AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆಯ ‘ಲೇಡಿ ವುಲ್ಫ್’ಗೆ ಸೆಬಿ ಮೂಗುದಾರ; ಆಪ್ಷನ್ಸ್ ಕ್ವೀನ್ ಅಸ್ಮಿತಾಗೆ ನಿಷೇಧ ಮತ್ತು ದಂಡ

SEBI bans Finfluencer Asmita Jitesh Patel: ಸೋಷಿಯಲ್ ಮೀಡಿಯಾದಲ್ಲಿ ಷೇರು ಮಾರುಕಟ್ಟೆಯ ಲೇಡಿ ವುಲ್ಫ್ ಮತ್ತು ಆಪ್ಷನ್ಸ್ ಕ್ವೀನ್ ಎಂದು ಹೆಸರಾಗಿರುವ ಅಸ್ವಿತಾ ಜಿತೇಶ್ ಪಟೇಲ್​ಗೆ ಸೆಬಿ ನಿಷೇಧ ಹಾಕಿದೆ. ಸ್ಟಾಕ್ ಮಾರ್ಕೆಟ್​ನಲ್ಲಿ ಯಾವುದೇ ಟ್ರೇಡಿಂಗ್ ಮಾಡದಂತೆ, ಮತ್ತು ಮಾರುಕಟ್ಟೆಯ ಅಕ್ಸೆಸ್ ಸಿಗದಂತೆ ಆಕೆಯನ್ನು ನಿರ್ಬಂಧಿಸಲಾಗಿದೆ. ಅಕ್ರಮವಾಗಿ ಸ್ಟಾಕ್ ರೆಕಮೆಂಡೇಶನ್ಸ್ ಮಾಡುತ್ತಿದ್ದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಷೇರು ಮಾರುಕಟ್ಟೆಯ ‘ಲೇಡಿ ವುಲ್ಫ್’ಗೆ ಸೆಬಿ ಮೂಗುದಾರ; ಆಪ್ಷನ್ಸ್ ಕ್ವೀನ್ ಅಸ್ಮಿತಾಗೆ ನಿಷೇಧ ಮತ್ತು ದಂಡ
ಅಸ್ಮಿತಾ ಜಿತೇಶ್ ಪಟೇಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2025 | 5:54 PM

Share

ನವದೆಹಲಿ, ಫೆಬ್ರುವರಿ 7: ಸೋಷಿಯಲ್ ಮೀಡಿಯಾದಲ್ಲಿ ಹಣಕಾಸು ಮತ್ತು ಟ್ರೇಡಿಂಗ್ ಸಲಹೆಗಳನ್ನು ನೀಡುತ್ತಾ ಖ್ಯಾತರಾಗಿರುವ ಫಿನ್​ಫ್ಲುಯನ್ಸರುಗಳ ಉಪಟಳ ಯದ್ವಾತದ್ವ ಏರುತ್ತಿದೆ. ವಿಡಿಯೋಗಳನ್ನು ಮಾಡುವುದಷ್ಟೇ ಅಲ್ಲ, ಟ್ರೇಡಿಂಗ್ ಸೀಕ್ರೆಟ್ ಕಲಿಸಿಕೊಡುವ ಕೋರ್ಸ್​ಗಳನ್ನು ನೀಡುತ್ತಿರುವುದಾಗಿ ಹೇಳಿ ಅಮಾಯಕ ಜನರಿಂದ ಹಣ ಲೂಟಿ ಮಾಡುತ್ತಿರುವವರು ಬಹಳ ಇದ್ದಾರೆ. ಇಂಥವರಲ್ಲಿ ಅಸ್ಮಿತಾ ಜಿತೇಶ್ ಪಟೇಲ್ ಒಬ್ಬರು. ಕೋರ್ಸ್​ಗಳನ್ನು ಆಫರ್ ಮಾಡಿ ಈಕೆ ಹೂಡಿಕೆದಾರರಿಂದ 104 ಕೋಟಿ ರೂ ಗಳಿಸಿದ್ದಾಳೆ. ಸೆಬಿ ಈಗ ಈಕೆಗೆ ನಿಷೇಧ ಹೇರಿದೆ. 53.67 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜನರಿಂದ ಈಕೆ ಪಡೆದ ಎಲ್ಲಾ 104 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆಯಲ್ಲಿದೆ.

ಕೋರ್ಸ್ ಹೆಸರಿನಲ್ಲಿ ಈಕೆ ಹೂಡಿಕೆ ಸಲಹೆಗಳನ್ನು ನೀಡುತ್ತಿರುವ ಆರೋಪ ಇದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಲಹೆಗಳನ್ನು ನೀಡಬೇಕಾದರೆ ಸೆಬಿಯಲ್ಲಿ ನೊಂದಾಯಿಸಿರಬೇಕು. ಅದರೆ, ಅಸ್ಮಿತಾ ಪಟೇಲ್ ಹಾಗು ಆಕೆಯ ಯಾವ ಸಂಸ್ಥೆಗಳೂ ಕೂಡ ಸೆಬಿ ನೊಂದಾಯಿತ ಅಡ್ವೈಸರ್​ಗಳಲ್ಲ. ಹೀಗಾಗಿ, ಸೆಬಿ ಅಸ್ಮಿತಾರನ್ನು ಟ್ರೇಡಿಂಗ್ ಮಾಡದಂತೆ ನಿಷೇಧಿಸಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಇನ್ಫೋಸಿಸ್​ನಿಂದ ನೂರಾರು ಉದ್ಯೋಗಿಗಳ ಲೇ ಆಫ್; ಎರಡು ವರ್ಷ ಸತಾಯಿಸಿ ನೇಮಕಗೊಂಡಿದ್ದ ಫ್ರೆಷರ್ಸ್​ಗೆ ಶಾಕ್

ಅಸ್ಮಿತಾ ಜಿತೇಶ್ ಪಟೇಲ್ ಸ್ಟಾಕ್ ಮಾರ್ಕೆಟ್​ನ ‘ಶೀ ವುಲ್ಫ್’ ಮತ್ತು ‘ಆಪ್ಷನ್ಸ್ ಕ್ವೀನ್’ ಎಂದು ಹೆಸರಾಗಿದ್ದಾಳೆ. ಈಕೆಯ ಯೂಟ್ಯೂಬ್ ಚಾನಲ್​ಗೆ 5.26 ಲಕ್ಷ ಸಬ್​ಸ್ಕ್ರೈಬರ್ಸ್ ಇದ್ದಾರೆ. ಇನ್ಸ್​ಟಾಗ್ರಾಮ್​ನಲ್ಲಿ 2.90, ಫೇಸ್​ಬುಕ್​ನಲ್ಲಿ 73,000, ಎಕ್ಸ್​ನಲ್ಲಿ 4,200 ಫಾಲೋಯರ್ಸ್ ಇದ್ದಾರೆ. ಈಕೆಯ ಲಿಂಕ್ಡ್​ಇನ್​ನಲ್ಲಿ 1,900 ಕನೆಕ್ಷನ್ಸ್ ಇದ್ದಾರೆ.

ಅಸ್ಮಿತಾಪಟೇಲ್ ಡಾಟ್ ಕಾಂ (asmitapatel.com) ಎನ್ನುವ ವೆಬ್​ಸೈಟ್ ಕೂಡ ಈಕೆ ಹೊಂದಿದ್ದು, ಅದರಲ್ಲಿ ವಿವಿಧ ಟ್ರೇಡಿಂಗ್ ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ. ಈ ಕೋರ್ಸ್ ಪಡೆದವರಿಗೆ ನಿರ್ದಿಷ್ಟ ಸಂಸ್ಥೆಯಲ್ಲಿ ಟ್ರೇಡಿಂಗ್ ಅಕೌಂಟ್ ತೆರೆಯಬೇಕೆಂದು ತಿಳಿಸಲಾಗುತ್ತದೆ. ಬಳಿಕ, ನಿರ್ದಿಷ್ಟಪಡಿಸಲಾದ ಷೇರುಗಳನ್ನು ಟ್ರೇಡಿಂಗ್ ಮಾಡುವಂತೆ ತಿಳಿಸಲಾಗುತ್ತದೆ. ಟೆಲಿಗ್ರಾಂ ಗ್ರೂಪ್​ಗಳನ್ನು ಮಾಡಿ ಅಲ್ಲಿ ಸ್ಟಾಕ್ ಟಿಪ್ಸ್ ಕೊಡಲಾಗುತ್ತದೆ.

ಇದನ್ನೂ ಓದಿ: ರತನ್ ಟಾಟಾ ಉಯಿಲಿನಲ್ಲಿ ‘ನಿಗೂಢ’ ವ್ಯಕ್ತಿ ಮೋಹಿನಿ; ಟಾಟಾ ಫ್ಯಾಮಿಲಿ ಸದಸ್ಯರಿಗೇ ಅಚ್ಚರಿ

ಸೆಬಿ ಇತ್ತೀಚೆಗೆ ಈ ರೀತಿ ಅಕ್ರಮವಾಗಿ ಹೂಡಿಕೆ ಸಲಹೆಗಳನ್ನು ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದೆ. ಬಾಪ್ ಕಾ ಚಾರ್ಟ್ ಎಂದು ಖ್ಯಾತರಾಗಿದ್ದ ಮತ್ತೊಬ್ಬ ಇನ್​ಫ್ಲುಯನ್ಸರ್ ನಸೀರುದ್ದೀನ್ ಅನ್ಸಾರಿ ಎನ್ನುವ ವ್ಯಕ್ತಿಯ ಮೇಲೆ ಸೆಬಿ ಕ್ರಮ ತೆಗೆದುಕೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು