿಸಿದ್ದರೂ 23ನೇ ಕಂತಿನ ಹಣ ಸಿಗುತ್ತದೆಂದು ಖಾತ್ರಿ ಇಲ್ಲ. ಇಕೆವೈಸಿ ವೆರಿಫಿಕೇಶನ್ ಮಾಡಿಸದಿದ್ದರೆ ಹಣ ಬರೋದಿಲ್ಲ. ಭೂದಾಖಲೆ ಪರಿಶೀಲನೆ ಆಗದಿದ್ದರೆ ಅಥವಾ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಆಗದೇ ಇದ್ದರೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us