ಪಿಎಂ ವಿಶ್ವಕರ್ಮ ಯೋಜನೆ; ಒಂದು ವರ್ಷದಲ್ಲಿ ಎರಡೂವರೆ ಕೋಟಿ ಅರ್ಜಿ; ನೊಂದಾಯಿತರಲ್ಲಿ ಕರ್ನಾಟಕದವರೇ ಹೆಚ್ಚು

|

Updated on: Nov 04, 2024 | 4:21 PM

PM Vishwakarma Scheme updates: ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಈವರೆಗೆ ಎರಡೂವರೆ ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 24 ಲಕ್ಷ ಸಮೀಪದಷ್ಟು ಜನರು ಯಶಸ್ವಿಯಾಗಿ ನೊಂದಣಿ ಮುಗಿಸಿದ್ದಾರೆ. ರಿಜಿಸ್ಟರ್ ಆದವರಲ್ಲಿ ಕರ್ನಾಟಕದವರೇ ಅತಿಹೆಚ್ಚು. ಗಾರೆ ಕೆಲಸದಿಂದ ಹಿಡಿದು ಕುಂಬಾರರವರೆಗೆ ವಿವಿಧ ಕುಶಲಕರ್ಮಿಗಳಿಗೆ ಉತ್ತೇಜನ ನೀಡಲು ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ.

ಪಿಎಂ ವಿಶ್ವಕರ್ಮ ಯೋಜನೆ; ಒಂದು ವರ್ಷದಲ್ಲಿ ಎರಡೂವರೆ ಕೋಟಿ ಅರ್ಜಿ; ನೊಂದಾಯಿತರಲ್ಲಿ ಕರ್ನಾಟಕದವರೇ ಹೆಚ್ಚು
ಪಿಎಂ ವಿಶ್ವಕರ್ಮ ಯೋಜನೆ
Follow us on

ಬೆಂಗಳೂರು, ನವೆಂಬರ್ 4: ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲೆಂದು ಸರ್ಕಾರ ಆರಂಭಿಸಿದ ಪಿಎಂ ವಿಶ್ವಕರ್ಮ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದು ವರ್ಷದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. 2023ರ ಸೆಪ್ಟೆಂಬರ್ 17ರಂದು ಆರಂಭವಾದ ಈ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 2,58,39,625 (ಎರಡೂವರೆ ಕೋಟಿ). ಇದರಲ್ಲಿ ಯಶಸ್ವಿಯಾಗಿ ನೊಂದಣಿ ಪೂರ್ಣಗೊಳಿಸಿದವರು 23,86,369 ಎನ್ನಲಾಗಿದೆ.

ಅತಿಹೆಚ್ಚು ನೊಂದಣಿ ಕಂಡ ಟಾಪ್-5 ರಾಜ್ಯಗಳು

ಪಿಎಂ ವಿಶ್ವಕರ್ಮ ಯೋಜನೆಗೆ ನೊಂದಾಯಿಸಿದವರ ಸಂಖ್ಯೆ 23.86 ಲಕ್ಷ. ಇದರಲ್ಲಿ ಕರ್ನಾಟಕದವರೇ ಅತಿಹೆಚ್ಚು ಇದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಯೋಜನೆಗೆ ರಿಜಿಸ್ಟರ್ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ಎರಡು ಲಕ್ಷ ನೊಂದಣಿ ಕಂಡಿದೆ. ರಾಜಸ್ಥಾನಕ್ಕಿಂತ ಕರ್ನಾಟಕದವರ ಸಂಖ್ಯೆ ಎರಡು ಪಟ್ಟಿಗಿಂತಲೂ ಹೆಚ್ಚಿದೆ.

ಅತಿಹೆಚ್ಚು ನೊಂದಾಯಿತರು (ನ. 1ರವರೆಗೆ)

  1. ಕರ್ನಾಟಕ: 5,19,346
  2. ರಾಜಸ್ಥಾನ: 2,01,395
  3. ಮಹಾರಾಷ್ಟ್ರ: 2,00,278
  4. ಗುಜರಾತ್: 1,95,759
  5. ಮಧ್ಯಪ್ರದೇಶ: 1,76,936

ಗಾರೆ ಕಸುಬಿನವರು ಅತಿ ಹೆಚ್ಚು ಸಂಖ್ಯೆಯಲ್ಲಿ ಪಿಎಂ ವಿಶ್ವಕರ್ಮ ಸ್ಕೀಮ್​ಗೆ ರಿಜಿಸ್ಟರ್ ಮಾಡಿದ್ದಾರೆ. ದರ್ಜಿಗಳು, ಮರಗೆಲಸದವರು, ಕ್ಷೌರಿಕರು, ಹೂಗಾರರು ಈ ಸ್ಕೀಮ್​ಗೆ ಹೆಚ್ಚು ನೊಂದಾಯಿಸಿದ ಇತರ ಕಸುಬಿನವರು.

  1. ಗಾರೆ ಕೆಲಸಗಾರರು: 4,25,881
  2. ಟೈಲರ್: 3,96,800
  3. ಕಾರ್ಪೆಂಟರ್: 3,59,101
  4. ಕ್ಷೌರಿಕರು: 1,90,037
  5. ಹೂಗಾರರು: 1,71,237

ಯಶಸ್ವಿಯಾಗಿ ನೊಂದಾವಣಿ ಮಾಡಿಸಿರುವ 23.86 ಲಕ್ಷ ಕುಶಲಕರ್ಮಿಗಳಲ್ಲಿ ಹತ್ತು ಲಕ್ಷ ಜನರಿಗೆ 15,000 ರೂವರೆಗೂ ಇನ್ಷೆಂಟಿವ್ ಸಿಕ್ಕಿದೆ. ಅವರ ಕಸುಬಿನಲ್ಲಿ ಆಧುನಿಕ ಪರಿಕರಗಳನ್ನು ಖರೀದಿಸಲು ಈ ಹಣ ಬಳಸಬಹುದು.

ಇದನ್ನೂ ಓದಿ: ಸೌರಶಕ್ತಿ ಸಾಧಿಸುವ ಕನಸು ನನಸಾಗುತ್ತಿದೆ: ಅಂತರರಾಷ್ಟ್ರೀಯ ಸೌರ ಮೈತ್ರಿ ಸಭೆಯಲ್ಲಿ ಪ್ರಹ್ಲಾದ್ ಜೋಷಿ

ಪಿಎಂ ವಿಶ್ವಕರ್ಮ ಯೋಜನೆಯಿಂದ ಏನು ಲಾಭ?

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ನೊಂದಾಯಿತರಾದವರಿಗೆ ಅವರ ಕೌಶಲ್ಯ ಪರಿಶೀಲನೆ ಆಗಿ, ಮೂಲಭೂತ ತರಬೇತಿ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು 15 ದಿನಗಳ ಅವಧಿಯ ಮುಂದುವರಿದ ತರಬೇತಿ ಪಡೆಯಬಹುದು. ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ ಸ್ಟೈಪೆಂಡ್ ಸಿಗುತ್ತದೆ.

ಇದಾದ ಬಳಿಕ ಆಧುನಿಕ ಪರಿಕರಗಳನ್ನು ಖರೀದಿಸಲು ನೆರವಾಗಲು ಟೂಲ್​ಕಿಟ್ ಇನ್ಸೆಂಟಿವ್ ಆಗಿ 15,000 ರೂ ಒದಗಿಸಲಾಗುತ್ತದೆ.

ಆ ನಂತರ, ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತವಾದ ಒಂದು ಲಕ್ಷ ರೂ ಮೊತ್ತದ ಸಾಲ ಸೌಲಭ್ಯ ಕೊಡಲಾಗುತ್ತದೆ. ರಾಷ್ಟ್ರೀಯ ಮಾರುಕಟ್ಟೆ ಸಮಿತಿ (ಎನ್​ಸಿಎಂ) ವತಿಯಿಂದ ಬ್ರ್ಯಾಂಡಿಂಗ್, ಪ್ರಚಾರ, ಜಾಹೀರಾತು ಇತ್ಯಾದಿ ಮಾರ್ಕೆಟಿಂಗ್ ನೆರವು ಕೂಡ ಅಭ್ಯರ್ಥಿಗಳಿಗೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ