AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: 2,000 ರೂ ನೋಟುಗಳು ಈಗಲೂ ಸಿಂಧುವಾ? ಆರ್​​ಬಿಐ ಗವರ್ನರ್ ಸ್ಪಷ್ಟನೆ ಇದು

RBI governor says Rs 2,000 note still a legal tender: 2023ರ ಮೇ ತಿಂಗಳಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿದ್ದ 2,000 ರೂ ನೋಟುಗಳು ಈಗಲೂ ಮಾನ್ಯವಾಗಿ ಉಳಿದಿವೆಯಾ ಎನ್ನುವ ಸಂದೇಹ ಇದೆ. ಆರ್​ಬಿಐ ಗವರ್ನರ್ ಪ್ರಕಾರ ಈ ನೋಟುಗಳು ಈಗಲೂ ಮಾನ್ಯವೇ. ಆದರೆ, ಚಲಾವಣೆಯಲ್ಲಿಲ್ಲ. 6,000 ಕೋಟಿ ರೂ ಮೌಲ್ಯದ ಈ ನೋಟುಗಳು ಈಗಲೂ ಆರ್​​ಬಿಐಗೆ ಮರಳಿಲ್ಲ. ಇವುಗಳನ್ನು ಮರಳಿಸುವ ಅವಕಾಶ ಈಗಲೂ ಇದೆ.

RBI: 2,000 ರೂ ನೋಟುಗಳು ಈಗಲೂ ಸಿಂಧುವಾ? ಆರ್​​ಬಿಐ ಗವರ್ನರ್ ಸ್ಪಷ್ಟನೆ ಇದು
2000 ರೂ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2025 | 12:55 PM

Share

ನವದೆಹಲಿ, ಜುಲೈ 11: ಎರಡು ವರ್ಷದ ಹಿಂದೆ ಚಲಾವಣೆಯಿಂದ ಹಿಂಪಡೆಯಲಾಗಿದ್ದ 2,000 ರೂ ಮುಖಬೆಲೆಯ ನೋಟುಗಳು ಈ ಅಮಾನ್ಯವಾಗಿ ಎನ್ನುವಂತಹ ಸುದ್ದಿಗಳಿವೆ. ಆದರೆ, ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (RBI Governor Sanjay Malhotra) ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 2,000 ರೂ ನೋಟುಗಳು ಅಮಾನ್ಯವಾಗಿಲ್ಲ, ಆದರೆ ಚಲಾವಣೆಯಲ್ಲೂ ಇಲ್ಲ ಎಂದಿದ್ದಾರೆ. ಭಾರತೀಯ ಆರ್ಥಿಕತೆಯ ಬೆಳವಣಿಗೆ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ (Parliament Standing Committee on Finance) ಜೊತೆ ಮಾತನಾಡುವ ವೇಳೆ ಸಂಜಯ್ ಮಲ್ಹೋತ್ರಾ 2,000 ರೂ ನೋಟಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಜುಲೈ 1ರವರೆಗಿನ ಅಧಿಕೃತ ದತ್ತಾಂಶದ ಪ್ರಕಾರ 2,000 ರೂ ಮುಖಬೆಲೆಯ ನೋಟುಗಳು ಮೂರು ಕೋಟಿಗೂ ಅಧಿಕ ಸಂಖ್ಯೆಯಲ್ಲಿವೆ. ಸುಮಾರು 6,099 ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಆರ್ಬಿಐಗೆ ಮರಳಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Paytm New Features: ಪೇಟಿಎಂನಿಂದ ಹೊಸ ಐದು ಫೀಚರ್ಸ್ ಅಳವಡಿಕೆ; ನೀವು ಗಮನಿಸಿದ್ದೀರಾ?

ಇದನ್ನೂ ಓದಿ
Image
ಫ್ಲೋಟಿಂಗ್ ರೇಟ್ ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಶುಲ್ಕ
Image
ಆರ್​​ಬಿಐಗೆ ಹೊಸ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೆ ರಾಮಚಂದ್ರನ್ ನೇಮಕ
Image
ಭಾರತದ ಫಾರೆಕ್ಸ್ ರಿಸರ್ವ್ ಗರಿಷ್ಠ ಮಟ್ಟದತ್ತ ದಾಪುಗಾಲು
Image
500 ರೂ ನೋಟು ಬ್ಯಾನ್ ಆಗುತ್ತಾ? ಇದು ಸುಳ್ಳು ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ 2023ರ ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂದು ಘೋಷಿಸಿತ್ತು. ಆ ನೋಟುಗಳನ್ನು ಹೊಂದಿರುವವರು ಅವನ್ನು ಬ್ಯಾಂಕುಗಳಿಗೆ ಮರಳಿಸಿ, ಅದಕ್ಕೆ ಬದಲಾಗಿ ಆ ಮೌಲ್ಯಕ್ಕೆ ಸರಿಸಮಾನವಾದ ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಲು, ಅಥವಾ ಆ ಮೌಲ್ಯದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಲು ಅವಕಾಶ ಕೊಟ್ಟಿತ್ತು.

2,000 ರೂ ನೋಟುಗಳನ್ನು ಚಲಾವಣೆಗೆ ಬಳಸಲು ಅವಕಾಶ ಇಲ್ಲ. ಆದರೆ, ಈಗಲೂ ಕೂಡ ಯಾರಾದರೂ ಈ ನೋಟುಗಳನ್ನು ಹೊಂದಿದ್ದರೆ ಬ್ಯಾಂಕ್​​ಗೆ ಮರಳಿಸಬಹುದು. ರೆಗ್ಯುಲರ್ ಬ್ಯಾಂಕುಗಳಲ್ಲಿ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಬದಲಾಗಿ, ಆರ್​ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ಇವುಗಳನ್ನು ಎಕ್ಸ್​ಚೇಂಜ್ ಮಾಡಬಹುದು. ಬಹುತೇಕ ಎಲ್ಲಾ ಪ್​ರಮುಖ ರಾಜ್ಯಗಳಲ್ಲಿ ಪ್ರಾದೇಶಿಕ ಆರ್​ಬಿಐ ಕಚೇರಿಗಳಿವೆ. ದೇಶಾದ್ಯಂತ 19 ಕಡೆ ಇಂಥ ಆಫೀಸ್​​ಗಳಿವೆ. ಕರ್ನಾಟಕದಲ್ಲಿ ಆರ್​ಬಿಐನ ಕಚೇರಿ ಇರುವುದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ. ಇಲ್ಲಿ ಹೋಗಿ 2,000 ರೂ ನೋಟು ವಿನಿಮಯ ಮಾಡಿಕೊಂಡು ಬರಬಹುದು.

ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್​ಬಿಐ ಹೊಸ ನಿಯಮ

ಒಂದು ವೇಳೆ, ಆರ್​​ಬಿಐ ಕಚೇರಿಗೆ ಹೋಗಲು ಸಾಧ್ಯ ಇಲ್ಲ ಎಂದಾದವರು ಅಂಚೆ ಕಚೇರಿ ಸೌಲಭ್ಯ ಬಳಸಬಹುದು. ಅಂಚೆ ಮೂಲಕ ನೋಟುಗಳನ್ನು ಆರ್​ಬಿಐ ಕಚೇರಿ ವಿಳಾಸಕ್ಕೆ ಕಳುಹಿಸಿ, ಆ ಮೌಲ್ಯದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ