ಹಣಕಾಸು ವಂಚಕರ ಬೇಟೆಗೆ ಮ್ಯೂಲ್ ಹಂಟರ್ ಸಜ್ಜು; ಬೆಂಗಳೂರಿನ ಆರ್​ಬಿಐ ಇನ್ನೋವೇಶನ್ ತಂಡ ರೂಪಿಸಿದ ಪ್ರಬಲ ಎಐ ಮಾಡಲ್

RBI's Mule Hunter AI: ಅಕ್ರಮ ಹಣಕಾಸು ವರ್ಗಾವಣೆ ಮಾಡುವ ದುಷ್ಕರ್ಮಿಗಳ ಕೈಗೊಂಬೆಯಂತಿರುವ ಮ್ಯೂಲ್ ಅಕೌಂಟ್​ಗಳ ಪತ್ತೆಗೆ ಎಐ ಟೂಲ್ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ಆರ್​​ಬಿಐ ಇನ್ನೋವೇಶನ್ ಹಬ್​ನಲ್ಲಿ ಮ್ಯೂಲ್ ಹಂಟರ್ ಎಐ ಸಾಧನ ರೂಪಿಸಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಣಕಾಸು ವಂಚಕರ ಬೇಟೆಗೆ ಮ್ಯೂಲ್ ಹಂಟರ್ ಸಜ್ಜು; ಬೆಂಗಳೂರಿನ ಆರ್​ಬಿಐ ಇನ್ನೋವೇಶನ್ ತಂಡ ರೂಪಿಸಿದ ಪ್ರಬಲ ಎಐ ಮಾಡಲ್
ಆರ್ಥಿಕ ಅಪರಾಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 06, 2024 | 3:02 PM

ನವದೆಹಲಿ, ಡಿಸೆಂಬರ್ 6: ಹಣಕಾಸು ಅಕ್ರಮಗಳನ್ನು ಪತ್ತೆ ಮಾಡಿ ನಿಗ್ರಹಿಸುವ ಸಲುವಾಗಿ ಆರ್​ಬಿಐನ ತಂಡವೊಂದು ಮ್ಯೂಲ್ ಹಂಟರ್ ಎನ್ನುವ ಎಐ ಮಾಡಲ್​ವೊಂದನ್ನು ಅಭಿವೃದ್ಧಿಪಡಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸುವಾಗ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಜಾಲವನ್ನು ಘೋಷಿಸಿದ್ದಾರೆ. ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಕೆಯಾಗುವ ಕಳ್ಳ ಬ್ಯಾಂಕ್ ಖಾತೆಗಳು ಅಥವಾ ಮ್ಯೂಲ್ ಅಕೌಂಟ್​ಗಳನ್ನು ನಿಗ್ರಹಿಸಲು ಎಐ ಮಾಡಲ್ ಅನ್ನು ರೂಪಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ತಿಳಿಸಿದರು.

ಬೆಂಗಳೂರಿನಲ್ಲಿರುವ ಆರ್​ಬಿಐನ ಇನ್ನೋವೇಶನ್ ಹಬ್​ನಲ್ಲಿ ಈ ಎಐ ಮಾಡಲ್ ಅಭಿವೃದ್ಧಿಪಡಿಸಲಾಗಿದೆ. ಆರ್ಟಿಫಿಯಲ್ ಇಂಟೆಲಿಜೆನ್ಸ್ ಅಥವಾ ಮೆಷೀನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರೂಪಿಸಲಾಗಿರುವ ಈ ಟೂಲ್ ಮ್ಯೂಲ್ ಅಕೌಂಟ್​ಗಳನ್ನು ಪತ್ತೆ ಮಾಡುವ ಚಾಕಚಕ್ಯತೆ ಹೊಂದಿದೆ ಎನ್ನಲಾಗುತ್ತಿದೆ. ಈ ಮ್ಯೂಲ್ ಅಕೌಂಟ್​ಗಳಿಂದಾಗಿ ಹಣಕಾಸು ಅಕ್ರಮ, ತೆರಿಗೆ ವಂಚನೆ ಇತ್ಯಾದಿ ಹೆಚ್ಚುತ್ತಿದೆ. ಮ್ಯೂಲ್ ಹಂಟರ್ ಎಐ ಮಾಡಲ್ ಹೇಗೆ ಈ ಅಕ್ರಮ ತಡೆಯಬಲ್ಲುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ಯುಪಿಐ ಕ್ರೆಡಿಟ್ ಲೈನ್ ಅವಕಾಶ ವಿಸ್ತರಣೆ; ಎಸ್​ಎಫ್​ಬಿಗಳಿಗೆ ಒಳ್ಳೆಯ ಲಾಭದ ನಿರೀಕ್ಷೆ

ಏನಿದು ಮ್ಯೂಲ್ ಅಕೌಂಟ್?

ದೊಡ್ಡ ಮೊತ್ತದ ಅಕ್ರಮ ಹಣ ವರ್ಗಾವಣೆ ಮಾಡಬೇಕೆಂದಿರುವ ಆರ್ಥಿಕ ಅಪರಾಧಿಗಳು ಯಾವುದಾದರೂ ಡಮ್ಮಿ ಅಕೌಂಟ್ ಅಥವಾ ಯಾರದ್ದಾದರೂ ಬ್ಯಾಂಕ್ ಖಾತೆ ಮೂಲಕ ಅದನ್ನು ಕಳುಹಿಸಬಹುದು. ಅಂಥ ಅಕೌಂಟ್ ಅನ್ನು ಮ್ಯೂಲ್ ಅಕೌಂಟ್ ಎನ್ನುತ್ತಾರೆ. ಇಲ್ಲಿ ಮ್ಯೂಲ್ ಅಕೌಂಟ್​ದಾರರು ಈ ಆರ್ಥಿಕ ಅಪರಾಧದಲ್ಲಿ ಸ್ವಯಿಚ್ಛೆಯಿಂದ ಪಾಲ್ಗೊಂಡಿರಬಹುದು ಅಥವಾ ಸ್ವಲ್ಪ ಹಣದ ಆಸೆಯಿಂದಲೂ ಪಾಲ್ಗೊಂಡಿರಬಹುದು. ಆದರೆ, ಅಕ್ರಮ ಹಣಕಾಸು ವರ್ಗಾವಣೆಯಲ್ಲಿ ಯಾರೇ ಭಾಗಿಯಾದರೂ ಅದು ಆರ್ಥಿಕ ಅಪರಾಧವೆಂದು ಪರಿಗಣಿತವಾಗುತ್ತದೆ.

ದೇಶದಲ್ಲಿ ದಾಖಲಾಗಿರುವ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಶೇ. 67ಕ್ಕಿಂತಲೂ ಹೆಚ್ಚಿನ ಪಾಲು ಆನ್​ಲೈನ್ ಹಣಕಾಸು ವಂಚನೆಗಳೇ ಆಗಿವೆ. ಈ ವಂಚನೆ ಪ್ರಕರಣಗಳನ್ನು ಭೇದಿಸಲು ಮ್ಯೂಲ್ ಅಕೌಂಟ್​ಗಳೇ ಒಂದು ರೀತಿಯಲ್ಲಿ ತಡೆಗೋಡೆಯಂತಿರುತ್ತವೆ. ಅನೇಕ ದೊಡ್ಡ ಆರ್ಥಿಕ ಅಪರಾಧಿಗಳ ಹಣಕಾಸು ಜಾಡು ಹಿಡಿಯಲು ಯತ್ನಿಸುವಾಗ ಈ ಮ್ಯೂಲ್ ಅಕೌಂಟ್​ಗಳಿಂದಾಗಿ ಆ ಜಾಡು ಕಣ್ತಪ್ಪಬಹುದು. ರಿಸರ್ವ್ ಬ್ಯಾಂಕ್ ರೂಪಿಸಿರುವ ಮ್ಯೂಲ್ ಹಂಟರ್ ಡಾಟ್ ಎಐ ಸಾಧನವು ಇಂಥ ಕೊಂಡಿ ಅಕೌಂಟ್​ಗಳನ್ನ ಪತ್ತೆ ಮಾಡುವ ಉದ್ದೇಶ ಹೊಂದಿರುತ್ತದೆ.

ಇದನ್ನೂ ಓದಿ: RBI MPC Updates: ರಿಪೋ ದರ ಇಳಿಸದ ಆರ್​ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ

ಆರ್​ಬಿಐ ಬಳಿ ಇಂಥ ಕಳ್ಳ ಅಕೌಂಟ್​ಗಳನ್ನು ಪತ್ತೆ ಮಾಡಲು ಸಾಂಪ್ರದಾಯಿಕ ವಿಧಾನಗಳಿವೆ. ಆದರೆ, ಅವುಗಳ ಪರಿಣಾಮ ಸೀಮಿತ ಮಟ್ಟದಲ್ಲಿ ಮಾತ್ರವೇ ಇರುತ್ತದೆ. ಎಐ ಆಧಾರಿತ ಟೂಲ್​ಗಳು ಸಂಕೀರ್ಣ ಅಲ್ಗಾರಿದಂಗಳನ್ನು ಬಳಸಿ ಬೃಹತ್ ವಹಿವಾಟು ದತ್ತಾಂಶಗಳನ್ನು ಜಾಲಾಡಿ ವಂಚಕ ಖಾತೆಗಳ ಜಾಡು ಹಿಡಿಯಲು ಪರಿಣಾಮಕಾರಿ ಎನಿಸುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ