ಆರ್​ಬಿಐ ಹಣಕಾಸು ನೀತಿ ನ್ಯೂಟ್ರಲ್​ಗೆ ಬದಲಾವಣೆ; ಅಕಾಮೊಡೇಶನ್ ನೀತಿ ಹಿಂತೆಗೆದದ್ದು ಯಾಕೆ? ಡಿಸೆಂಬರ್​ನಲ್ಲಿ ಬಡ್ಡಿ ಇಳಿಯುತ್ತಾ?

|

Updated on: Oct 09, 2024 | 11:13 AM

RBI MPC Meet: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ನ್ಯೂಟ್ರಲ್​ಗೆ ಬದಲಾಯಿಸಿದೆ. ವಿತ್​ಡ್ರಾಯಲ್ ಆಫ್ ಅಕಾಮೊಡೇಶನ್ ನೀತಿಯನ್ನು ಆರ್​ಬಿಐ ಅನುಸರಿಸುತ್ತಿತ್ತು. ಈಗ ಅದನ್ನು ನ್ಯೂಟ್ರಲ್ ನೀತಿಗೆ ಬದಲಿಸಿರುವುದು ಗಮನಾರ್ಹ. ಮುಂದಿನ ಸಭೆಯಲ್ಲಿ ರಿಪೋದರ ಕಡಿಮೆಗೊಳ್ಳುವ ಸುಳಿವನ್ನು ಆರ್​ಬಿಐ ನೀಡಿದೆ.

ಆರ್​ಬಿಐ ಹಣಕಾಸು ನೀತಿ ನ್ಯೂಟ್ರಲ್​ಗೆ ಬದಲಾವಣೆ; ಅಕಾಮೊಡೇಶನ್ ನೀತಿ ಹಿಂತೆಗೆದದ್ದು ಯಾಕೆ? ಡಿಸೆಂಬರ್​ನಲ್ಲಿ ಬಡ್ಡಿ ಇಳಿಯುತ್ತಾ?
ಹಣ
Follow us on

ನವದೆಹಲಿ, ಅಕ್ಟೋಬರ್ 9: ಆರ್​ಬಿಐ ತನ್ನ ಹಣಕಾಸು ನೀತಿಯ ನಿಲುವನ್ನು ನ್ಯೂಟ್ರಲ್​ಗೆ ಬದಲಾಯಿಸಿದೆ. ಮೂರು ದಿನಗಳ ಕಾಲ ನಡೆದ ಆರ್​ಬಿಐ ಎಂಪಿಸಿ ಸಭೆಯ ಬಳಿಕ ಗವರ್ನರ್ ಶಕ್ತಿಕಾಂತದಾಸ್ ಸುದ್ದಿಗೋಷ್ಠಿಯಲ್ಲಿ ಈ ನಿಲುವನ್ನು ಪ್ರಕಟಿಸಿದ್ದಾರೆ. ಈ ಮೊದಲು ಹಲವು ತಿಂಗಳಿಂದ ಆರ್​ಬಿಐ ವಿತ್​​ಡ್ರಾಯಲ್ ಆಫ್ ಅಕಾಮೊಡೇಶನ್ ನಿಲುವನ್ನು ಹೊಂದಿತ್ತು. ಈಗ ಆ ನೀತಿಯನ್ನು ನ್ಯೂಟ್ರಲ್​ಗೆ ಬದಲಿಸಿದೆ. ಈ ಮೂಲಕ ಮುಂದಿನ ಸಭೆಗಳಲ್ಲಿ ಬಡ್ಡಿದರಗಳನ್ನು ಇಳಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಏನಿದು ಆರ್​ಬಿಐನ ನ್ಯೂಟ್ರಲ್ ಮತ್ತು ಅಕಾಮೊಡೇಶನ್ ನೀತಿ..?

ಆರ್​ಬಿಐನ ಹಣಕಾಸು ನೀತಿಯಲ್ಲಿ ಮೂರು ವಿಧ ಇವೆ. ಅಕಾಮೊಡೇಶನ್, ನ್ಯೂಟ್ರಲ್ ಮತ್ತು ವಿತ್​ಡ್ರಾಯಲ್. ಅಕಾಮೊಡೇಶನ್ ಎಂದರೆ ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಹಣದ ಹರಿವಿನ ಹೆಚ್ಚಳಕ್ಕೆ ಆರ್​ಬಿಐ ಕ್ರಮ ಕೈಗೊಳ್ಳುತ್ತದೆ.

ವಿತ್​ಡ್ರಾಯಲ್ ಆಫ್ ಅಕಾಮೊಡೇಶನ್ ಎಂದರೆ, ಆರ್ಥಿಕ ವ್ಯವಸ್ಥೆಯಲ್ಲಿ ಹಣದ ಹರಿವನ್ನು ಕಡಿಮೆಗೊಳಿಸುವ ಮೂಲಕ ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಆರ್​ಬಿಐ ಯತ್ನಿಸುತ್ತದೆ. ಹಣ ಹೆಚ್ಚಾಗಿದ್ದರೆ ವಸ್ತುಗಳ ಬೆಲೆ ಹೆಚ್ಚುತ್ತದೆ. ಹಣದ ಹರಿವು ಕಡಿಮೆ ಇದ್ದರೆ ವಸ್ತುಗಳ ಬೆಲೆ ಕಡಿಮೆ ಆಗುತ್ತದೆ ಎಂಬುದು ತರ್ಕ.

ಇದನ್ನೂ ಓದಿ: RBI MPC Meet October 2024: ಸತತ ಹತ್ತನೇ ಬಾರಿ ಶೇ. 6.5ರ ರೆಪೋದರದಲ್ಲಿ ಇಲ್ಲ ಬದಲಾವಣೆ; ಆರ್ಥಿಕ ಬೆಳವಣಿಗೆ ಬಗ್ಗೆ ಆರ್​ಬಿಐ ಆಶಾದಾಯಕ

ಆರ್​ಬಿಐನ ನ್ಯೂಟ್ರಲ್ ನೀತಿ

ಆರ್​ಬಿಐನ ನ್ಯೂಟ್ರಲ್ ಹಣಕಾಸು ನೀತಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ಆದ್ಯತೆ ಕೊಡಲಾಗುತ್ತದೆ. ಅಂದರೆ, ಹಣದುಬ್ಬರ ಏರುತ್ತಿದೆ ಎಂದರೆ ರಿಪೋ ದರವನ್ನು ಹೆಚ್ಚಿಸಬಹುದು. ಹಣದುಬ್ಬರ ಕಡಿಮೆ ಆಗುತ್ತಿದೆ ಎಂದರೆ ರಿಪೋ ದರ ಕಡಿಮೆಗೊಳಿಸಬಹುದು. ಹೀಗಾಗಿ, ಆರ್​ಬಿಐನ ನ್ಯೂಟ್ರಲ್ ಪಾಲಿಸಿಯು ಮುಂದಿನ ದಿನಗಳಲ್ಲಿ ಬಡ್ಡಿದರ ಇಳಿಸುವ ಮುನ್ಸೂಚನೆ ಕಾಣುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ