SBI Real Time Xpress Credit: ಗ್ರಾಹಕರಿಗೆ 35 ಲಕ್ಷ ರೂ. ತನಕ ಸಾಲ ನೀಡುವ ಎಕ್ಸ್ಪ್ರೆಸ್ ಕ್ರೆಡಿಟ್ ಎಸ್ಬಿಐನಿಂದ ಪರಿಚಯ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಅನ್ನು ಪರಿಚಯಿಸಿದೆ. ಈ ಮೂಲಕ ವೇತನದಾರರಿಗೆ 35 ಲಕ್ಷ ರೂಪಾಯಿ ತನಕ ಪರ್ಸನಲ್ ಲೋನ್ ದೊರೆಯುತ್ತದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ (RTXC) ಅನ್ನು ಯೋನೋದಲ್ಲಿ ಪರಿಚಯಿಸಿದೆ. ವೇತನದಾರ ಗ್ರಾಹಕರಿಗಾಗಿ ಪರಿಚಯಿಸಿದಂಥ ವೈಯಕ್ತಿಕ ಸಾಲದ ಉತ್ಪನ್ನ ಇದು. ಇದು ಡಿಜಿಟಲಿ ಲಭ್ಯವಿದೆ. ಎಸ್ಬಿಐ ಹೇಳಿದ ಪ್ರಕಾರ, ಅರ್ಹ ಗ್ರಾಹಕರು ಯಾವುದೇ ಕಾಗದ- ಪತ್ರಗಳ ವ್ಯವಹಾರ ಇಲ್ಲದೆ ಯೋನೋ ಮೂಲಕ 35 ಲಕ್ಷ ರೂಪಾಯಿ ತನಕ ಸಾಲವನ್ನು ಪಡೆಯಬಹುದು.
“ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಅಡಿಯಲ್ಲಿ ಕೇಂದ್ರ/ರಾಜ್ಯ ಸರ್ಕಾರ ಮತ್ತು ರಕ್ಷಣಾ ವೇತನದಾರ ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲದೆ ಸಾಲವನ್ನು ಪಡೆಯಬಹುದು,” ಎಂದು ಬ್ಯಾಂಕ್ ಹೇಳಿದೆ. ಸಾಲದ ಪರಿಶೀಲನೆ, ಅರ್ಹತೆ, ಮಂಜೂರಾತಿ ಮತ್ತು ದಾಖಲಾತಿಗಳು ಇವೆಲ್ಲ ಇನ್ನು ರಿಯಲ್ಟೈಮ್ನಲ್ಲಿ ಡಿಜಿಟಲಿ ಆಗುತ್ತದೆ ಎಂದು ಹೇಳಲಾಗಿದೆ.
ಎಸ್ಬಿಐ ಅಧ್ಯಕ್ಷರಾದ ದಿನೇಶ್ ಕುಮಾರ್ ಖರ ಗಮನಿಸಿದಂತೆ, ಗ್ರಾಹಕರಿಗೆ ಡಿಜಿಟಲ್, ತಡೆರಹಿತ ಮತ್ತು ಕಾಗದರಹಿತ ಸಾಲಪ್ರಕ್ರಿಯೆ ಅನುಭವ ಪಡೆಯಲು ಎಕ್ಸ್ಪ್ರೆಸ್ ಕ್ರೆಡಿಟ್ ಉತ್ಪನ್ನ ಸಕ್ರಿಯಗೊಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Electric Car Loan: ಎಸ್ಬಿಐನಿಂದ ಎಲೆಕ್ಟ್ರಿಕ್ ಕಾರು ಸಾಲ ಶೇ 7.25 ಬಡ್ಡಿ ದರದಿಂದ ಆರಂಭ