ಮುಂಬೈ, ಆಗಸ್ಟ್ 28: ರಿಲಾಯನ್ಸ್ ಜಿಯೋದ ಬಹುನಿರೀಕ್ಷೆಯ ಏರ್ಫೈಬರ್ ಸರ್ವಿಸ್ನ (Jio AirFiber) ಬಿಡುಗಡೆ ಸಮಯ ನಿಗದಿಯಾಗಿದೆ. ರಿಲಾಯನ್ಸ್ನ 46ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಏರ್ಫೈಬರ್ ಸರ್ವಿಸ್ ಅನ್ನು ಪ್ರಸ್ತಾಪಿಸಿದ್ದು, ಗಣೇಶ ಚತುರ್ಥಿ ಹಬ್ಬದ ದಿನವಾದ ಸೆಪ್ಟೆಂಬರ್ 19ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಏರ್ಫೈಬರ್ ಸೇವೆ ಮೂಲ ಜಿಯೋ ದಿನಕ್ಕೆ ಒಂದೂವರೆ ಲಕ್ಷ ಕನೆಕ್ಷನ್ಗಳ ವೇಗದಲ್ಲಿ ಒಟ್ಟು 20 ಕೋಟಿಯಷ್ಟು ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. ‘ಭಾರತದಾದ್ಯಂತ ಇರುವ 5ಜಿ ನೆಟ್ವರ್ಕ್ ಅನ್ನು ಜಿಯೋ ಏರ್ಫೈಬರ್ ಬಳಸುತ್ತದೆ. ಇದರಿಂದ ದಿನಕ್ಕೆ 1.5 ಲಕ್ಷ ಕನೆಕ್ಷನ್ ಕೊಡಲು ಸಾಧ್ಯವಾಗುತ್ತದೆ,’ ಎಂದು ಮುಕೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ.
ರಿಲಾಯನ್ಸ್ ಜಿಯೋದ ಬ್ರಾಡ್ಬ್ಯಾಂಡ್ ಸೇವೆಯಾದ ಜಿಯೋಫೈಬರ್ ಸೇವೆಯನ್ನು 1 ಕೋಟಿ ಗ್ರಾಹಕರು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಜಿಯೋ ಏರ್ಫೈಬರ್ ಸೇವೆಯನ್ನು 20 ಕೋಟಿ ಗ್ರಾಹಕರಿಗೆ ತಲುಪಿಸುವ ಗುರಿ ಇದೆ ಎಂದು ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: ಜಿಯೋ ಭಾರತ್, ಏರ್ಫೈಬರ್, ಸ್ಮಾರ್ಟ್ ಹೋಮ್, ಇನ್ಷೂರೆನ್ಸ್, ಅನಿಲ ಉತ್ಪಾದನೆ; ರಿಲಾಯನ್ಸ್ ಮಹಾಸಭೆಯ ಮುಖ್ಯಾಂಶಗಳು
ಜಿಯೋದ ಏರ್ಫೈಬರ್ ವಯರ್ ಕನೆಕ್ಷನ್ ಇಲ್ಲದೆಯೇ ಹೈ ಸ್ಪೀಡ್ ಇಂಟರ್ನೆಟ್ ಸರ್ವಿಸ್ ನೀಡುತ್ತದೆ. ಫೈಬರ್ ಅಥವಾ ಬ್ರಾಡ್ಬ್ಯಾಂಡ್ ಮೂಲಕ ಸಿಗುವ ಇಂಟರ್ನೆಟ್ ವೇಗ ಏರ್ಫೈಬರ್ ಸರ್ವಿಸ್ನಲ್ಲಿ ಸಿಗುತ್ತದೆ.
ಇದರ ಬಳಕೆದಾರರು ತಮ್ಮ ಮನೆ ಅಥವಾ ಕಚೇರಿಯಲ್ಲಿ ಟ್ರೂ 5ಜಿ ಬಳಸಿ ತಮ್ಮದೇ ಸ್ವಂತ ವೈಫೈ ಹಾಟ್ಸ್ಪಾಟ್ ಹೊಂದಬಹುದು. ಗೀಗಾಬಿಟ್ ಸ್ಪೀಡ್ನ ಇಂಟರ್ನೆಟ್ ಸ್ಪೀಡ್ ಸಿಗುತ್ತದೆ.
ಇದನ್ನೂ ಓದಿ: ರಿಲಾಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ; ಮಂಡಳಿ ನಿರ್ದೇಶಕ ಸ್ಥಾನಕ್ಕೇರಿದ ಮೂವರು ಮಕ್ಕಳು
ಭಾರತದಲ್ಲಿ ಏರ್ಫೈಬರ್ ಸರ್ವಿಸ್ ನೀಡುತ್ತಿರುವುದು ಜಿಯೋ ಮೊದಲಲ್ಲ. ಏರ್ಟೆಲ್ ಸಂಸ್ಥೆ ಎಕ್ಸ್ಟ್ರೀಮ್ ಏರ್ಫೈಬರ್ ಸರ್ವಿಸ್ ಬಿಡುಗಡೆ ಮಾಡಿದೆ. ಇದೂ ಕೂಡ ಏರ್ಟೆಲ್ನ 5ಜಿ ಪ್ಲಸ್ ನೆಟ್ವರ್ಕ್ ಬಳಸಿ ವಯರ್ಲೆಸ್ ಆಗಿ ವೇಗದ ಇಂಟರ್ನೆಟ್ ಒದಗಿಸುತ್ತದೆ.
ಇದೇ ವೇಳೆ ಜಿಯೋದ ಏರ್ಫೈಬರ್ ಸೇವೆ ಬಿಡುಗಡೆ ದಿನಾಂಕ ಗೊತ್ತಾಗಿದೆಯಾದರೂ ಅದರ ಸಬ್ಸ್ಕ್ರಿಪ್ಷನ್ ದರಗಳೆಷ್ಟು ಎಂಬುದು ಗೊತ್ತಾಗಿಲ್ಲ. ಹಿಂದೆ ಬಂದಿರುವ ವರದಿಗಳ ಪ್ರಕಾರ ಪ್ರಸ್ತುತ ಇರುವ ಮಾರುಕಟ್ಟೆ ಬೆಲೆಗಿಂತ ಶೇ. 20ರಷ್ಟು ಕಡಿಮೆ ದರದಲ್ಲಿ ಜಿಯೋ ಏರ್ಫೈಬರ್ ಸೇವೆ ಸಿಗಲಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ