ನವದೆಹಲಿ, ಸೆಪ್ಟೆಂಬರ್ 15: ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ವಿಶ್ವಕರ್ಮ ಯೋಜನೆಯನ್ನು (PM Vishwakarama Scheme) ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಭಾರತದ ವಿವಿಧ ಕರಕುಶಲಕರ್ಮಿಗಳಿಗೆ (Artisans) ಪ್ರೋತ್ಸಾಹವಾಗಿ ರೂಪಿಸಲಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂ ಮೀಸಲಿರಿಸಿದೆ. ಫಲಾನುಭವಿಗಳಿಗೆ ಧನಸಹಾಯದ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಕೌಶಲ್ಯ ಅಭಿವೃದ್ಧಿಗೆ (Skill Upgradation) ತರಬೇತಿ ಇತ್ಯಾದಿ ಹಲವು ರೀತಿಯ ನೆರವುಗಳನ್ನು ಸರ್ಕಾರ ಒದಗಿಸಲಿದೆ.
ಒಟ್ಟು 18 ವಿವಿಧ ಕರಕುಶಲ ಕರ್ಮಿಗಳನ್ನು ಈ ಸ್ಕೀಮ್ನ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಲ್ಲಿ ಮೇಸ್ತ್ರಿಗಳು, ಚಮ್ಮಾರ, ಕುಂಬಾರ, ಕಮ್ಮಾರ, ಅಕ್ಕಸಾಲಿಗ, ದರ್ಜಿ, ಕ್ಷೌರಿಕರೂ ಒಳಗೊಂಡಿದ್ದಾರೆ. ಕುಟುಂಬ ಮೂಲದಿಂದ ಬಂದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ಕೊಡಲು ಮತ್ತು ಅವುಗಳ ದೇಶೀಯ ಹಾಗೂ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ.
ಇದನ್ನೂ ಓದಿ: TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್
ಇದನ್ನೂ ಓದಿ: ಮೇಲಿನ ಹಂತದ ಎನ್ಬಿಎಫ್ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ
ಮೇಲೆ ತಿಳಿಸಿದ ಅರ್ಹ ಕುಶಲಕರ್ಮಿಗಳು ಪಿಎಂ ವಿಶ್ವಕರ್ಮ ಪೋರ್ಟಲ್ನಲ್ಲಿ ಹೆಸರು ನೊಂದಾಯಿಸಬೇಕು. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಮೂಲಕ ಪೋರ್ಟಲ್ನಲ್ಲಿ ಉಚಿತವಾಗಿ ಹೆಸರು ನೊಂದಾಯಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ