ರೆಪೊ ದರ ಹೆಚ್ಚಳದ ಅಚ್ಚರಿಯ ನಿರ್ಧಾರ ಪ್ರಕಟಿಸಿದ ಆರ್​ಬಿಐ: ಸೆನ್ಸೆಕ್ಸ್ 1306, ನಿಫ್ಟಿ 391 ಅಂಶಗಳಷ್ಟು ಕುಸಿತ

ಇದ್ದಕ್ಕಿದ್ದಂತೆ ರೆಪೊದರವನ್ನು ಶೇ 4.40ರಷ್ಟು ಹೆಚ್ಚಿಸಿದ ಆಘಾತ ಸಹಿಸಿಕೊಳ್ಳದ ಷೇರುಪೇಟೆ ಕುಸಿತ ದಾಖಲಿಸಿತು.

ರೆಪೊ ದರ ಹೆಚ್ಚಳದ ಅಚ್ಚರಿಯ ನಿರ್ಧಾರ ಪ್ರಕಟಿಸಿದ ಆರ್​ಬಿಐ: ಸೆನ್ಸೆಕ್ಸ್ 1306, ನಿಫ್ಟಿ 391 ಅಂಶಗಳಷ್ಟು ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 04, 2022 | 3:55 PM

ಮುಂಬೈ: ಹಣದುಬ್ಬರವನ್ನು ಹಿಡಿತಕ್ಕೆ ತರಲೆಂದು ಭಾರತೀಯ ರಿಸರ್ವ್​ ಬ್ಯಾಂಕ್ ಬುಧವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ರೆಪೊ ದರ ಹೆಚ್ಚಿಸುವ ನಿರ್ಧಾರ ಪ್ರಕಟಿಸಿತು. ರೆಪೊದರವನ್ನು ಶೇ 4.40ರಷ್ಟು ಹೆಚ್ಚಿಸಿದ ಆಘಾತ ಸಹಿಸಿಕೊಳ್ಳದ ಷೇರುಪೇಟೆ ಕುಸಿತ ದಾಖಲಿಸಿತು. ಮುಂಬೈ ಪೇಟೆಯ ಸಂವೇದಿ ಸೂಚ್ಯಂಕ ಬಿಎಸ್​ಸಿ ಸೆನ್ಸೆಕ್ಸ್ 3 ಗಂಟೆ ವೇಳೆಯಲ್ಲಿ ಶೇ 2.41 ಅಂದರೆ 1,375 ಅಂಶಗಳಷ್ಟು ಕುಸಿದರೆ, ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಸಹ ಶೇ 2.43 ಅಂದರೆ 414.40 ಅಂಶಗಳಷ್ಟು ಕುಸಿತ ದಾಖಲಿಸಿತ್ತು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 1306 ಅಂಶಗಳ ಕುಸಿತದೊಂದಿಗೆ 55,669.03 ಹಾಗೂ ನಿಫ್ಟಿ 391.50 ಅಂಶಗಳೊಂದಿಗೆ 16,677 ಅಂಶಗಳೊಂದಿಗೆ ವಹಿವಾಟು ಮುಗಿಸಿದವು.ಎನ್​ಎಸ್​ಇಯಲ್ಲಿ ನೋಂದಾಯಿತವಾಗಿರುವ 1662 ಕಂಪೆನಿಗಳ ಮೌಲ್ಯ ಕುಸಿದರೆ, 288 ಕಂಪನಿಗಳ ಮೌಲ್ಯ ಏರಿಕೆಯಾಯಿತು.

ಬಹುತೇಕ ಮಧ್ಯಮ ಮತ್ತು ಸಣ್ಣ ಗಾತ್ರ ಕಂಪನಿಗಳ ಷೇರುಗಳು ಮೌಲ್ಯ ಕಳೆದುಕೊಂಡವು. ನಿಫ್ಟಿ ಮಿಡ್​ಕ್ಯಾಪ್ ಶೇ 1.78 ಮತ್ತು ಸ್ಮಾಲ್​ಕ್ಯಾಪ್ ಶೇ 1.88ರಷ್ಟು ಮೌಲ್ಯ ಕಳೆದುಕೊಂಡವು. ಎನ್​ಎಸ್​ಇ ರೂಪಿಸಿರುವ ಎಲ್ಲ 15 ವಲಯಗಳ ಕಂಪನಿಗಳು ಮೌಲ್ಯ ಕಳೆದುಕೊಂಡವು. ದಿನಬಳಕೆ ವಸ್ತುಗಳನ್ನು ತಯಾರಿಸುವ ಕಂಪನಿಗಳ ವಲಯವಾದ ನಿಫ್ಟಿ ಕನ್ಸೂಮರ್ ಡ್ಯೂರಬಲ್ಸ್ ಅತಿಹೆಚ್ಚು, ಅಂದರೆ ಶೇ 3.19ರಷ್ಟು ಕುಸಿತ ಕಂಡರೆ, ಹಣಕಾಸು ವಲಯ ಶೇ 2.32ರಷ್ಟು ಕುಸಿಯಿತು.

ನಿರ್ದಿಷ್ಟ ಕಂಪನಿಗಳನ್ನು ಗಮನಿಸುವುದಾದರೆ ಒಂದೇ ದಿನ ₹ 296.60 (ಶೇ 6.89) ಮೌಲ್ಯ ಕಳೆದುಕೊಂಡ ಅಪೊಲೊ ಹಾಸ್ಟಿಟಲ್ ದಿನದಲ್ಲಿ ಅತಿಹೆಚ್ಚು ಕುಸಿತ ಕಂಡ ಷೇರು. ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್ ಮತ್ತು ಹಿಂಡಾಲ್ಕೊ ಕಂಪನಿಗಳು ಸಹ ದೊಡ್ಡಮಟ್ಟದ ಕುಸಿತ ಕಂಡವು.

ಬಜಾಜ್ ಫಿನ್​ಸರ್ವಿಸ್, ಟೈಟಾನ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯುನಿಲಿವರ್, ಏಷ್ಯನ್ ಪೇಂಟ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಎಲ್​ ಅಂಡ್ ಟಿ ಮತ್ತು ಡಾಕ್ಟರ್ ರೆಡ್ಡಿಸ್ ಕಂಪನಿಗಳು ಗಮನಾರ್ಹ ಕುಸಿತ ಕಂಡವು. ನಕಾರಾತ್ಮಕ ಸುದ್ದಿಗೆ ತತ್ತರಿಸಿದ ಮಾರುಕಟ್ಟೆಯಲ್ಲಿ ಪವರ್​ಗ್ರಿಡ್, ಎನ್​ಟಿಪಿಸಿ, ಇನ್​ಫೊಸಿಸ್, ವಿಪ್ರೊ, ಕೋಟಕ್ ಮಹಿಂದ್ರಾ ಬ್ಯಾಂಕ್​ಗಳ ಷೇರುಮೌಲ್ಯಗಳು ಏರಿಕೆಯಾಗಿದ್ದವು.

ಆರ್‌ಬಿಐನಿಂದ ರೆಪೋ ದರ ಹೆಚ್ಚಳ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೋ ದರದಲ್ಲಿ 40 ಮೂಲಾಂಶ ಹೆಚ್ಚಿಸಲು ಆರ್​ಬಿಐ ನಿರ್ಧರಿಸಿದೆ. ತಕ್ಷಣದಿಂದ ಜಾರಿಗೆ ಬರಲಿರುವ ಈ ನಿರ್ಧಾರದಿಂದ ಬ್ಯಾಂಕ್ ಸಾಲದ ಬಡ್ಡಿ ದರ‌ಗಳು ಹೆಚ್ಚಾಗಲಿವೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಹೆಚ್ಚಳವಾಗಲಿದೆ. ಆರ್​ಬಿಐನ ಈ ನಿರ್ಧಾರಕ್ಕೆ ಷೇರುಪೇಟೆ ತತ್ತರಿಸಿದ್ದು, ಸಾಕಷ್ಟು ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿವೆ.

ಇದನ್ನೂ ಓದಿ: RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?

ಇದನ್ನೂ ಓದಿ: RBI Repo Rate: ಆರ್‌ಬಿಐನಿಂದ ರೆಪೋ ದರ ಹೆಚ್ಚಳ: 900 ಅಂಕಗಳಿಗಿಂತ ಹೆಚ್ಚು ಕುಸಿದ ಸೆನ್ಸೆಕ್ಸ್

Published On - 3:53 pm, Wed, 4 May 22

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ