AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrency: ಕ್ರಿಪ್ಟೋ ಕರೆನ್ಸಿ ವಹಿವಾಟು ಜೂಜಿಗೆ ಸಮ, ಅದನ್ನು ನಿಷೇಧಿಸಬೇಕು; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

ಸರಿಯಾದ ಮೌಲ್ಯಮಾಪನ ಇಲ್ಲದೆ ನಡೆಯುವ ಕ್ರಿಪ್ಟೊ ವಹಿವಾಟು ಜೂಜಿಗೆ ಸಮ. ಭಾರತದಲ್ಲಿ ಜೂಜಿಗೆ ಅವಕಾಶವಿಲ್ಲ. ಕ್ರಿಪ್ಟೊ ವಹಿವಾಟನ್ನು ಜೂಜಿಗೆ ಸಮ ಎಂದ ಮೇಲೆ ಅದನ್ನೂ ನಿಷೇಧಿಸಬೇಕು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Cryptocurrency: ಕ್ರಿಪ್ಟೋ ಕರೆನ್ಸಿ ವಹಿವಾಟು ಜೂಜಿಗೆ ಸಮ, ಅದನ್ನು ನಿಷೇಧಿಸಬೇಕು; ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್
ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Jan 14, 2023 | 2:28 PM

Share

ಮುಂಬೈ: ಕ್ರಿಪ್ಟೋ ಕರೆನ್ಸಿ ವಹಿವಾಟು ಜೂಜಿಗೆ ಸಮ. ಅದನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆರ್​ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಹೇಳಿದ್ದಾರೆ. ಮುಂಬೈಯಲ್ಲಿ ನಡೆಯುತ್ತಿರುವ ‘ಬ್ಯುಸಿನೆಸ್ ಟುಡೇ ಬ್ಯಾಂಕಿಂಗ್ & ಎಕಾನಮಿಕ್ ಸಮ್ಮಿಟ್​’ನಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್​ಬಿಐ ನೀತಿ ಬಹಳ ಸ್ಪಷ್ಟವಾಗಿದೆ. ಎಲ್ಲ ರೀತಿಯ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸಬೇಕು. ಆದಾಗ್ಯೂ, ಬ್ಲಾಕ್​ಚೈನ್ ತಂತ್ರಜ್ಞಾನಕ್ಕೆ ಬೆಂಬಲ ನೀಡಬೇಕು. ಅದರಲ್ಲಿ ಇತರ ಅನೇಕ ಅಪ್ಲಿಕೇಷನ್​ಗಳು ಇರುತ್ತವೆ ಎಂದು ಅವರು ಹೇಳಿದ್ದಾರೆ. ‘ಕ್ರಿಪ್ಟೊ ಕರೆನ್ಸಿಯ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಇದರ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ದೊರೆಯುವ ಆತಂಕವಿದೆ. ಕೆಲವೊಬ್ಬರು ಕ್ರಿಪ್ಟೊ ಕರೆನ್ಸಿಯನ್ನು ಸ್ವತ್ತು ಎಂದು ಕರೆಯುತ್ತಾರೆ. ಇನ್ನು ಕೆಲವರು ಹಣಕಾಸು ಉತ್ಪನ್ನ ಎನ್ನುತ್ತಾರೆ. ಇಂಥ ಸಂದರ್ಭದಲ್ಲಿ ಅದಕ್ಕೆ ಸ್ಪಷ್ಟವಾದ ವ್ಯಖ್ಯಾನ ಬೇಕಾಗಿದೆ. ಆದರೆ ಅದುವೇ ಇಲ್ಲ’ ಎಂದು ದಾಸ್ ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿಯಲ್ಲಿನ ಏರಿಳಿತಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಸರಿಯಾದ ಮೌಲ್ಯಮಾಪನ ಇಲ್ಲದೆ ನಡೆಯುವ ಕ್ರಿಪ್ಟೊ ವಹಿವಾಟು ಜೂಜಿಗೆ ಸಮ. ಭಾರತದಲ್ಲಿ ಜೂಜಿಗೆ ಅವಕಾಶವಿಲ್ಲ. ಕ್ರಿಪ್ಟೊ ವಹಿವಾಟನ್ನು ಜೂಜಿಗೆ ಸಮ ಎಂದ ಮೇಲೆ ಅದನ್ನೂ ನಿಷೇಧಿಸಬೇಕು ಎಂದು ಅವರು ಹೇಳಿದ್ದಾರೆ.

ದೀರ್ಘಾವಧಿಗೆ ಹೆಚ್ಚಿನ ಬಡ್ಡಿ ದರ ಮುಂದುವರಿಕೆ?

ಆರ್​ಬಿಐ ಬಡ್ಡಿ ದರ ಈಗಿರುವ ಹೆಚ್ಚಿನ ಮಟ್ಟದಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಶಕ್ತಿಕಾಂತ ದಾಸ್ ಸುಳಿವು ನೀಡಿದ್ದಾರೆ. ಚಿಲ್ಲರೆ ಹಣದುಬ್ಬರ ಪ್ರಮಾಣ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಬೆನ್ನಲ್ಲೇ, ಮುಂದಿನ ಹಣಕಾಸು ನೀತಿ ಸಮಿತಿ ಸಭೆ ರೆಪೊ ದರ ಹೆಚ್ಚಳ ಸ್ಥಗಿತಗೊಳಿಸುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈಗಿನ ರಾಜಕೀಯ ಮತ್ತು ಭೌಗೋಳಿಕ ಪರಿಸ್ಥಿತಿಗಳು ಹೀಗೆಯೇ ಮುಂದುವರಿದರೆ ಬಡ್ಡಿ ದರ ಹೆಚ್ಚಿನ ಮಟ್ಟದಲ್ಲೇ ಮುಂದುವರಿಯಲಿದೆ. ಪ್ರಮುಖ ಹಣದುಬ್ಬರವನ್ನು (Core Inflation) ನಾವು ಗಮನದಲ್ಲಿ ಇಟ್ಟಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Retail Inflation: ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ

ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​ನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 5.72ಕ್ಕೆ ಇಳಿಕೆಯಾಗಿರುವುದು ಕೇಂದ್ರ ಸಾಂಖ್ಯಿಕ, ಯೋಜನಾನುಷ್ಠಾನ ಸಚಿವಾಲಯದ ಅಂಕಿಅಂಶಗಳಿಂದ ಇತ್ತೀಚೆಗೆ ತಿಳಿದುಬಂದಿತ್ತು. ಹಣದುಬ್ಬರ ಪ್ರಮಾಣ ತಗ್ಗಿಸುವ ಗುರಿಯೊಂದಿಗೆ ಕಳೆದ ಹಣಕಾಸು ನೀತಿಗಳ ಸಂದರ್ಭ ಆರ್​ಬಿಐ ಸತತವಾಗಿ ರೆಪೊ ದರ ಹೆಚ್ಚಿಸುತ್ತಾ ಬಂದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ