AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ಉಯಿಲಿನಲ್ಲಿ ‘ನಿಗೂಢ’ ವ್ಯಕ್ತಿ ಮೋಹಿನಿ; ಟಾಟಾ ಫ್ಯಾಮಿಲಿ ಸದಸ್ಯರಿಗೇ ಅಚ್ಚರಿ

Ratan Tata and Mohini Mohan Dutta: ಕಳೆದ ವರ್ಷದ ಅಕ್ಟೋಬರ್​ನಲ್ಲಿ ಇಹಲೋಕ ತ್ಯಜಿಸಿದ ರತನ್ ಟಾಟಾ ಅವರು ಬರೆದಿಟ್ಟಿದ್ದ ಉಯಿಲು ಬಹಳ ಮಂದಿಯ ಹುಬ್ಬೇರಿಸಿದೆ. ಸಂತಾನ ಇಲ್ಲದ ಅವರು ತಮ್ಮ ಉಯಿಲಿನಲ್ಲಿ ಬರೆದಿಟ್ಟ ಹೆಸರುಗಳು ಸಾಕಷ್ಟು ಅಚ್ಚರಿ ಮೂಡಿಸಿವೆ. ತಮ್ಮ ಪ್ರೀತಿಯ ನಾಯಿಗೂ ಭದ್ರ ಮಾಡಿ ಹೋಗಿದ್ದಾರೆ. ಈ ಮಧ್ಯೆ ಮೋಹಿನಿ ಮೋಹನ್ ದತ್ತಾ ಎನ್ನುವ ವ್ಯಕ್ತಿಗೆ 500 ಕೋಟಿ ರೂ ಮೌಲ್ಯದ ಆಸ್ತಿ ನೀಡಿರುವುದು ತಿಳಿದುಬಂದಿದೆ.

ರತನ್ ಟಾಟಾ ಉಯಿಲಿನಲ್ಲಿ ‘ನಿಗೂಢ’ ವ್ಯಕ್ತಿ ಮೋಹಿನಿ; ಟಾಟಾ ಫ್ಯಾಮಿಲಿ ಸದಸ್ಯರಿಗೇ ಅಚ್ಚರಿ
ರತನ್ ಟಾಟಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2025 | 3:44 PM

Share

ಮುಂಬೈ, ಫೆಬ್ರುವರಿ 7: ವಿಶ್ವದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು ಈಗಲೂ ಸದ್ದು ಮಾಡುತ್ತಿದೆ. ಈ ‘ವಿಲ್’ನಲ್ಲಿ ಹಲವು ಅಚ್ಚರಿಗಳೇ ಅಡಕವಾಗಿರುವುದು ವಿಶೇಷ. ತಮ್ಮ ಕುಟುಂಬ ಸದಸ್ಯರಿಗೆ ಮಾತ್ರವಲ್ಲ, ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರೀತಿಸಿದ ವ್ಯಕ್ತಿ, ಹಾಗೂ ತಮ್ಮ ಪ್ರೀತಿಯ ನಾಯಿಗೂ ಅವರು ಏನಾದರೂ ಕೊಟ್ಟೇ ಹೋಗಿದ್ದಾರೆ. ಮೋಹಿನಿ ಮೋಹನ್ ದತ್ತಾ ಎಂಬ ವ್ಯಕ್ತಿಗೆ 500 ಕೋಟಿ ರೂ ಮೌಲ್ಯದ ಆಸ್ತಿ ನೀಡಲು ರತನ್ ಟಾಟಾ ಉಯಿಲಿನಲ್ಲಿ ಬರೆದಿಟ್ಟಿದ್ದಾರಂತೆ. ಟಾಟಾ ಕುಟುಂಬ ಸದಸ್ಯರು ಮತ್ತು ನಿಕಟವರ್ತಿಗಳಿಗೆಯೇ ಇದು ಅಚ್ಚರಿ ತಂದಿದೆ ಎಂದು ಹೇಳಲಾಗುತ್ತಿದೆ.

ಯಾರು ಈ ಮೋಹಿನಿ ಮೋಹನ್ ದತ್ತಾ?

ಮೋಹಿನಿ ಮೋಹನ್ ದತ್ತಾ ಹೆಚ್ಚು ಮಂದಿಗೆ ಪರಿಚಿತವಾದ ಹೆಸರಲ್ಲ. ಹೆಸರು ಕೇಳಲು ಮಹಿಳೆಯರದ್ದೆನಿಸಬಹುದು. ಆದರೆ, ಇವರು ಪುರುಷರು. ಇವರು ಮತ್ತು ರತನ್ ಟಾಟಾ ಅವರ ಸ್ನೇಹ 64 ವರ್ಷದಷ್ಟು ಹಳೆಯದು. ದತ್ತ ಅವರ ವೃತ್ತಿ ಮತ್ತು ಬಿಸಿನೆಸ್ ಏಳ್ಗೆಯಲ್ಲಿ ರತನ್ ಟಾಟಾ ಪಾತ್ರ ಪ್ರಮುಖವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ರಿಪೋದರ ಶೇ. 6.25ಕ್ಕೆ ಇಳಿಸಿದ ಆರ್​ಬಿಐ; ಕಡಿಮೆ ಆಗಲಿವೆ ಬ್ಯಾಂಕ್ ಸಾಲಗಳ ಬಡ್ಡಿ

ಮೋಹಿನಿ ಮೋಹನ್ ದತ್ತ ಅವರು ಸ್ಟಾಲಿಯನ್ ಎನ್ನುವ ಟ್ರಾವಲ್ ಏಜೆನ್ಸಿ ಇಟ್ಟುಕೊಂಡಿದ್ದವರು. ಟಾಟಾ ಗ್ರೂಪ್ ಒಡೆತನದ ತಾಜ್ ಗ್ರೂಪ್ ಆಫ್ ಹೋಟೆಲ್ಸ್​ನ ಭಾಗವಾದ ತಾಜ್ ಸರ್ವಿಸಸ್ ಕಂಪನಿ ಜೊತೆ ಸ್ಟಾಲಿಯನ್ 2013ರಲ್ಲಿ ವಿಲೀನಗೊಂಡಿತು. ಮೋಹಿನಿ ಮೋಹನ್ ದತ್ತ ಹಾಗೂ ಅವರ ಕುಟುಂಬ ಈ ಸ್ಟಾಲಿಯನ್​ನಲ್ಲಿ ಶೇ.. 80ರಷ್ಟು ಮಾಲಕತ್ವ ಹೊಂದಿತ್ತು ಎನ್ನಲಾಗಿದೆ. ದತ್ತ ಅವರು ಥಾಮಸ್ ಕುಕ್ ಸಂಸ್ಥೆಯೊಂದಿಗೆ ಈ ಹಿಂದೆ ಜೋಡಿತವಾಗಿದ್ದ ಟಿಸಿ ಟ್ರಾವಲ್ ಸರ್ವಿಸಸ್ ಎನ್ನುವ ಕಂಪನಿಯ ನಿರ್ದೇಶಕರೂ ಆಗಿದ್ದರು.

ಮೋಹಿನಿ ಮೋಹನ್ ದತ್ತ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಒಬ್ಬ ಮಗಳು 2015ರಿಂದ ಒಂಬತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್ಸ್​ನಲ್ಲಿ ಕೆಲಸ ಮಾಡಿದ್ದರು. ಈಕೆ ತಾಜ್ ಹೋಟೆಲ್ಸ್​ನಲ್ಲೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಎಂಪಿಸಿ ಸಭೆ ಬಳಿಕ ಆರ್​ಬಿಐನ ಎಸ್​ಡಿಎಫ್, ರಿಪೋ, ಎಸ್​ಎಲ್​ಆರ್ ಇತ್ಯಾದಿ ಎಷ್ಟಿವೆ? ಇಲ್ಲಿದೆ ಇತ್ತೀಚಿನ ದರಗಳ ವಿವರ

2024ರ ಅಕ್ಟೋಬರ್ 9ರಂದು ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟ ರತನ್ ಟಾಟಾ ಲಕ್ಷಾಂತರ ಕೋಟಿ ರೂ ಮೌಲ್ಯದ ಉದ್ಯಮದ ಚುಕ್ಕಾಣಿ ಹೊಂದಿದ್ದರು. ಇದರಲ್ಲಿ ವೈಯಕ್ತಿಕವಾಗಿ 8,000 ಕೋಟಿ ರೂ ನಿವ್ವಳ ಮೌಲ್ಯದ ಸಂಪತ್ತನ್ನು ಹೊಂದಿದ್ದರು. ಹೆಚ್ಚಿನ ಸಂಪತ್ತನ್ನು ತಮ್ಮವೇ ಚಾರಿಟಿ ಸಂಸ್ಥೆಗಳಿಗೆ ಧಾರೆ ಎರೆದುಕೊಟ್ಟಿದ್ದಾರೆ. ಟಾಟಾ ಉದ್ಯಮ ವ್ಯವಹಾರದಲ್ಲಿ ಚಾಣಾಕ್ಷತರಾಗಿದ್ದುದು ಮಾತ್ರವಲ್ಲ, ಮಾನವೀಯತೆಯ ಪ್ರತಿಮೂರ್ತಿಯೂ ಎನಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ