ಮಾರುಕಟ್ಟೆ ಕಮಾಲ್; ನಿಮಿಷಗಳಲ್ಲೇ ಹಲವು ಕೋಟಿ ಲಾಭ ಮಾಡಿದ ರೇಖಾ ಝುಂಝುನವಾಲ
Federal Bank Share Surge: Rekha Jhunjhunwala Gains Rs 67 Cr in Minutes: ಪ್ರಮುಖ ಹೂಡಿಕೆದಾರರಾದ ರೇಖಾ ಝುಂಝುನವಾಲಾ ಅವರಿಗೆ ದೀಪಾವಳಿ ಮೊದಲ ದಿನ ಫೆಡರಲ್ ಬ್ಯಾಂಕ್ ಷೇರುಗಳಿಂದ 67 ಕೋಟಿ ರೂ ಲಾಭ ದೊರೆತಿದೆ. ಬ್ಯಾಂಕ್‌ನ ಬಲವಾದ ಎರಡನೇ ತ್ರೈಮಾಸಿಕ ಫಲಿತಾಂಶಗಳಿಂದ ಷೇರುಬೆಲೆ ಶೇ 5.34ರಷ್ಟು ಏರಿದ್ದು, ಕೆಲವೇ ನಿಮಿಷಗಳಲ್ಲಿ ಅವರ ಸಂಪತ್ತು ಹೆಚ್ಚಾಯಿತು. ಇದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ.

ನವದೆಹಲಿ, ಅಕ್ಟೋಬರ್ 20: ದೇಶದ ಪ್ರಮುಖ ಷೇರು ಹೂಡಿಕೆದಾರರಲ್ಲಿ (stock market) ಒಬ್ಬರೆನಿಸಿರುವ ರೇಖಾ ಝುಂಝುನವಾಲ (Rekha Jhunjhunwala) ಅವರಿಗೆ ಈ ದೀಪಾವಳಿಯ ಮೊದಲ ದಿನವೇ ಅದ್ಭುತ ಯೋಗ ಸಿಕ್ಕಿದೆ. ಇವತ್ತು ಫೆಡರಲ್ ಬ್ಯಾಂಕ್‌ನ ಷೇರುಗಳ ದೆಸೆಯಿಂದ ರೇಖಾ ಅವರು 67 ಕೋಟಿ ರೂ ಲಾಭ ಮಾಡಿದ್ದಾರೆ. ಅದೂ ಕೆಲವೇ ನಿಮಿಷಗಳಲ್ಲಿ ಅವರ ಶ್ರೀಮಂತಿಕೆ ಹೆಚ್ಚಿದೆ.
ಇವತ್ತು ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಫೆಡರಲ್ ಬ್ಯಾಂಕ್‌ನ ಷೇರು ಬೆಲೆ ದಾಖಲೆ ಮಟ್ಟಕ್ಕೆ ಏರಿದೆ. ಬರೋಬ್ಬರಿ ಶೇ. 5.34ರಷ್ಟು ಏರಿಕೆ ಆಗಿದೆ. ಹಿಂದಿನ ದಿನ 212.40 ರೂನಲ್ಲಿ ಅಂತ್ಯಗೊಂಡಿದ್ದ ಫೆಡರಲ್ ಬ್ಯಾಂಕ್‌ನ ಷೇರುಬೆಲೆ ಇವತ್ತು ಸೋಮವಾರ 223 ರೂ ತಲುಪಿದೆ.
ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್ಗಳನ್ನು ಮಾಡುವಾಗ ಹುಷಾರ್
ಫೆಡರಲ್ ಬ್ಯಾಂಕ್ನಲ್ಲಿ ರೇಖಾ ಝುಂಝುನವಾಲ ಅವರು ಶೇ. 2.42ರಷ್ಟು ಷೇರುಗಳ ಮಾಲಿಕತ್ವ ಹೊಂದಿದ್ದಾರೆ. ಸುಮಾರು 5.90 ಕೋಟಿಯಷ್ಟು ಫೆಡರಲ್ ಬ್ಯಾಂಕ್ ಷೇರುಗಳ ಒಡತಿ ಅವರು. ಈ ಷೇರುಬೆಲೆ ಹೆಚ್ಚಿದ ಪರಿಣಾಮ ರೇಖಾ ಝುಂಝುನವಾಲ ಅವರ ಸಂಪತ್ತಿನ ಮೌಲ್ಯ ಕೂಡ ಹೆಚ್ಚಿದೆ. ಫೆಡರಲ್ ಬ್ಯಾಂಕ್ನಲ್ಲಿನ ರೇಖಾ ಅವರ ಪಾಲಿನ ಷೇರುಗಳ 67 ಕೋಟಿ ರೂನಷ್ಟು ಹೆಚ್ಚಾಗಿದೆ. ರೇಖಾ ಅವರು ಇತ್ತೀಚೆಗೆ ಸ್ವರ್ಗಸ್ಥರಾದ ಖ್ಯಾಗ ಹೂಡಿಕೆದಾರ ರಾಕೇಶ್ ಝುಂಝನವಾಲ ಅವರ ಪತ್ನಿ. ತಮ್ಮ ಪತಿಯ ಹೂಡಿಕೆಗಳನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಫೆಡರಲ್ ಬ್ಯಾಂಕ್‌ನ ಒಟ್ಟಾರೆ ಷೇರು ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲ್ 53,976 ಕೋಟಿ ರೂಗೆ ಏರಿದೆ. ಸೋಮವಾರ ಅತಿಹೆಚ್ಚು ಮಾರಾಟವಾದ ಷೇರುಗಳಲ್ಲಿ ಫೆಡರಲ್ ಬ್ಯಾಂಕ್ನದ್ದೂ ಒಂದು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಈ ಬ್ಯಾಂಕ್‌ನ 5.22 ಲಕ್ಷ ಷೇರುಗಳು ಟ್ರೇಡ್ ಆಗಿವೆ.
ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ಫೆಡರಲ್ ಬ್ಯಾಂಕ್ ಷೇರುಗಳಿಗೆ ಯಾಕಿಷ್ಟು ಡಿಮ್ಯಾಂಡು?
ಫೆಡರಲ್ ಬ್ಯಾಂಕ್ ಈ ಬಾರಿ ಎರಡನೇ ತ್ರೈಮಾಸಿಕದಲ್ಲಿ (2025ರ ಜುಲೈ-ಸೆಪ್ಟೆಂಬರ್) ಉತ್ತಮ ಫಲಿತಾಂಶ ನೀಡಿದೆ. ಅದರ ಆದಾಯ ಮತ್ತು ಲಾಭದಲ್ಲಿ ಹೆಚ್ಚಳ ಆಗಿದೆ. ಎಲ್ಲರ ನಿರೀಕ್ಷೆಗಿಂತ ಹೆಚ್ಚಿನ ಬ್ಯುಸಿನೆಸ್ ಕಂಡಿದೆ. ಭವಿಷ್ಯದ ನಿರೀಕ್ಷೆಯೂ ಹೆಚ್ಚಿದೆ. ಇದು ಹೂಡಿಕೆದಾರರಿಗೆ ಹೆಚ್ಚಿನ ವಿಶ್ವಾಸ ಮೂಡಲು ಕಾರಣವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




