AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Survey: ಅರ್ಧಕ್ಕಿಂತ ಹೆಚ್ಚು ಮಂದಿಗೆ ಇಷ್ಟ; ಬಜೆಟೋತ್ತರ ಸಮೀಕ್ಷೆಯ ಕುತೂಹಲಕಾರಿ ಅಂಶಗಳು

Ipsos Redbus Post Budget Survey 2023: ಫ್ರಾನ್ಸ್ ಮೂಲದ ಇಪ್ಸೋಸ್ ಮಾರ್ಕೆಟ್ ರಿಸರ್ಚ್ ಸಂಸ್ಥೆ ಕೇಂದ್ರ ಬಜೆಟ್ ಬಗ್ಗೆ ಜನಸಮೀಕ್ಷೆ ನಡೆಸಿದ್ದು, ಇದರಲ್ಲಿ ಶೇ. 54ರಷ್ಟು ಮಂದಿಗೆ ಆಯವ್ಯಯ ಪತ್ರದ ಅಂಶಗಳು ಇಷ್ಟವಾಗಿವೆ. ಫೆಬ್ರುವರಿ 17ರಿಂದ ಮಾರ್ಚ್ 3ರವರೆಗೆ ಭಾರತದಾದ್ಯಂತ ಆಯ್ದ ಸ್ಥಳಗಳಲ್ಲಿನ ಆಯ್ದ ವರ್ಗಗಳ ಜನರನ್ನು ಸಮೀಕ್ಷೆ ಮಾಡಲಾಗಿದ್ದು ಅದರ ಹೈಲೈಟ್ಸ್ ಇಲ್ಲಿದೆ...

Budget Survey: ಅರ್ಧಕ್ಕಿಂತ ಹೆಚ್ಚು ಮಂದಿಗೆ ಇಷ್ಟ; ಬಜೆಟೋತ್ತರ ಸಮೀಕ್ಷೆಯ ಕುತೂಹಲಕಾರಿ ಅಂಶಗಳು
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 17, 2023 | 5:12 PM

Share

ನವದೆಹಲಿ: ಒಂದೂವರೆ ತಿಂಗಳ ಹಿಂದೆ ಮಂಡಿಸಲಾದ ಕೇಂದ್ರ ಬಜೆಟ್ (Union Budget 2023) ಬಗ್ಗೆ ಅರ್ಧಕ್ಕಿಂತ ಹೆಚ್ಚು ಜನರು ಈಗಲೂ ಅಭಿಮಾನ ಇಟ್ಟುಕೊಂಡಿದ್ದಾರೆ. ಇಪ್ಸೋಸ್ ಇಂಡಿಯಾಬಸ್ ದೇಶಾದ್ಯಂತ ನಡೆಸಿದ ಬಜೆಟೋತ್ತರ ಸಮೀಕ್ಷೆಯಲ್ಲಿ (Post Budget Survey) ಶೇ. 54ರಷ್ಟು ಜನರು 2023-24ನೇ ಸಾಲಿನ ಬಜೆಟ್ ಬಗ್ಗೆ ಸಂತುಷ್ಟಿ ಹೊಂದಿರುವುದು ತಿಳಿದುಬಂದಿದೆ. ಅದರಲ್ಲೂ ಪಶ್ಚಿಮ ಭಾರತೀಯ ಪ್ರದೇಶಗಳಲ್ಲಿ ಶೇ. 70ರಷ್ಟು ಮಂದಿಗೆ ಈ ಬಾರಿಯ ಬಜೆಟ್ ಇಷ್ಟವಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಮಾರ್ಕೆಟ್ ರಿಸರ್ಚ್ ಕಂಪನಿಯಾದ ಇಪ್ಸೋಸ್ (Market Research Company Ipsos) ಭಾರತದ ನಾಲ್ಕು ವಲಯದ ವಿವಿಧ ಸ್ತರಗಳ ನಗರಗಳಲ್ಲಿ ವೈಜ್ಞಾನಿಕವಾಗಿ ಆಯ್ಕೆ ಮಾಡಲಾದ 2 ಸಾವಿರಕ್ಕೂ ಹೆಚ್ಚು ಜನರ ಬಳಿ ಫೆಬ್ರುವರಿ 17ರಿಂದ ಮಾರ್ಚ್ 3ರವರೆಗಿನ ಅವಧಿಯಲ್ಲಿ ಈ ಸಮೀಕ್ಷೆ ನಡೆಸಿತ್ತು. ಬಜೆಟ್​ನ ಎಲ್ಲಾ ಅಂಶಗಳು ಹಾಗೂ ನಾಗರಿಕರಿಗೆ ಅದರ ಉಪಯುಕ್ತತೆ ಎಷ್ಟಿದೆ ಎನ್ನುವ ಸಂಪೂರ್ಣ ಸಮೀಕ್ಷೆ ಕೈಗೊಳ್ಳಲಾಗಿದೆ. ಆನ್​ಲೈನ್ ಮತ್ತು ಮೌಖಿಕ ಎರಡೂ ವಿಧಾನಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಇದು ಶೇ. 75ರಷ್ಟು ನಿಖರವಾಗಿದೆ ಎಂಬುದು ಇಪ್ಸೋಸ್ ಪ್ರತಿಪಾದನೆ.

ಸಮೀಕ್ಷೆಗೆ ಒಳಗಾದವರ ಪೈಕಿ ಪಶ್ಚಿಮ ಭಾರತೀಯರಲ್ಲಿ ಶೇ. 70ರಷ್ಟು ಮಂದಿ ಬಜೆಟ್​ಗೆ ಸಕಾರಾತ್ಮಕ ಅಭಿಪ್ರಾಯ ತೋರಿದ್ದಾರೆ. ಶೇ. 59ರಷ್ಟು ಉತ್ತರಭಾರತೀಯರು, ಶೇ. 44ರಷ್ಟು ದಕ್ಷಿಣ ಭಾರತೀಯರು ಮತ್ತು ಶೇ. 35ರಷ್ಟು ಪೂರ್ವ ಭಾಗದವರು ಬಜೆಟ್​ಗೆ ಬೆಂಬಲ ಕೊಟ್ಟಿದ್ದಾರೆ. ಒಟ್ಟಾರೆ ಶೇ. 54 ಮಂದಿ ಖುಷಿಯಿಂದಿದ್ದಾರೆ. ಶೇ. 20 ಮಂದಿ ಈ ಬಜೆಟ್ ಅನ್ನು ಕಳಪೆ ಎಂದು ಬಣ್ಣಿಸಿದ್ದಾರೆ. ಶೇ. 12 ಮಂದಿಗೆ ಅನಿಶ್ಚಿತರಾದರೆ ಶೇ. 14ರಷ್ಟು ಜನರಿಗೆ ಬಜೆಟ್ ಸಮಾಧಾನ ತಂದಿಲ್ಲ ಎಂಬುದು ಈ ಸಮೀಕ್ಷೆ ಹೇಳುತ್ತದೆ.

ಇದನ್ನೂ ಓದಿGovernment Scheme: ಎಸ್​ಸಿಎಸ್​ಎಸ್ ಸ್ಕೀಮ್​ನಿಂದ ಏನೇನು ಲಾಭ? ಈ ಯೋಜನೆಗಿರುವ ಬಡ್ಡಿ, ತೆರಿಗೆ ರಿಯಾಯಿತಿ ಇತ್ಯಾದಿ ವಿವರ ತಿಳಿಯಿರಿ

ನಿರುದ್ಯೋಗಿಗಳಿಗಿಂತ ಸ್ವಂತ ಉದ್ಯೋಗದವರು ಬಜೆಟ್ ಬಗ್ಗೆ ಹ್ಯಾಪಿ ಆಗಿದ್ದಾರೆ. ಉನ್ನತ ಶಿಕ್ಷಣ ಪಡೆದ ವರ್ಗದವರು ಮತ್ತು ಉನ್ನತ ಆರ್ಥಿಕತೆಯ ಜನರಿಗೆ ಬಜೆಟ್ ಹೆಚ್ಚು ಇಷ್ಟವಾಗಿದೆ.

ದೇಶದ ಎಲ್ಲಾ ಸ್ತರಗಳ ನಗರಗಳು, ವರ್ಗಗಳ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಲೋಕಸಭಾ ಚುನಾವಣೆಗಳು ಸಮೀಪದಲ್ಲೇ ಇರುವುದರಿಂದ ಈ ಸಮೀಕ್ಷೆ ಕೇಂದ್ರ ಸರ್ಕಾರದ ಬಗ್ಗೆ ಜನರ ಅಭಿಪ್ರಾಯಕ್ಕೆ ಕನ್ನಡಿಯಂತೆಯೂ ಆಗಿರಬಹುದು.

ಫ್ರಾನ್ಸ್ ಮೂಲದ ಇಪ್ಸೋಸ್ ಸಂಸ್ಥೆ ವಿಶ್ವದ ಮೂರನೇ ಅತಿದೊಡ್ಡ ಮಾರ್ಕೆಟ್ ರಿಸರ್ಚ್ ಕಂಪನಿಯಾಗಿದೆ. 90 ದೇಶಗಳಲ್ಲಿ ಇದರ ಉಪಸ್ಥಿತಿ ಇದ್ದು 19,000 ಉದ್ಯೋಗಿಗಳನ್ನು ಹೊಂದಿದೆ.

ಇದನ್ನೂ ಓದಿBank Crisis: ಅಮೆರಿಕದಲ್ಲಿ ಶೀತವಾದರೆ ಭಾರತಕ್ಕೆ ನೆಗಡಿ ಆಗಲೇಬೇಕಾ? ಅಲ್ಲಿ ಬ್ಯಾಂಕ್ ಬಿದ್ದರೆ ಇಲ್ಲಿ ಭಯಬೀಳಬೇಕಾ? ವಾಸ್ತವ ಸ್ಥಿತಿ ಏನು?

ಮೊದಲ ಅಮೃತಕಾಲ ಬಜೆಟ್

ಇನ್ನು, ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಾದ ಆಯವ್ಯಯ ಪತ್ರವನ್ನು ಮೊದಲ ಅಮೃತಕಾಲ ಬಜೆಟ್ ಎಂದು ಕರೆಯಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ್ದರಿಂದ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. ಈ ಮುಂದಿನ 25 ವರ್ಷವನ್ನು ಅಮೃತಕಾಲ ಎಂದು ಪರಿಗಣಿಸಲಾಗಿದೆ. ಈ ಅಮೃತಕಾದಲ್ಲಿ ಮಂಡಿಸಲಾದ ಮೊದಲ ಬಜೆಟ್ ಇದಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Fri, 17 March 23

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ