ಅಕ್ಕಿ ಗಿರಣಿಗಾರರ ಸಮಸ್ಯೆಗೆ ಸ್ಪಂದಿಸಲು ಆನ್​ಲೈನ್ ಆ್ಯಪ್​ಗೆ ಚಾಲನೆ ನೀಡಿದ ಸಚಿವ ಪ್ರಹ್ಲಾದ್ ಜೋಷಿ

Grievance redressal portal of rice millers: ಹೆಚ್ಚುವರಿ ಸಾರಿಗೆ ವೆಚ್ಚ, ಭತ್ತ ಖರೀದಿಯಲ್ಲಿ ವಿಳಂಬ ಇತ್ಯಾದಿ ಅಕ್ಕಿ ಗಿರಣಿಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಹೊಸ ಪೋರ್ಟಲ್ ಮತ್ತು ಆ್ಯಪ್ ಅನ್ನು ರೂಪಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ಆ್ಯಪ್​ಗೆ ಚಾಲನೆ ನೀಡಿದ್ದಾರೆ.

ಅಕ್ಕಿ ಗಿರಣಿಗಾರರ ಸಮಸ್ಯೆಗೆ ಸ್ಪಂದಿಸಲು ಆನ್​ಲೈನ್ ಆ್ಯಪ್​ಗೆ ಚಾಲನೆ ನೀಡಿದ ಸಚಿವ ಪ್ರಹ್ಲಾದ್ ಜೋಷಿ
ಕುಂದುಕೊರತೆ ನಿವಾರಣಾ ವ್ಯವಸ್ಥೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2024 | 12:54 PM

ನವದೆಹಲಿ, ಅಕ್ಟೋಬರ್ 28: ಅಕ್ಕಿ ಗಿರಣಿಗಾರರ ಕುಂದುಕೊರತೆ ನಿವಾರಣೆಗೆ ಕೇಂದ್ರ ಸರ್ಕಾರ ಹೊಸ ಆ್ಯಪ್ ರೂಪಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಭಾನುವಾರ ಈ ಆನ್ಲೈನ್ ಪೋರ್ಟಲ್ ಅನ್ನು ಘೋಷಿಸಿದ್ದಾರೆ. ಅಕ್ಕಿ ಗಿರಣಿಗಾರರು ಎದುರಿಸುವ ಸಮಸ್ಯೆಗಳಿಗೆ ಈ ಪೋರ್ಟಲ್​ನಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಕ್ಕಿ ಗಿರಣಿಗಾರರಿಗೆ ಸಾರಿಗೆ ವೆಚ್ಚ, ಅಕ್ಕಿ ಖರೀದಿಸುವ ಪ್ರಕ್ರಿಯೆಯಲ್ಲಿ ಆಗುವ ವಿಳಂಬ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ಪೋರ್ಟಲ್​ನ ಉದ್ದೇಶವಾಗಿದೆ.

ರೈಸ್ ಮಿಲ್ ಸಂಸ್ಥೆಗಳಿಗೆ ಆಗುವ ಹೆಚ್ಚುವರಿ ಸಾರಿಗೆ ಶುಲ್ಕ ಸಮಸ್ಯೆಯನ್ನು ನಿರ್ವಹಿಸುವ ಅಧಿಕಾರವನ್ನು ಭಾರತೀಯ ಆಹಾರ ನಿಗಮವು (ಎಫ್​ಸಿಐ) ಪ್ರಾದೇಶಿಕ ಮಟ್ಟಕ್ಕೆ ನಿಯೋಜಿಸಿದೆ. 15 ದಿನಗಳ ಕಾಯುವಿಕೆ ಅವಧಿಯ ಬಳಿಕ ನಿಗದಿತ ಡಿಪೋದಲ್ಲಿ ಅವಕಾಶ ಇಲ್ಲದಿದ್ದಾಗ ಈ ಹೊಸ ನಿಯಮ ಚಾಲನೆಗೆ ಬರುತ್ತದೆ.

ಗಿರಣಿಗಾರರ ಹಿಂದಿನ ಸಮಸ್ಯೆಗಳನ್ನು ಪರಿಹರಿಸಲು ಪ್ರೊಕ್ಯೂರ್ಮೆಂಟ್ ಪೋರ್ಟಲ್​ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಭರವಸೆ ನೀಡಿರುವ ಪ್ರಹ್ಲಾದ್ ಜೋಷಿ, ಈ ಕ್ರಮದಿಂದಾಗಿ ಮಿಲ್ ಮಾಲೀಕರಿಗೆ ಸಮಾಧಾನ ಸಿಕ್ಕಿದೆ ಎಂದಿದ್ಧಾರೆ.

ಇದನ್ನೂ ಓದಿ: ಉತ್ಕೃಷ್ಟ ಗುಣಮಟ್ಟ, ಸೇವೆಯಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ಅನ್ನೂ ಮೀರಿಸುತ್ತೆ ವಂದೇ ಭಾರತ್ ಸ್ಲೀಪರ್ ಟ್ರೈನು

ಈ ಬಾರಿ ಭತ್ತದ ಸಾಸ್ತಾನು ಕಡಿಮೆ ಆಗಲಿದ್ದು, ಅಕ್ಕಿ ಬೆಲೆ ಗಗನಕ್ಕೇರಬಹುದು ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಪ್ರಹ್ಲಾದ್ ಜೋಷಿ ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. 2024-25ರ ಮುಂಗಾರು ಬೆಳೆ ಮಾರುಕಟ್ಟೆ ಋತುವಿನಲ್ಲಿ 185 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗುತ್ತದೆ. ನೂರಕ್ಕೆ ನೂರು ಎಲ್ಲಾ ಭತ್ತವನ್ನೂ ಖರೀದಿಸಲಾಗುವುದು ಎಂದು ಜೋಷಿ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ನಲ್ಲಿ ಭತ್ತದ ಖರೀದಿ ಅಕ್ಟೋಬರ್ 1ರಿಂದಲೇ ಆರಂಭವಾಗಿದೆ. 2,700 ಮಂಡಿಗಳು ಕಾರ್ಯವಹಿಸುತ್ತಿವೆ. ಸೆಪ್ಟಂಬರ್​ನಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭತ್ತ ಬೆಳೆಯಲ್ಲಿ ಹೆಚ್ಚಿನ ತೇವಾಂಶದಿಂದಾಗಿ, ಭತ್ತದ ದಾಸ್ತಾನು ವಿಳಂಬವಾಗಿದೆ. ಇಲ್ಲಿಯವರೆಗೆ 50 ಲಕ್ಷ ಮೆಟ್ರಿಕ್ ಟನ್ ಭತ್ತದ ಖರೀದಿ ಆಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಡೋದರಾದಲ್ಲಿ ಟಾಟಾ ಗ್ರೂಪ್​ನಿಂದ ಮಿಲಿಟರಿ ವಿಮಾನದ ಫ್ಯಾಕ್ಟರಿ; ಸ್ಪೇನ್ ಪ್ರಧಾನಿ ಮತ್ತು ನರೇಂದ್ರ ಮೋದಿಯಿಂದ ಉದ್ಘಾಟನೆ

ಪಂಜಾಬ್ ಸರ್ಕಾರದ ಜೊತೆ ಹಲವು ಬಾರಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಅಕ್ಕಿ ದಾಸ್ತಾನು ವ್ಯವಸ್ಥೆ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲಾಗಿದೆ. ಖಾಸಗಿ ಉದ್ದಿಮೆದಾರರ ಗ್ಯಾರಂಟಿ ಯೋಜನೆ ಅಡಿಯಲ್ಲಿ 31 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ದಾಸ್ತಾನು ಸಾಮರ್ಥ್ಯದ ವ್ಯವಸ್ತೇ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ