Closing Bell: 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ಷೇರುಪೇಟೆ ಸೂಚ್ಯಂಕ; ಹೂಡಿಕೆದಾರರ 5.54 ಲಕ್ಷ ಕೋಟಿ ರೂ. ಖಲ್ಲಾಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಜೂನ್ 16ನೇ ತಾರೀಕಿನ ಗುರುವಾರದಂದು 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ ಕಂಡಿದೆ. ಹೂಡಿಕೆದಾರರ ಸಂಪತ್ತು 5.54 ಲಕ್ಷ ಕೋಟಿ ರೂಪಾಯಿ
ಭಾರತೀಯ ಷೇರು ಮಾರುಕಟ್ಟೆ (stock market) ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಜೂನ್ 16ನೇ ತಾರೀಕಿನ ಗುರುವಾರದಂದು ಶೇ 2ರಷ್ಟು ಕುಸಿದು, 52-ವಾರದ ಕನಿಷ್ಠ ಮಟ್ಟವನ್ನು ಮುಟ್ಟಿದವು. ಜೂನ್ 16ರಂದು ಸತತ ಐದನೇ ದಿನಕ್ಕೆ ನಷ್ಟವನ್ನು ಮುಂದುವರಿಸಿದವು, ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಏರುತ್ತಿರುವ ಹಣದುಬ್ಬರವನ್ನು ಎದುರಿಸಲು ಬಡ್ಡಿದರವನ್ನು 75 ಬಿಪಿಎಸ್ ಹೆಚ್ಚಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಆಗಿದೆ. ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು 5.54 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ ಅನುಭವಿಸಿದರು. ಬಿಎಸ್ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಜೂನ್ 15ರಂದು 2,44,75,490.32 ಕೋಟಿಯಿಂದ ಜೂನ್ 16 ರಂದು 2,39,20,875.48 ಕೋಟಿಗೆ, ಅಂದರೆ 5.54 ಲಕ್ಷ ಕೋಟಿಗಳಷ್ಟು ಕುಸಿದಿದೆ.
ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 1,045.60 ಪಾಯಿಂಟ್ಸ್ ಅಥವಾ ಶೇ 1.99ರಷ್ಟು ನೆಲ ಕಚ್ಚಿ 51,495.79 ಪಾಯಿಂಟ್ಸ್ನಲ್ಲಿ ಮತ್ತು ನಿಫ್ಟಿ 331.60 ಪಾಯಿಂಟ್ಸ್ ಅಥವಾ ಶೇ 2.11ರಷ್ಟು ನಷ್ಟ ಕಂಡು 15,360.60 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿವೆ. ಮಾರುಕಟ್ಟೆಯು ಶೇಕಡಾವಾರು ಲಾಭದೊಂದಿಗೆ ಪಾಸಿಟಿವ್ ಆಗಿಯೇ ಪ್ರಾರಂಭವಾಯಿತು, ಆದರೆ ಶೀಘ್ರದಲ್ಲೇ ಎಲ್ಲ ಲಾಭಗಳನ್ನು ಅಳಿಸಿಹಾಕಿತು ಮತ್ತು ನಕಾರಾತ್ಮಕವಾಗಿ ತಿರುಗಿತು. ದ್ವಿತೀಯಾರ್ಧದಲ್ಲಿ ಭಾರೀ ಮಾರಾಟವು ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ದಿನದ ಕನಿಷ್ಠ ಮಟ್ಟಕ್ಕೆ ತಲುಪುವ ಮೊದಲು ಹೊಸ ಕನಿಷ್ಠ ಮಟ್ಟಕ್ಕೆ ಎಳೆದಿದೆ.
“ಯುಎಸ್ ಫೆಡ್ ಕ್ರಮದ ಪರಿಣಾಮ ಮತ್ತು ನೈರುತ್ಯ ಮುಂಗಾರು ತಡವಾಗಿ ಪ್ರಾರಂಭ ಸೇರಿ ನಿಫ್ಟಿ ಕಳೆದ ಒಂದು ವರ್ಷದಲ್ಲೇ ಮೊದಲ ಬಾರಿಗೆ 15,400 ಪಾಯಿಂಟ್ಸ್ಗಿಂತ ಕಡಿಮೆಯಾಗಿದೆ,” ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್ ರಂಗನಾಥನ್ ಹೇಳಿದ್ದಾರೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ನೆಸ್ಟ್ಲೆ ಶೇ 0.43
ಬ್ರಿಟಾನಿಯಾ ಶೇ 0.15
ಎಚ್ಯುಎಲ್ ಶೇ 0.01
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟಾಟಾ ಸ್ಟೀಲ್ ಶೇ -6.03
ಹಿಂಡಾಲ್ಕೋ ಶೇ -5.99
ಕೋಲ್ ಇಂಡಿಯಾ ಶೇ -5.34
ಒಎನ್ಜಿಸಿ ಶೇ -5.18
ಟಾಟಾ ಮೋಟಾರ್ಸ್ ಶೇ -5.11
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Multibagger stock: ಲಕ್ಷ ರೂಪಾಯಿ ಹೂಡಿಕೆಯನ್ನು ಈ ಕಂಪೆನಿ ಷೇರು 2 ಕೋಟಿ ಮಾಡಿಕೊಟ್ಟಿದ್ದು ಕಂಡಿರಾ?
Published On - 6:26 pm, Thu, 16 June 22