Russia- Ukraine Crisis: ಪೆಟ್ರೋಲ್- ಡೀಸೆಲ್ ದರ ಲೀಟರ್​ಗೆ 15ರಿಂದ 22 ರೂಪಾಯಿ ಏರಿಕೆ ನಿರೀಕ್ಷೆ

Russia- Ukraine Crisis: ಪೆಟ್ರೋಲ್- ಡೀಸೆಲ್ ದರ ಲೀಟರ್​ಗೆ 15ರಿಂದ 22 ರೂಪಾಯಿ ಏರಿಕೆ ನಿರೀಕ್ಷೆ
ಸಾಂದರ್ಭಿಕ ಚಿತ್ರ

ರಷ್ಯಾ- ಉಕ್ರೇನ್ ಬಿಕ್ಕಟ್ಟು ಜಾಗತಿಕ ತೈಲ ಬೆಲೆ ಏರಿಕೆಗೆ ಕಾರಣವಾಗಿದ್ದು, ಭಾರತದಲ್ಲಿ ಮುಂದಿನ ವಾರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಲೀಟರ್​ಗೆ 15ರಿಂದ 22 ರೂಪಾಯಿ ಹೆಚ್ಚಳ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

TV9kannada Web Team

| Edited By: Srinivas Mata

Mar 05, 2022 | 11:36 PM

ರಷ್ಯಾ- ಉಕ್ರೇನ್ ಬಿಕ್ಕಟ್ಟು (Russia- Ukraine Crisis) ಜಾಗತಿಕ ಕಚ್ಚಾ ತೈಲ ಬೆಲೆಯನ್ನು ಅಲ್ಪಾವಧಿಯಲ್ಲಿ ಪ್ರತಿ ಬ್ಯಾರೆಲ್​ಗೆ 95ರಿಂದ 125 ಯುಎಸ್​ಡಿ ಆಗಬಹುದು ಎಂಬ ನಿರೀಕ್ಷೆಯಿದೆ. ಭೌಗೋಳಿಕ- ರಾಜಕೀಯ ಉದ್ವಿಗ್ನತೆಯು ಜಾಗತಿಕ ಕಚ್ಚಾ ತೈಲ ದರ ಏರಿಕೆಗೆ ಕಾರಣ ಆಗಿದ್ದು, ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 15ರಿಂದ 22 ರೂಪಾಯಿ ಹೆಚ್ಚಳ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ತೈಲ ಮಾರುಕಟ್ಟೆ ಕಂಪೆನಿಗಳು ಮಾರ್ಚ್ 7ರಂದು ಅಥವಾ ಆ ನಂತರದಲ್ಲಿ ಸದ್ಯದ ದರಗಳನ್ನು ಪರಿಷ್ಕರಿಸಲಿದೆ ಎಂದು​ ವ್ಯಾಪಕವಾಗಿ ಅಂದುಕೊಳ್ಳಲಾಗುತ್ತಿದೆ. ಮಾರ್ಚ್ 7ರಂದು ಈಗಿನ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಕೊನೆ ಆಗುತ್ತದೆ. ಆದರೆ ಅಬಕಾರಿ ಸುಂಕವು ಇಳಿಕೆ ಮಾಡುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು, ಆದರೆ ಸಂಪೂರ್ಣವಾಗಿ ಅಲ್ಲ.

ಸದ್ಯಕ್ಕೆ ಭಾರತಕ್ಕೆ ಅಗತ್ಯ ಇರುವ ಕಚ್ಚಾ ತೈಲದ ಅಗತ್ಯದ ಪೈಕಿ ಶೇ 85ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಹೊರತಾಗಿ, ಹೆಚ್ಚಿನ ತೈಲ ದರದ ಪರಿಣಾಮವಾಗಿ ಸಾಮಾನ್ಯವಾದ ಹಣದುಬ್ಬರ ಟ್ರೆಂಡ್ ಜಾಸ್ತಿಯಾಗುವುದಕ್ಕೆ ಕಾರಣ ಆಗಿದೆ. ಈಗಾಗಲೇ ಭಾರತದ ಮುಖ್ಯ ಹಣದುಬ್ಬರದ ಅಳತೆಗೋಲು- ಗ್ರಾಹಕ ದರ ಸೂಚ್ಯಂಕ (ಸಿಪಿಐ), ಅದು ರೀಟೇಲ್​ ಹಣದುಬ್ಬರವನ್ನು ಪ್ರತಿನಿಧಿಸುತ್ತದೆ. ಜನವರಿ ತಿಂಗಳಲ್ಲಿ ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಕಿಕೊಂಡಿದ್ದ ಮಿತಿಯನ್ನು ಮೀರಿತ್ತು. ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಈ ಹೆಚ್ಚಳ ಆಗಿತ್ತು. ಕೈಗಾರಿಕೆ ಲೆಕ್ಕಾಚಾರ ಪ್ರಕಾರ, ಕಚ್ಚಾ ತೈಲ ಬೆಲೆಯಲ್ಲಿನ ಶೇ 10ರಷ್ಟು ಬೆಲೆ ಏರಿಕೆಯು ಗ್ರಾಹಕ ದರ ಸೂಚ್ಯಂಕ ಹಣದುಬ್ಬರಕ್ಕೆ 10 ಬೇಸಿಸ್ ಪಾಯಿಂಟ್ಸ್ ಸೇರ್ಪಡೆ ಮಾಡುತ್ತದೆ.

ಈಗಿನ ಉಕ್ರೇನ್ ಬಿಕ್ಕಟ್ಟು ಪೂರೈಕೆ ಕಡಿಮೆ ಆಗುವ ಆತಂಕ ತಂದೊಡ್ಡಿದೆ. ಇದರಿಂದಾಗಿ ಬ್ರೆಂಟ್​ ಕಚ್ಚಾ ತೈಲ ದರವು ಹತ್ತು ವರ್ಷದ ಗರಿಷ್ಠ ಮಟ್ಟವಾದ ಪ್ರತಿ ಬ್ಯಾರೆಲ್​ಗೆ 120 ಯುಎಸ್​ಡಿ ಮುಡ್ಡಿದೆ. ಶುಕ್ರವಾರದಂದು ಬ್ರೆಂಟ್ ಸೂಚ್ಯಂಕದ ಕಚ್ಚಾ ತೈಲ ಬ್ಯಾರೆಲ್​ಗೆ 113.76 ಯುಎಸ್​ಡಿ ಇತ್ತು. ಅದಕ್ಕೂ ಒಂದು ದಿನದ ಮುಂಚೆ ಹತ್ತು ವರ್ಷದ ಗರಿಷ್ಠ ಮಟ್ಟವಾದ ಬ್ಯಾರೆಲ್​ಗೆ 119.84 ಡಾಲರ್ ಮುಟ್ಟಿತ್ತು. ಸದ್ಯಕ್ಕೆ ರಷ್ಯಾವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ. ರಷ್ಯಾದ ಮೇಲಿನ ನಿರ್ಬಂಧವು ಜಾಗತಿಕ ಪೂರೈಕೆಯನ್ನು ಕಡಿಮೆ ಮಾಡಬಹುದು ಹಾಗೂ ಬೆಳವಣಿಗೆಗೆ ಹಿನ್ನಡೆ ಆಗಬಹುದು ಎಂಬ ಆತಂಕ ತಂದೊಡ್ಡಿದೆ.

ಇದನ್ನೂ ಓದಿ: Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್​ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada