AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infosys CEO Salary: ಇನ್ಫೋಸಿಸ್ ಸಿಇಒ ಸಲಿಲ್ ಪರೇಖ್ ವೇತನ 79.75 ಕೋಟಿ ರೂಪಾಯಿ

ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಫೈಲಿಂಗ್ ಪ್ರಕಾರ, ಇನ್ಫೋಸಿಸ್ ಸಿಇಒ ಸಲಿಲ್ ಪರೇಖ್ ಅವರಿಗೆ 2021-22ನೇ ಸಾಲಿನಲ್ಲಿ 79.75 ಕೋಟಿ ರೂಪಾಯಿ ಪಾವತಿಸಲಾಗಿದೆ.

Infosys CEO Salary: ಇನ್ಫೋಸಿಸ್ ಸಿಇಒ ಸಲಿಲ್ ಪರೇಖ್ ವೇತನ 79.75 ಕೋಟಿ ರೂಪಾಯಿ
ಸಲಿಲ್ ಪರೇಖ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on:May 27, 2022 | 12:57 PM

Share

ಬೆಂಗಳೂರು ಮೂಲದ ಇನ್ಫೋಸಿಸ್​ನ (Infosys) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಲಿಲ್ ಪರೇಖ್ ಅವರಿಗೆ 2021-22ರ ಹಣಕಾಸು ವರ್ಷದಲ್ಲಿ 79.75 ಕೋಟಿ ರೂಪಾಯಿ ವೇತನ ಪಾವತಿಸಲಾಗಿದೆ. ಈ ಬಗ್ಗೆ ಷೇರು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. 2020-21ನೇ ಸಾಲಿನಲ್ಲಿ ಪಾವತಿಸಿದ್ದ 49.68 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 88ರಷ್ಟು ಹೆಚ್ಚಳವಾಗಿದೆ. ಇನ್ನು ಇಷ್ಟು ದೊಡ್ಡ ಮೊತ್ತದ ವೇತನದ ಪೈಕಿ ಸ್ಟಾಕ್ ಆಪ್ಷನ್ಸ್ 52.33 ಕೋಟಿ, ನಿಶ್ಚಿತ ವೇತನ 5.69 ಕೋಟಿ ರೂಪಾಯಿ, ಇದರಲ್ಲಿ ನಿವೃತ್ತಿ ಅನುಕೂಲ 38 ಲಕ್ಷ ರೂಪಾಯಿ ಒಳಗೊಂಡಿದೆ.

ವೇತನದಲ್ಲಿ 12.62 ಕೋಟಿ ರೂಪಾಯಿ ವೇರಿಯಬಲ್ ಪೇ ಇದೆ. ಈ ವೇತನದ ಬಗ್ಗೆ ತೀರ್ಮಾನವನ್ನು ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪೆನಿಯಾದ ಇನ್ಫೋಸಿಸ್ ಸಲಿಲ್ ಪರೇಖ್ ಅವರನ್ನು ಎರಡನೇ ಅವಧಿಗೆ, 2027ರ ಮಾರ್ಚ್ ತನಕ ಸಿಇಒ ಹಾಗೂ ಎಂ.ಡಿ. ಆಗಿ ಮರು ನೇಮಕ ಆಗಿದ್ದಾರೆ.

ಸಲಿಲ್ ಪರೇಖ್ ಅವರನ್ನು 2018ರ ಜನವರಿಯಿಂದ ಇನ್ಫೋಸಿಸ್ ಸಿಇಒ ಮತ್ತು ಎಂ.ಡಿ. ಆಗಿ ಇದ್ದಾರೆ. ಇನ್ಫೋಸಿಸ್ ಮಂಡಳಿಯಿಂದ ಮ್ಯಾನೇಜ್​ಮೆಂಟ್​ನ 6 ಪ್ರಮುಖ ಅಧಿಕಾರಿಗಳಿಗೆ 1,04,000 ಷೇರುಗಳು ಹಾಗೂ ಇತರ 88 ಹಿರಿಯ ಅಧಿಕಾರಿಗಳಿಗೆ 3,75,650 ಷೇರುಗಳನ್ನು ಅನುಮೋದನೆ ನೀಡಿರುವುದರಿಂದ ಸ್ಟಾಕ್ ಆಪ್ಷನ್ ದೊರೆಯುತ್ತಿದೆ.

ಆದರೆ, ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾದ ನಂದನ್ ನಿಲೇಕಣಿ ಅವರು ಸ್ವಯಂಪ್ರೇರಿತರಾಗಿ ತಮಗೆ ಕಂಪೆನಿಯಿಂದ ಯಾವುದೇ ವೇತನ ಬೇಡ ಎಂದು ತಿಳಿಸಿದ್ದಾರೆ. ​

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Infosys FY22 Q4 Results: ಇನ್ಫೋಸಿಸ್ ಹಣಕಾಸು ವರ್ಷ 2022ರ ನಾಲ್ಕನೇ ತ್ರೈಮಾಸಿಕ ಲಾಭ 5,686 ಕೋಟಿ ರೂ.

Published On - 5:13 pm, Thu, 26 May 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ