AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ಆಯ್ತು, ಈಗ ನೊಕಿಯಾ ಸರದಿ; ಚೀನಾದಿಂದ ಭಾರತಕ್ಕೆ ವಲಸೆ ಬರುತ್ತಿರುವ ಎಚ್​ಎಂಡಿ; ಸಪ್ಲೈಯರ್ಸ್​ಗೂ ಕರೆ

Nokia phone manufacturing in India: ಫಿನ್​ಲ್ಯಾಂಡ್ ಮೂಲದ ಎಚ್​ಎಂಡಿ ಸಂಸ್ಥೆ ತನ್ನ ನೊಕಿಯಾ ಫೋನ್​ಗಳ ತಯಾರಿಕೆಯನ್ನು ಭಾರತದಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಚೀನಾದಲ್ಲಿರುವ ತನ್ನ ಹೆಚ್ಚಿನ ನೊಕಿಯ ಫೋನ್​ಗಳ ಉತ್ಪಾದನೆಯನ್ನು ಭಾರತಕ್ಕೆ ವರ್ಗಾಯಿಸಲು ಅದು ಹೊರಟಿದೆ. ಭಾರತದ ಘಟಕಗಳಲ್ಲಿ ಎಷ್ಟರ ಮಟ್ಟಿಗೆ ಗುಣಮಟ್ಟ, ವೆಚ್ಚವನ್ನು ಕಾಯ್ದುಕೊಳ್ಳಲಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆಗಳನ್ನು ಅದು ಇಡಬಹುದು.

ಐಫೋನ್ ಆಯ್ತು, ಈಗ ನೊಕಿಯಾ ಸರದಿ; ಚೀನಾದಿಂದ ಭಾರತಕ್ಕೆ ವಲಸೆ ಬರುತ್ತಿರುವ ಎಚ್​ಎಂಡಿ; ಸಪ್ಲೈಯರ್ಸ್​ಗೂ ಕರೆ
ನೊಕಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2024 | 3:12 PM

Share

ನವದೆಹಲಿ, ನವೆಂಬರ್ 26: ಫಿನ್​ಲ್ಯಾಂಡ್ ಮೂಲದ ನೊಕಿಯಾ ಬ್ರ್ಯಾಂಡ್​ನ ಫೋನ್​ಗಳನ್ನು ತಯಾರಿಸುವ ಎಚ್​ಎಂಡಿ ಗ್ಲೋಬಲ್ ಸಂಸ್ಥೆ ತನ್ನ ಕಾರ್ಯಸ್ಥಳವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವ ಪ್ರಯತ್ನದಲ್ಲಿದೆ. ತನ್ನ ಹೆಚ್ಚಿನ ಪ್ರೊಡಕ್ಷನ್ ಅನ್ನು ಚೀನಾದಿಂದ ಹೊರಗೆ ತರುತ್ತಿದೆ. ಭಾರತವನ್ನು ತನ್ನ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಮಾಡಿಕೊಳ್ಳಲು ಎಚ್​ಎಂಡಿ ಹೊರಟಿದೆ. ತನಗೆ ಬಿಡಿಭಾಗಗಳನ್ನು ಪೂರೈಸುವ ಸರಬರಾಜುದಾರ ಕಂಪನಿಗಳನ್ನೂ ಕೂಡ ಭಾರತದಲ್ಲಿ ಪ್ರೊಡಕ್ಷನ್ ಆರಂಭಿಸುವಂತೆ ಎಚ್​ಎಂಡಿ ಕರೆ ನೀಡಿದೆ. ಈ ಸಂಬಂಧ ಸಪ್ಲೈಯರ್ ಸಂಸ್ಥೆಗಳ ಜೊತೆ ಅದು ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಚೀನಾದಿಂದ ಆಮದಾಗುವ ಸರಕುಗಳಿಗೆ ಹೆಚ್ಚು ತೆರಿಗೆ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಎಚ್​ಎಂಡಿ ಸಂಸ್ಥೆ ಚೀನಾದ ಹೊರಗೆ ಹೆಚ್ಚಿನ ಆಪರೇಶನ್ಸ್ ಅನ್ನು ಶಿಫ್ಟ್ ಮಾಡಬಹುದು ಎನ್ನಲಾಗಿದೆ.

ಇದನ್ನೂ ಓದಿ: ರೂಯಾ ಫ್ಯಾಮಿಲಿ ಬಾಂಡಿಂಗ್… ಕಷ್ಟನಷ್ಟದಲ್ಲೂ ಬೇರ್ಪಡದ ಕುಟುಂಬ

ಭಾರತದಲ್ಲಿ ಡಿಕ್ಸಾನ್ ಟೆಕ್ನಾಲಜೀಸ್ ಸಂಸ್ಥೆ ಎಚ್​ಎಂಡಿಯ ನೊಕಿಯಾ ಫೋನ್​ಗಳನ್ನು ತಯಾರಿಸುವ ಗುತ್ತಿಗೆ ಪಡೆದಿದೆ. ಸದ್ಯ ಭಾರತದಲ್ಲಿ ತಯಾರಾಗುವ ನೊಕಿಯಾ ಬ್ರ್ಯಾಂಡ್​ನ ಫೋನ್​ಗಳು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ. ಈಗ ಅಮೆರಿಕ ಮತ್ತು ಯೂರೋಪ್​ನ ಮಾರುಕಟ್ಟೆಗಳಿಗೂ ಭಾರತದಿಂದಲೇ ಸರಬರಾಜು ಮಾಡುವ ಉದ್ದೇಶ ಎಚ್​ಎಂಡಿಯದ್ದು.

ಭಾರತದ ಸ್ಪರ್ಧಾತ್ಮಕತೆಯ ವಾತಾವರಣದ ಮೇಲೆ ಅವಲಂಬನೆ…

ಫಿನ್ಲೆಂಡ್ ಮೂಲದ ಎಚ್​ಎಂಡಿ ಸಂಸ್ಥೆ ತನ್ನ ಮ್ಯಾನುಫ್ಯಾಕ್ಚರಿಂಗ್ ಆಪರೇಶನ್ಸ್ ಅನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಉದ್ದೇಶಿಸಿದೆಯಾದರೂ ತರಾತುರಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ‘ಫೋನ್​ಗಳನ್ನು ರಫ್ತು ಮಾಡಬೇಕಾದರೆ, ಉತ್ಪಾದನಾ ವೆಚ್ಚ, ಗುಣಮಟ್ಟ, ಡೆಡ್​ಲೈನ್​ನಲ್ಲಿ ಪೂರೈಕೆ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಈ ವಿಚಾರದಲ್ಲಿ ಭಾರತ ಎಷ್ಟು ಭರವಸೆ ಉಳಿಸಿಕೊಳ್ಳುತ್ತದೆ ಎಂಬುದರ ಮೇಲೆ ಚೀನಾದಿಂದ ಇಲ್ಲಿಗೆ ಉತ್ಪಾದನಾ ಕಾರ್ಯವನ್ನು ವರ್ಗಾಯಿಸುವುದು ಅವಲಂಬಿತವಾಗಿರುತ್ತದೆ,’ ಎಂದು ಎಚ್​ಎಂಡಿಯ ಎಕ್ಸಿಕ್ಯೂಟಿವ್​ವೊಬ್ಬರು ಹೇಳಿದ್ದಾಗಿ ಮನಿಕಂಟ್ರೋಲ್​ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?

ಎಚ್​ಎಂಡಿ ಸಂಸ್ಥೆ ಭಾರತ ಸರ್ಕಾರದಿಂದ ಇನ್ನಷ್ಟು ಪೂರಕ ನೀತಿಯನ್ನು ಎದುರುನೋಡುತ್ತಿದೆ. ಸ್ಥಳೀಯವಾಗಿ ಬಿಡಿಭಾಗಗಳು ಸಿಗುವ ಇಕೋಸಿಸ್ಟಂ ಬೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಈ ಸಂಬಂಧ ಸರ್ಕಾರದ ನೀತಿ ಏನು ಎಂಬುದು ಸ್ಪಷ್ಟವಾಗಿ ಗೊತ್ತಾದರೆ ಭಾರತಕ್ಕೆ ಪೂರ್ಣಪ್ರಮಾಣದಲ್ಲಿ ಬರಲು ಸಾಧ್ಯವಾಗಬಹುದು ಎಂಬುದು ಅದರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ