SBI salary account: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಯಾಲರಿ ಅಕೌಂಟ್ನ 5 ಅನುಕೂಲಗಳಿವು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಯಾಲರಿ ಅಕೌಂಟ್ ತೆರೆದರೆ ಏನೆಲ್ಲ ಅನುಕೂಲಗಳಿವೆ ಗೊತ್ತಾ? ಆ ಪೈಕಿ 5 ಅನುಕೂಲಗಳನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಉಳಿತಾಯ ಖಾತೆಗೂ (ಸೇವಿಂಗ್ಸ್ ಅಕೌಂಟ್) ವೇತನ ಖಾತೆಗೂ (ಸ್ಯಾಲರಿ ಅಕೌಂಟ್) ವ್ಯತ್ಯಾಸ ಇದೆ. ಸಿಬ್ಬಂದಿಯ ಖಾತೆ ಯಾವ ಬ್ಯಾಂಕ್‌ನಲ್ಲಿ ಇರಬೇಕು ಎಂಬುದನ್ನು ಆಯಾ ಕಂಪೆನಿಯೇ ನಿರ್ಧಾರ ಮಾಡುತ್ತದೆಯಾದರೂ, ಈ ಖಾತೆಯಿಂದ ಹಲವು ಅನುಕೂಲಗಳು ಇರುತ್ತವೆ. ಈಗಿನ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೇತನ ಖಾತೆಯಿಂದ ಏನು ಪ್ರಯೋಜನ ಎಂಬುದನ್ನು ತಿಳಿಸಲಾಗುತ್ತಿದೆ. ಒಂದು ವೇಳೆ ಎಸ್ಬಿಐನಲ್ಲಿ ಸ್ಯಾಲರಿ ಅಕೌಂಟ್ ತೆರೆಯಬಹುದು ಅಂತಾದಲ್ಲಿ ಯಾವುದೇ ಆಲೋಚನೆ ಅಗತ್ಯ ಇಲ್ಲದೆ ನೀವು ಅನುಕೂಲ ಪಡೆಯಬಹುದು. ಎಸ್ಬಿಐನ ಅಧಿಕೃತ ವೆಬ್ಸೈಟ್- sbi.co.inನಲ್ಲಿ ಇರುವ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.
ಏನು ಆ ಅನುಕೂಲಗಳು? ಇನ್ಷೂರೆನ್ಸ್, ಪರ್ಸನಲ್ ಲೋನ್, ಹೋಮ್ ಲೋನ್, ಕಾರು ಲೋನ್, ಶೈಕ್ಷಣಿಕ ಲೋನ್ ಮುಂತಾದವುಗಳಿಗೆ ರಿಬೇಟ್ ದೊರೆಯುತ್ತದೆ. ಇದನ್ನು ಹೊರತುಪಡಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆಯನ್ನು ಹೊಂದಿರುವವರಿಗೆ ಇರುವ 5 ಅನುಕೂಲಗಳು ಇಲ್ಲಿವೆ.
1) ಅಪಘಾತ ಸಾವು ವಿಮೆ ಎಸ್ಬಿಐನಲ್ಲಿ ವೇತನ ಖಾತೆ ಹೊಂದಿರುವವರಿಗೆ ರೂ. 20 ಲಕ್ಷದ ತನಕ ಅಪಘಾತ ಸಾವಿನ ಇನ್ಷೂರೆನ್ಸ್ ಕವರ್ ಆಗುತ್ತದೆ.
2) ವಿಮಾನ ಅಪಘಾತ ಸಾವಿನ ಕವರ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಪ್ರಕಾರ, ವಿಮಾನ ಅಪಘಾತದಲ್ಲಿ ಖಾತೆದಾರರು ಸಾವನ್ನಪ್ಪಿದರೆ ವಿಮಾನ ಅಪಘಾತ ಸಾವಿನ ಇನ್ಷೂರೆನ್ಸ್ 30 ಲಕ್ಷ ರೂಪಾಯಿ ಕವರ್ ಆಗುತ್ತದೆ.
3) ಸಾಲ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ಎಸ್ಬಿಐ ಸ್ಯಾಲರಿ ಅಕೌಂಟ್ದಾರರಿಗೆ ಪರ್ಸನಲ್ ಲೋನ್, ಹೋಮ್ ಲೋನ್, ಕಾರು ಲೋನ್ ಮುಂತಾದವುಗಳ ಪ್ರೊಸೆಸಿಂಗ್ ಶುಲ್ಕದ ಮೇಲೆ ಶೇ 50ರಷ್ಟು ವಿನಾಯಿತಿ ಸಿಗುತ್ತದೆ.
4) ಓವರ್ಡ್ರಾಫ್ಟ್ ವ್ಯವಸ್ಥೆ ಬ್ಯಾಂಕ್ನಿಂದ ಖಾತೆದಾರರಿಗೆ ಓವರ್ಡ್ರಾಫ್ಟ್ ವ್ಯವಸ್ಥೆ ನೀಡಲಾಗುತ್ತದೆ. ದೇಶದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಖಾತೆದಾರರಿಗೆ ಎರಡು ತಿಂಗಳ ವೇತನವನ್ನು ಓವರ್ಡ್ರಾಫ್ಟ್ ಆಗಿ ನೀಡಲಾಗುತ್ತದೆ.
5) ಲಾಕರ್ ಶುಲ್ಕಗಳ ಮೇಲೆ ರಿಬೇಟ್ ಲಾಕರ್ ಶುಲ್ಕಗಳ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೇತನ ಖಾತೆದಾರರಿಗೆ ಶೇ 25ರ ತನಕ ಕಡಿತ ನೀಡುತ್ತದೆ.
ಇದನ್ನೂ ಓದಿ: SBI KYC: ಆನ್ಲೈನ್ನಲ್ಲಿ ಎಸ್ಬಿಐ ಕೆವೈಸಿ ಅಪ್ಡೇಟ್ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?
( State Bank Of India’s saving salary accounts 5 benefits explained here)