ನವದೆಹಲಿ: ಬ್ಯಾಂಕ್ ಲಾಕರ್ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ಬಿಐ (Reserve Bank of India) ಮಹತ್ವದ ಬದಲಾವಣೆ ಮಾಡಿದೆ. ಪರಿಣಾಮವಾಗಿ, ಲಾಕರ್ಗಳಲ್ಲಿ (Bank Locker) ಇಟ್ಟಿರುವ ವಸ್ತುಗಳು ಅಥವಾ ದಾಖಲೆಗಳು ಕಳೆದು ಹೋದರೆ ಬ್ಯಾಂಕ್ಗಳು ಗ್ರಾಹಕರಿಗೆ ಭಾರಿ ಮೊತ್ತದ ಪರಿಹಾರ ನೀಡಬೇಕಾಗಲಿದೆ. ಇದರಿಂದ ಭೂಮಿಗೆ ಸಂಬಂಧಿಸಿದ ಅಥವಾ ಇತರ ದಾಖಲೆಗಳನ್ನು, ಚಿನ್ನ, ಆಭರಣ ಇತ್ಯಾದಿಗಳನ್ನು ಬ್ಯಾಂಕ್ ಲಾಕರ್ಗಳಲ್ಲಿ ಇಡುವವರಿಗೆ ನೆರವಾಗಲಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕರ್ ನಿಯಮಗಳಲ್ಲಿ ಬದಲಾವಣೆ ಮಾಡಿರುವುದಾಗಿ ಆರ್ಬಿಐ ತಿಳಿಸಿದೆ.
ಲಾಕರ್ಗಳಲ್ಲಿ ಇಟ್ಟಿರುವ ವಸ್ತುಗಳು ಕಳೆದುಹೋದಾಗ ಬ್ಯಾಂಕ್ಗಳಿಂದ ಸರಿಯಾಗಿ ಪರಿಹಾರ ದೊರೆಯದಿರುವ ಮತ್ತು ಸ್ಪಂದನೆ ಸಿಗದಿರುವ ಬಗ್ಗೆ ಅನೇಕ ಗ್ರಾಹಕರು ದೂರು ನೀಡಿದ್ದರು. ಮೌಲ್ಯಯುತ ವಸ್ತು ಕಳೆದುಹೋಗಿ ಹಲವು ಸಮಯವೇ ಕಳೆದರೂ ಬ್ಯಾಂಕ್ನಿಂದ ಸೂಕ್ತ ಪರಿಹಾರ ದೊರೆಯದೇ ಇರುವ ಬಗ್ಗೆ ದೂರಿದ್ದರು. ಇವುಗಳನ್ನು ಆರ್ಬಿಐ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.
ವಸ್ತು ಕಳೆದು ಹೋದರೆ ಭಾರಿ ಮೊತ್ತದ ಪರಿಹಾರ
ಬ್ಯಾಂಕ್ ಲಾಕರ್ನಲ್ಲಿಟ್ಟಿರುವ ಮಹತ್ವದ ವಸ್ತು ಕಳೆದು ಹೋದರೆ ಅಂಥ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್, ಲಾಕರ್ ಬಾಡಿಗೆ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಬ್ಯಾಂಕ್ ಲಾಕರ್ ತೆರೆದ ಬಗ್ಗೆ ಗ್ರಾಹಕರಿಗೆ ಇ-ಮೇಲ್, ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಪಾರದರ್ಶಕತೆ
ಲಾಕರ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಹೇಳಲಾಗಿದೆ. ಗ್ರಾಹಕರ ಅಮೂಲ್ಯವಾದ ವಸ್ತುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ಬಿಐ ಹೇಳಿದೆ. ಖಾಲಿ ಲಾಕರ್ಗಳು, ವೈಟಿಂಗ್ ಲಿಸ್ಟ್ನಲ್ಲಿರುವ ಲಾಕರ್ಗಳ ವಿವರವನ್ನು ಬ್ಯಾಂಕ್ಗಳು ಪ್ರಕಟಿಸಬೇಕು. ಬ್ಯಾಂಕ್ ಕಡೆಯಿಂದ ಗ್ರಾಹಕರಿಗೆ ಸೂಕ್ತ ವಿವರ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಆರ್ಬಿಐ ಹೇಳಿದೆ.
ಭಾರಿ ಮೊತ್ತದ ಶುಲ್ಕ ವಿಧಿಸುವಂತಿಲ್ಲ
ಬ್ಯಾಂಕ್ಗಳು ಲಾಕರ್ ಸೇವೆಗಾಗಿ ಗ್ರಾಹಕರಿಗೆ ಬೇಕಾಬಿಟ್ಟಿ ಶುಲ್ಕ ವಿಧಿಸುವಂತಿಲ್ಲ ಎಂದು ನೂತನ ನಿಯಮದಲ್ಲಿ ಹೇಳಲಾಗಿದೆ. ಉದಾಹರಣೆಗೆ; ಲಾಕರ್ ಬಾಡಿಗೆ 2,000 ರೂ. ಎಂದಿದ್ದರೆ ನಿರ್ವಹಣಾ ಶುಲ್ಕ ಎಂದು 6,000 ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ.
ಸಿಸಿಟಿವಿ ಕಣ್ಗಾವಲು
ಲಾಕರ್ ಕೊಠಡಿಗೆ ಭೇಟಿ ನೀಡುವ, ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹಾಗೂ ಅಲ್ಲಿನ ಪ್ರತಿಯೊಂದು ಚಟುವಟಿಕೆ ಮೇಲೂ ಸಿಸಿಟಿವಿ ಕ್ಯಾಮರಾ ಮೂಲಕ ನಿಗಾ ಇರಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Thu, 1 December 22