ಕಲರ್ಫುಲ್ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ ಬಂದೇಬಿಟ್ಟಿದೆ. ನಾಳೆ ಎಲ್ಲೆಡೆ (ಮಾರ್ಚ್27) ಆಚರಿಸಲ್ಪಡುವ ರಂಗಿನ ಹಬ್ಬದ ಪ್ರಯುಕ್ತ ಇದೀಗ ಉತ್ತಮ ಕ್ಯಾಮರಾವುಳ್ಳ ಮೊಬೈಲ್ಗಳನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಉತ್ತಮ ಅವಕಾಶ ಒದಗಿಸಿದೆ. ಆದರೆ ಈ ಕೊಡುಗೆ ಇಂದು ಮಾತ್ರ ಲಭ್ಯವಿದ್ದು, ಎಸ್ಬಿಐ ಅಕೌಂಟ್ ಹೊಂದಿರುವವರು ಒಳ್ಳೆಯ ಮೊಬೈಲ್ ಖರೀದಿಸಲು ಉತ್ತಮ ಅವಕಾಶವಾಗಿದೆ.
ಹೊಚ್ಚಹೊಸ ಸ್ಮಾರ್ಟ್ಫೋನ್ಗಳನ್ನು ಬಳಸಿ ಹೋಳಿ ಹಬ್ಬದ ಸುಂದರ ಚಿತ್ರಗಳನ್ನು ಸೆರೆ ಹಿಡಿಯಲು ಇದೀಗ ಎಸ್ಬಿಐ-YONO ಹೋಳಿ ಹಬ್ಬದ ಮುಂಚಿತವಾಗಿ ಸ್ಮಾರ್ಟ್ಫೋನ್ಗಳಲ್ಲಿ ಕೊಡುಗೆ ಒಂದನ್ನು ನೀಡುತ್ತಿದೆ. ಇ ಕಾಮರ್ಸ್ ಕಂಪನಿಯಾದ ಫ್ಲಿಪ್ಕಾರ್ಟ್ನಿಂದ ಮೊಬೈಲ್ಗಳು, ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಎಸ್ಬಿಐ-YONO ಕೊಡುಗೆ ಘೋಷಿಸಿದೆ.
ಕೊಡುಗೆ ಏನು?
ಎಸ್ಬಿಐ ತನ್ನ ಗ್ರಾಹಕರಿಗಾಗಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳ ಮೇಲೆ ಶೇ 15ರಷ್ಟು ರಿಯಾಯಿತಿ ನೀಡುತ್ತಿದೆ. ‘ವರ್ಣರಂಜಿತವಾಗಿ ಹೋಳಿ ಆಚರಿಸಿ. ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಸೆರೆಹಿಡಿಯುವುದರ ಮೂಲಕ ಹೋಳಿ ವಿಶೇಷವಾಗಿರಲಿ’ ಎಂದು ಎಸ್ಬಿಐ ಹಾರೈಸಿದೆ…
ಕೊಳ್ಳುವುದು ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಎಸ್ಬಿಐ-YONOಗೆ ಲಾಗ್ಇನ್ ಆಗಬೇಕು. ನಂತರ ಸ್ಯಾಮ್ಸಂಗ್ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನಿಮಗೆ ಆಫರ್ ಮೂಲಕ ಮೊಬೈಲ್ ಖರೀದಿಸಲು ಅವಕಾಶವಿರುತ್ತದೆ. ಈ ಕೊಡುಗೆ ಮಾರ್ಚ್ 26ರವರೆಗೆ ಮಾತ್ರ ಲಭ್ಯವಿದೆ.
ಫ್ಲಿಪ್ಕಾರ್ಟ್ ಹೋಳಿ 2021ರ ಮಾರಾಟ
ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ವ್ಯವಹಾರದಲ್ಲಿ ಫ್ಲಿಪ್ಕಾರ್ಟ್ ಮುಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಈಗ ಎಸ್ಬಿಐ ಕ್ರೆಡಿಟ್ ಕಾರ್ಡ್ಗಳಲ್ಲಿ ಶೇ 10ರಷ್ಟು ರಿಯಾಯತಿ ಪಡೆಯಬಹುದು. ಮತ್ತು ಫ್ಲಿಪ್ಕಾರ್ಟ್ ಹೋಳಿ ಮಾರಾಟ 2021ರಲ್ಲಿ ಇಎಂಐಗಳಲ್ಲಿಯೂ ಪಡೆಯಬಹುದು. ಆದರೆ ಇಂದು ಮಾತ್ರ ಈ ಉತ್ತಮ ಕೊಡುಗೆ ಲಭ್ಯವಿದೆ…
ಇದನ್ನು ಓದಿ: ನಟಿಮಣಿಯರಿಗೆ ಜೈಲಿನಲ್ಲೇ ದಸರಾ ಸಂಭ್ರಮ: ದೇವರ ದರ್ಶನ, ನಂತರ ಹೋಳಿಗೆ ಊಟ!
Published On - 2:18 pm, Fri, 26 March 21