AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atal Pension Yojana: ತಿಂಗಳಿಗೆ 5000 ರೂಪಾಯಿ ಪೆನ್ಷನ್ ಸಿಗುವ ಈ ಯೋಜನೆ​ ಬಗ್ಗೆ ನಿಮಗೆ ತಿಳಿದಿದೆಯಾ?

ನಿಮಗೆ ತಿಂಗಳಿಗೆ 5000 ಪೆನ್ಷನ್​ ಬರುವಂಥ ಯೋಜನೆಯಲ್ಲಿ ಹಣ ತೊಡಗಿಸುವ ಉದ್ದೇಶ ಇದೆಯಾ? ಹಾಗಿದ್ದಲ್ಲಿ ಆದಷ್ಟು ಶೀಘ್ರವಾಗಿ ಈ ಸ್ಕೀಮ್​ನಲ್ಲಿ ಹಣ ತೊಡಗಿಸಿ.

Atal Pension Yojana: ತಿಂಗಳಿಗೆ 5000 ರೂಪಾಯಿ ಪೆನ್ಷನ್ ಸಿಗುವ ಈ ಯೋಜನೆ​ ಬಗ್ಗೆ ನಿಮಗೆ ತಿಳಿದಿದೆಯಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 16, 2022 | 3:00 PM

ನಿಮಗೆ 40 ವರ್ಷದೊಳಗೆ ವಯಸ್ಸಾ ಮತ್ತು ಒಂದು ತಿಂಗಳಿಗೆ ಖಾತ್ರಿಯಾಗಿ 5000 ರೂಪಾಯಿ ಪಿಂಚಣಿ ಪಡೆಯುವ ಗುರಿ ಇದೆಯಾ? ಇಷ್ಟು ಮೊತ್ತದ ತಿಂಗಳ ನಿಶ್ಚಿತ ಆದಾಯ ಬರಬೇಕಿದ್ದಲ್ಲಿ ಸ್ವಲ್ಪ ಮಟ್ಟಿಗೆ ಹೂಡಿಕೆ ಮಾಡುತ್ತದೆ. ಅಂಥದ್ದೊಂದು ಯೋಜನೆ ಅಟಲ್ ಪೆನ್ಷನ್ ಯೋಜನಾ (Atal Pension Yojana). ಕನಿಷ್ಠ ಹೂಡಿಕೆ ಮೂಲಕ ಖಾತ್ರಿ ಪೆನ್ಷನ್ ಆದ 5000 ರೂಪಾಯಿಯನ್ನು ಪ್ರತಿ ತಿಂಗಳು ಹೇಗೆ ಪಡೆಯುವುದು ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಏನಿದು ಅಟಲ್ ಪೆನ್ಷನ್ ಯೋಜನಾ?

2015-16ರಲ್ಲಿ ಕೇಂದ್ರ ಸರ್ಕಾರದಿಂದ ಅಟಲ್ ಪೆನ್ಷನ್ ಯೋಜನೆ ಘೋಷಿಸಲಾಯಿತು. ವಯಸ್ಸಾದ ಕಾಲಕ್ಕೆ ಆದಾಯ ಭದ್ರತೆ ಒದಗಿಸುವುದು ಮತ್ತು ಅಸಂಘಟಿತ ವಲಯದಲ್ಲಿ ಇರುವ ಎಲ್ಲ ನಾಗರಿಕರಿಗೂ ಭದ್ರತೆ ಒದಗಿಸುವುದು ಈ ಯೋಜನೆ ಉದ್ದೇಶವಾಗಿದೆ. ತಮ್ಮ ನಿವೃತ್ತಿಗಾಗಿ ಹಣವನ್ನು ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುವುದನ್ನು ಹಾಗೂ ಉತ್ತೇಜಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈ ಯೋಜನೆಯ ನಿರ್ವಹಣೆಯನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್​ ಅಥಾರಿಟಿ (PFRDA)ಯು ನ್ಯಾಷನಲ್ ಪೆನ್ಷನ್ ಸಿಸ್ಟಮ್ ರಚನೆ ಮೂಲಕ ಮಾಡುತ್ತದೆ.

ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಚಂದಾದಾರರಿಗೆ ತಿಂಗಳಿಗೆ 1ರಿಂದ 5 ಸಾವಿರ ರೂಪಾಯಿ ಮಧ್ಯೆ ಖಾತ್ರಿ ಪೆನ್ಷನ್ ಬರುತ್ತದೆ. ಕನಿಷ್ಠ ಪೆನ್ಷನ್​ ಅನ್ನು ಭಾರತ ಸರ್ಕಾರ ಖಾತ್ರಿಪಡಿಸುತ್ತದೆ. ಚಂದಾದಾರರ ಕೊಡುಗೆಯ ಶೇ 50ರಷ್ಟು ಅಥಚಾ ವಾರ್ಷಿಕ ರೂ 1000 ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಕಾನೂನು ಬದ್ಧ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಕವರ್ ಆಗದಂಥವರಿಗೆ ಹಾಗೂ ಆದಾಯ ತೆರಿಗೆ ಪಾವತಿದಾರರು ಅಲ್ಲದವರಿಗೆ ಸರ್ಕಾರದಿಂದ ಸಹ ಕೊಡುಗೆ ನೀಡಲಾಗುತ್ತದೆ. ಅಟಲ್ ಪೆನ್ಷನ್ ಯೋಜನೆಯು 18ರಿಂದ ವರ್ಷ ಮಧ್ಯದ ಎಲ್ಲ ಭಾರತ ನಾಗರಿಕರಿಗೆ ಅನ್ವಯ ಆಗುತ್ತದೆ.

5000 ಪೆನ್ಷನ್ ಪಡೆಯುವುದು ಹೇಗೆ?

ಇದಕ್ಕಾಗಿ ಆದಷ್ಟು ಬೇಗ ಹೂಡಿಕೆ ಆರಂಭಿಸಬೇಕು. ಆಗ ಕಡಿಮೆ ಮೊತ್ತವನ್ನು ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, 18ನೇ ವಯಸ್ಸಿಗೆ ಕೊಡುಗೆ ನೀಡಲು ಆರಂಭಿಸಿದರೆ 5000 ರೂಪಾಯಿಯ ತಿಂಗಳ ಖಾತ್ರಿ ಪೆನ್ಷನ್​ಗಾಗಿ 210 ರೂಪಾಯಿ ಒಂದು ತಿಂಗಳಿಗೆ ಪಾವತಿಸಿದರೂ ಸಾಕು. ಅದೇ 40ನೇ ವರ್ಷದಲ್ಲಿ ಯಾರಾದರೂ 5000 ಪೆನ್ಷನ್​ಗಾಗಿ ಯೋಜನೆ ರೂಪಿಸಿದರೆ ತಿಂಗಳಿಗೆ 1454 ರೂಪಾಯಿಯಂತೆ 60ನೇ ವರ್ಷದ ತನಕ ಕಟ್ಟಬೇಕಾಗುತ್ತದೆ. ಇದು ಖಾತ್ರಿಯಾಗಿ 5000 ಪೆನ್ಷನ್ ದೊರೆಯುವಂತೆ ಮಾಡುತ್ತದೆ. ಈ ಯೋಜನೆಯಲ್ಲಿ ಇತರ ಆಯ್ಕೆಗಳು ಸಹ ಇವೆ.

40ನೇ ವರ್ಷದಲ್ಲಿ ತಿಂಗಳಿಗೆ 291 ರೂಪಾಯಿ ಹೂಡಿಕೆ ಮಾಡಿದಲ್ಲಿ ಮಾಸಿಕ 1000 ಪೆನ್ಷನ್ ಬರುತ್ತದೆ. ಆ ನಂತರದ ಪ್ರತಿ ಒಂದೊಂದು ಸಾವಿರ ರೂಪಾಯಿ ಹೆಚ್ಚಿನ ಪೆನ್ಷನ್​ಗಾಗಿ ಪ್ರತಿ ತಿಂಗಳು 291 ರೂಪಾಯಿ ಹೆಚ್ಚಿಗೆ, 60 ವರ್ಷ ವಯಸ್ಸಾಗುವ ತನಕ ಕಟ್ಟಬೇಕಾಗುತ್ತದೆ.

ಶೇ 100ರಷ್ಟು ಆನ್ಯುಯಟೈಸೇಷನ್ ಪೆನ್ಷನ್ ಸಂಪತ್ತಿಗೆ ಅನುಮತಿಸಲಾಗಿದೆ. ಈ ಯೋಜನೆಯ ಮುಕ್ತಾಯ ನಂತರ, ಅಂದರೆ 60 ವರ್ಷ ವಯಸ್ಸಾದ ಮೇಲೆ ಪೆನ್ಷನ್ ಬರುತ್ತದೆ.

ಯಾವುದಾದರೂ ಕಾರಣಕ್ಕೆ ಚಂದಾದಾರರು ಮೃತಪಟ್ಟಲ್ಲಿ ಸಂಗಾತಿಗೆ ಪೆನ್ಷನ್ ದೊರೆಯುತ್ತದೆ. ಒಂದು ವೇಳೆ ಚಂದಾದಾರ ಹಾಗೂ ಸಂಗಾತಿ ಇಬ್ಬರೂ ಮೃತಪಟ್ಟಲ್ಲಿ ಪೆನ್ಷನ್ ನಿಧಿಯನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

60 ವರ್ಷಕ್ಕೆ ಮುಂಚಿತವಾಗಿ ಯೋಜನೆಯಿಂದ ಹೊರಬರುವುದಕ್ಕೆ ಅನುಮತಿ ನೀಡುವುದಿಲ್ಲ. ಆದರೆ ವಿಶೇಷ ಸಂದರ್ಭದಲ್ಲಿ ಅನುಮತಿಸಲಾಗಿದೆ. ಫಲಾನುಭವಿಯ ಸಾವು ಅಥವಾ ಗಂಭೀರ ಕಾಯಿಲೆ ಸನ್ನಿವೇಶದಲ್ಲಿ ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Atal Pension Yojana: ಅಟಲ್ ಪೆನ್ಷನ್ ಯೋಜನೆ ಮೂಲಕ ಗಂಡ- ಹೆಂಡತಿಗೆ ಸಿಗಲಿದೆ 10,000 ರೂ. ತನಕ ತಿಂಗಳ ಪಿಂಚಣಿ

Published On - 3:00 pm, Thu, 16 June 22

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ