ನವದೆಹಲಿ, ಫೆಬ್ರುವರಿ 6: ಇಂಡಸ್ಇಂಡ್ ಬ್ಯಾಂಕ್ನ ಶೇ. 9.50ರಷ್ಟು ಷೇರುಪಾಲನ್ನು ಖರೀದಿಸಲು ಎಚ್ಡಿಎಫ್ಸಿಗೆ ಆರ್ಬಿಐ ಅನುಮತಿಸಿರುವ ಸುದ್ದಿ ಬಂದಿದೆ. ಇದರ ಬೆನ್ನಲ್ಲೇ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ನ (IndusInd Bank) ಷೇರುಗಳು ಇವತ್ತಿನ (ಫೆ. 6) ಬೆಳಗಿನ ವಹಿವಾಟಿನಲ್ಲಿ ನೀರಸ ಆರಂಭ ಕಂಡಿವೆ. ಬೆಳಗ್ಗೆ 10 ಗಂಟೆಯ ವಹಿವಾಟಿನಲ್ಲಿ ಎರಡೂ ಷೇರುಗಳು ಶೇ. 0.50ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಇಂಡಸ್ಇಂಡ್ ಬ್ಯಾಂಕ್ನಲ್ಲಿ ಶೇ. 9.50ಯಷ್ಟು ಪೇಯ್ಡ್ ಅಪ್ ಷೇರು ಮೊತ್ತ (Paid-up share capital) ಅಥವಾ ವೋಟಿಂಗ್ ರೈಟ್ಸ್ ಪಡೆಯಲು ಅನುಮತಿ ನೀಡಬೇಕೆಂದು ಎಚ್ಡಿಎಫ್ಸಿ ಸಲ್ಲಿಸಿದ ಅರ್ಜಿಗೆ ಆರ್ಬಿಐ ಫೆ. 5ರಂದು ಸಮ್ಮತಿ ನೀಡಿದೆ. ಈ ವಿಷಯವನ್ನು ಇಂಡಸ್ಇಂಡ್ ಬ್ಯಾಂಕ್ ಷೇರುವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ (exchange filing) ತಿಳಿಸಿದೆ.
ಹೂಡಿಕೆದಾರರು ಷೇರನ್ನು ನೇರವಾಗಿ ಕಂಪನಿಯಿಂದ ಖರೀದಿಸಿದರೆ, ಹಣವು ಕಂಪನಿಗೆ ಸಂದಾಯವಾಗುತ್ತದೆ. ಅಂಥ ಖರೀದಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಎನ್ನುತ್ತಾರೆ. ಐಪಿಒ ಇದಕ್ಕೆ ಉದಾಹರಣೆ. ಷೇರು ವಿನಿಮಯ ಕೇಂದ್ರದಲ್ಲಿ ಷೇರು ಖರೀದಿಸಿದರೆ ಆ ಹಣ ಕಂಪನಿಗೆ ಹೋಗುವುದಿಲ್ಲ. ಹೀಗಾಗಿ ಅದು ಪೇಯ್ಡ್ ಅಪ್ ಕ್ಯಾಪಿಟಲ್ ಎನಿಸುವುದಿಲ್ಲ.
ಎಚ್ಡಿಎಫ್ಸಿ ಬ್ಯಾಂಕ್ ಒಂದು ವರ್ಷದ ಒಳಗೆ ಇಂಡಸ್ಇಂಡ್ ಬ್ಯಾಂಕ್ನಲ್ಲಿ ಪ್ರಮುಖ ಷೇರುಪಾಲನ್ನು ಖರೀದಿಸಬೇಕು. ಇಲ್ಲದಿದ್ದರೆ ಈ ಅನುಮೋದನೆ ಅನೂರ್ಜಿತಗೊಳ್ಳುತ್ತದೆ ಎಂದು ಆರ್ಬಿಐ ನಿಬಂಧನೆ ಹಾಕಿದೆ.
ಇದನ್ನೂ ಓದಿ: ಡೀಪ್ಫೇಕ್ ಆಟ; ನಕಲಿ ಸಿಎಫ್ಒ ಸೂಚನೆ ಕೇಳಿ 200 ಕೋಟಿ ರೂ ಕಳೆದುಕೊಂಡ ಉದ್ಯೋಗಿಗಳು
ಇಂಡಸ್ಇಂಡ್ ಬ್ಯಾಂಕ್ನಲ್ಲಿ ಎಚ್ಡಿಎಫ್ಸಿಯ ಅಗ್ರಿಗೇಟ್ ಹೋಲ್ಡಿಂಗ್ ಶೇ. 9.50ಕ್ಕಿಂತ ಹೆಚ್ಚಿರಬಾರದು, ಅಥವಾ ವೋಟಿಂಗ್ ರೈಟ್ಸ್ ಅನ್ನು ಮೀರಬಾರದು ಎಂದು ಆರ್ಬಿಐ ಷರತ್ತು ಹಾಕಿದೆ. ಅಗ್ರಿಗೇಟ್ ಹೋಲ್ಡಿಂಗ್ ಎಂದರೆ ಎಚ್ಡಿಎಫ್ಸಿ ಗ್ರೂಪ್ನ ಎಲ್ಲಾ ಸಂಸ್ಥೆಗಳೂ ಸೇರಿ ಇಂಡಸ್ಇಂಡ್ನಲ್ಲಿ ಹೊಂದಿರುವ ಒಟ್ಟೂ ಷೇರುಪಾಲು. ಈ ಒಟ್ಟೂ ಷೇರುಪಾಲು ಶೇ. 5ಕ್ಕಿಂತ ಕಡಿಮೆ ಆಗಿ ಹೋಗಿದ್ದು, ಅದನ್ನು ಶೇ. 5 ಅಥವಾ ಅದಕ್ಕಿಂತ ಮೇಲೆ ಹೆಚ್ಚಿಸಲು ಎಚ್ಡಿಎಫ್ಸಿ ಮತ್ತೆ ಆರ್ಬಿಐನ ಅನುಮೋದನೆ ಪಡೆಯಬೇಕಾಗುತ್ತದೆ.
ಐಡಿಎಫ್ಸಿ ಬ್ಯಾಂಕ್ನಲ್ಲಿ ಶೇ. 9.50ರವರೆಗೆ ಷೇರುಪಾಲು ಖರೀದಿಸಲು ಎಚ್ಡಿಎಫ್ಸಿ ಬ್ಯಾಂಕ್ಗೆ ಆರ್ಬಿಐ ಅನುಮತಿ ನೀಡಿರುವ ಸುದ್ದಿಗೆ ಎಚ್ಡಿಎಫ್ಸಿ ಬ್ಯಾಂಕ್ ಪ್ರತಿಕ್ರಿಯಿಸಿದೆ. ಇಲ್ಲಿ ಅನುಮೋದನೆ ನೀಡಲಾಗಿರುವುದು ಎಚ್ಡಿಎಫ್ಸಿ ಬ್ಯಾಂಕ್ಗೆ ಅಲ್ಲ, ಎಚ್ಡಿಎಫ್ಸಿ ಗ್ರೂಪ್ಗೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂಡಸ್ಇಂಡ್ ಬ್ಯಾಂಕ್ನಲ್ಲಿ ಪಾಲು ಖರೀದಿಸಲು ಆರ್ಬಿಐ ನೀಡಿರುವ ಅನುಮೋದನೆಯು ಎಚ್ಡಿಎಫ್ಸಿ ಗ್ರೂಪ್ನ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಇನ್ಷೂರೆನ್ಸ್ ವಿಭಾಗಗಳಿಗೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಛೇರ್ಮನ್ ಜೇಯ್ ಲೀ ಆರೋಪಮುಕ್ತ; ಮತ್ತೆ ಜೈಲು ಸೇರುವ ಅಪಾಯದಿಂದ ಪಾರು
ಹಿಂದೂಜಾ ಗ್ರೂಪ್ಗೆ ಸೇರಿದ ಇಂಡಸ್ಇಂಡ್ ಬ್ಯಾಂಕ್ ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ 2,297.8 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಏಪ್ರಿಲ್ನಿಂದ ಡಿಸೆಂಬರ್ವರೆಗೆ ಆ ಬ್ಯಾಂಕ್ನ ಲಾಭ 6,628 ಕೋಟಿ ರೂ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ