ಪೃಥ್ವಿರಾಜ್ ಸಿಂಗ್ ಓಬೇರಾಯ್ ನಿಧನ; ಓಬೇರಾಯ್ ಹೋಟೆಲ್​ಗಳಿಗೆ ಹೊಸ ಎತ್ತರ ಕಲ್ಪಿಸಿದ ಧೀಮಂತ

Prithvi Raj Singh Oberoi Death: ಪೃಥ್ವಿರಾಜ್ ಸಿಂಗ್ ಓಬೇರಾಯ್ ಇಂದು ಮಂಗಳವಾರ ನಿಧನರಾಗಿದ್ದಾರೆ. ಇಬ್ಬರು ಪುತ್ರಿಯರು ಸೇರಿದಂತೆ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಓಬೇರಾಯ್ ಗ್ರೂಪ್​ನ ಲಕ್ಷುರಿ ಹೋಟೆಲ್ ಮತ್ತು ರೆಸಾರ್ಟ್​ಗಳ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶ್ರೇಯಸ್ಸು ಪೃಥ್ವಿರಾಜ್ ಅವರಿಗೆ ಸಲ್ಲಬೇಕು.

ಪೃಥ್ವಿರಾಜ್ ಸಿಂಗ್ ಓಬೇರಾಯ್ ನಿಧನ; ಓಬೇರಾಯ್ ಹೋಟೆಲ್​ಗಳಿಗೆ ಹೊಸ ಎತ್ತರ ಕಲ್ಪಿಸಿದ ಧೀಮಂತ
ಪೃಥ್ವಿರಾಜ್ ಒಬೇರಾಯ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 14, 2023 | 10:53 AM

ನವದೆಹಲಿ, ನವೆಂಬರ್ 14: ಖ್ಯಾತ ಓಬೇರಾಯ್ ಹೋಟೆಲ್ಸ್ ಸಂಸ್ಥೆಯ ಗೌರವಾಧ್ಯಕ್ಷರಾದ ಪೃಥ್ವಿರಾಜ್ ಸಿಂಗ್ ಓಬೇರಾಯ್ (Prithvi Raj Singh Oberoi) ಇಂದು ಮಂಗಳವಾರ ನಿಧನರಾಗಿದ್ದಾರೆ. ಇಬ್ಬರು ಪುತ್ರಿಯರು ಸೇರಿದಂತೆ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಪೃಥ್ವಿರಾಜ್ ಒಬೇರಾಯ್ ಅವರು ಕೆಲ ವರ್ಷಗಳಿಂದ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದರು. ಓಬೇರಾಯ್ ಗ್ರೂಪ್​ನ ಮಾಲೀಕ ಸಂಸ್ಥೆಯಾದ ಇಐಎಚ್ (ಈಸ್ಟ್ ಇಂಡಿಯಾ ಹೋಟೆಲ್ಸ್) ಲಿ ಸಂಸ್ಥೆಗೆ ಅವರು 2002ರಿಂದ 2013ರವರೆಗೂ ಛೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು. ಓಬೇರಾಯ್ ಗ್ರೂಪ್​ನ ಲಕ್ಷುರಿ ಹೋಟೆಲ್ ಮತ್ತು ರೆಸಾರ್ಟ್​ಗಳ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಶ್ರೇಯಸ್ಸು ಪೃಥ್ವಿರಾಜ್ ಅವರಿಗೆ ಸಲ್ಲಬೇಕು.

ಓಬೇರಾಯ್ ಗ್ರೂಪ್​ನ ಸಂಸ್ಥಾಪಕ ಅಧ್ಯಕ್ಷ ಮೋಹನ್ ಸಿಂಗ್ ಒಬೇರಾಯ್ ಅವರ ಮಗನಾದ ಪೃಥ್ವಿರಾಜ್ ಸಿಂಗ್ ಓಬೇರಾಯ್ ಅವರಿಗೆ ಸರ್ಕಾರ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 2013ರಲ್ಲಿ ಸಂಸ್ಥೆಯ ಛೇರ್ಮನ್ ಸ್ಥಾನ ತ್ಯಜಿಸಿ ಗೌರವಾಧ್ಯಕ್ಷರಾಗಿದ್ದರು. ಅವರ ಮಗ ವಿಕ್ರಮ್ ಎಸ್ ಓಬೇರಾಯ್ ಅವರು ಈಸ್ಟ್ ಇಂಡಿಯಾ ಹೋಟೆಲ್ಸ್ ಸಂಸ್ಥೆಯ ಸಿಇಒ ಮತ್ತು ಎಂಡಿಯಾಗಿದ್ದಾರೆ.

ಇದನ್ನೂ ಓದಿ: ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ

ಉತ್ತರಾಖಂಡ್​ನ ದಾರ್ಜೀಲಿಂಗ್​ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದ ಪೃಥ್ವಿರಾಜ್ ಸಿಂಗ್ ಒಬೇರಾಯ್ ಅವರು ಬ್ರಿಟನ್ ಮತ್ತು ಸ್ವಿಟ್ಜರ್​ಲ್ಯಾಂಡ್​ನಲ್ಲಿ ವೃತ್ತಿಪರ ಮತ್ತು ಉನ್ನತ ಶಿಕ್ಷಣ ಪಡೆದಿದ್ದರು. ಸ್ವಿಟ್ಜರ್​ಲ್ಯಾಂಡ್​ನ ಲೌಸಾನೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಶಿಕ್ಷಣ ಕೂಡ ಪಡೆದಿದ್ದ ಅವರು 2004ರಿಂದ ಜೆಟ್ ಏರ್ವೇಸ್​ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಜಾಗತಿಕ ಹೋಟೆಲ್ ಉದ್ಯಮದಲ್ಲಿ 100 ಅತಿ ಪ್ರಬಲ ವ್ಯಕ್ತಿಗಳಲ್ಲಿ ಪೃಥ್ವಿರಾಜ್ ಓಬೇರಾಯ್ ಕೂಡ ಒಬ್ಬರೆಂದು ಇಂಟರ್ನ್ಯಾಷನಲ್ ಹಾಸ್ಪಿಟಾಲಿಟಿ ಇನ್ಸ್​ಟಿಟ್ಯೂಟ್ ಪರಿಗಣಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 14 November 23

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ