AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ ಸ್ಮಾರ್ಟ್​ಫೋನ್ ರಫ್ತು

Smartphone exports from India: ಭಾರತದಲ್ಲಿ ಸ್ಮಾರ್ಟ್​​ಫೋನ್ ಉತ್ಪಾದನೆ ದಿನೇ ದಿನೇ ಹೆಚ್ಚುತ್ತಿದೆ. ಈ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10.60 ಮೌಲ್ಯದ ಸ್ಮಾರ್ಟ್​ಫೋನ್​ಗಳನ್ನು ಭಾರತದಿಂದ ರಫ್ತು ಮಾಡಲಾಗಿದೆ. 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ತಯಾರಿಕೆ ಆಗಿದೆ. ಈ ಪೈಕಿ 7 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತಾಗಿದೆ.

ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ ಸ್ಮಾರ್ಟ್​ಫೋನ್ ರಫ್ತು
ಐಫೋನ್ ತಯಾರಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2024 | 5:49 PM

Share

ನವದೆಹಲಿ, ನವೆಂಬರ್ 26: ಭಾರತದಲ್ಲಿ ಐಫೋನ್​ಗಳನ್ನು ಹೆಚ್ಚೆಚ್ಚು ತಯಾರಿಸುತ್ತಿರುವ ಆ್ಯಪಲ್ ಸಂಸ್ಥೆ ಈಗ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್ ತಿಂಗಳವರೆಗೆ ಅದು ತಯಾರಿಸಿದ ಐಫೋನ್​ನ ಎಫ್​ಒಬಿ ಮೌಲ್ಯ 10 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಏಪ್ರಿಲ್​ನಿಂದ ಅಕ್ಟೋಬರ್​ವರೆಗಿನ ಏಳು ತಿಂಗಳ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ತಯಾರಿಕೆ ಆಗಿವೆ. ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಈ ವಿಚಾರವನ್ನು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

2023-24ರ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 37ರಷ್ಟು ಐಫೋನ್ ಪ್ರೊಡಕ್ಷನ್ ಹೆಚ್ಚಾಗಿದೆ. ಇದು ಭಾರತದಲ್ಲಿ ಆ್ಯಪಲ್ ಇರುವಿಕೆ ಇನ್ನಷ್ಟು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಏಪ್ರಿಲ್​ನಿಂದ ಅಕ್ಟೋಬರ್​​ವರೆಗೆ ತಯಾರಾದ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ನಲ್ಲಿ ಏಳು ಬಿಲಿಯನ್ ಮೌಲ್ಯದ ಫೋನ್​ಗಳನ್ನು ರಫ್ತು ಮಾಡಲಾಗಿದೆ. ಮೂರು ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳು ಭಾರತೀಯ ಮಾರುಕಟ್ಟೆಗೆ ವಿತರಣೆ ಆಗಿವೆ. ಭಾರತದಲ್ಲಿ ತಯಾರಾದ ಐಫೋನ್​ನಲ್ಲಿ ಶೇ. 70ರಷ್ಟನ್ನು ರಫ್ತು ಮಾಡಿದಂತಾಗಿದೆ.

ಇದನ್ನೂ ಓದಿ: ಮಾರುತಿ ಸುಜುಕಿಯ 30 ಲಕ್ಷ ಕಾರುಗಳ ರಫ್ತು, ಹೊಸ ಮೈಲಿಗಲ್ಲು; ಕಿಯಾದ 1 ಲಕ್ಷ ಸಿಕೆಡಿ ಯೂನಿಟ್ಸ್ ರಫ್ತು

ಸ್ಮಾರ್ಟ್​ಫೋನ್ ಪಿಎಲ್​ ಸ್ಕೀಮ್​ನ ಪರಿಣಾಮ…

ತಮ್ಮ ಎಕ್ಸ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವನಿ ವೈಷ್ಣವ್, ಸರ್ಕಾರ ತಂದಿರುವ ಪಿಎಲ್​ಐ ಸ್ಕೀಮ್​ಗೆ ಕ್ರೆಡಿಟ್ ನೀಡಿದ್ದಾರೆ.

‘ಏಳು ತಿಂಗಳಲ್ಲಿ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್​ಗೆ ಮತ್ತೊಂದು ಮೈಲಿಗಲ್ಲು ಬಂದಿದೆ. ಆ್ಯಪಲ್​ನಿಂದ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳ ತಯಾರಿಕೆ ಆಗಿದೆ. ಇದರಲ್ಲಿ 7 ಬಿಲಿಯನ್ ಡಾಲರ್ ರಫ್ತಾಗಿದೆ. ಏಳು ತಿಂಗಳಲ್ಲಿ ಭಾರತದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು 10.6 ಬಿಲಿಯನ್ ಡಾಲರ್​ನ ಗಡಿ ದಾಟಿದೆ,’ ಎಂದು ಕೇಂದ್ರ ಸಚಿವರು ಎಕ್ಸ್​ನಲ್ಲಿ ಬರೆದಿದ್ದಾರೆ.

ಸರ್ಕಾರ 2020ರಲ್ಲಿ ಪಿಎಲ್​ಐ ಸ್ಕೀಮ್ ಜಾರಿಗೆ ತಂದಿದೆ. ಇದು ಉತ್ಪಾದನಾ ಪ್ರಮಾಣ ಆಧಾರಿತ ಉತ್ತೇಜಕ ಯೋಜನೆ. ಆಯ್ದ ಕಂಪನಿಗಳು ಎಷ್ಟು ಮಾಡುವ ಉತ್ಪಾದನೆಗೆ ಅನುಗುಣವಾಗಿ ಹಣದ ರೂಪದಲ್ಲಿ ಸರ್ಕಾರ ಉತ್ತೇಜನ ನೀಡುತ್ತದೆ. ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಸ್ಮಾರ್ಟ್​ಫೋನ್ ಸೆರಿದಂತೆ ಹತ್ತಕ್ಕೂ ಹೆಚ್ಚು ಸೆಕ್ಟರ್​ಗಳಿಗೆ ಪಿಎಲ್​ಐ ಸ್ಕೀಮ್ ಅನ್ನು ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಐಫೋನ್ ಆಯ್ತು, ಈಗ ನೊಕಿಯಾ ಸರದಿ; ಚೀನಾದಿಂದ ಭಾರತಕ್ಕೆ ವಲಸೆ ಬರುತ್ತಿರುವ ಎಚ್​ಎಂಡಿ; ಸಪ್ಲೈಯರ್ಸ್​ಗೂ ಕರೆ

ಹಿಂದೆ ಬಂದ ವರದಿಯೊಂದರ ಪ್ರಕಾರ ಸ್ಮಾರ್ಟ್​ಫೋನ್ ಪಿಎಲ್​ಐ ಸ್ಕೀಮ್​ನಿಂದ ಸರ್ಕಾರಕ್ಕೆ ಸಿಕ್ಕಿರುವ ಆದಾಯ 1.10 ಲಕ್ಷ ಕೋಟಿ ರೂ. ಈ ಸ್ಕೀಮ್​ನಲ್ಲಿ ಸರ್ಕಾರ ಹಾಕಿರುವ ಬಂಡವಾಳಕ್ಕೆ ಹೋಲಿಸಿದರೆ, ಅದಕ್ಕೆ ಬಂದಿರುವ ಆದಾಯ 19 ಪಟ್ಟು ಹೆಚ್ಚು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ