Sensex stocks: ಸತತ ಎರಡು ದಿನದಲ್ಲಿ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000 ಪಾಯಿಂಟ್ಸ್ ಇಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 19ನೇ ತಾರೀಕಿನ ಬುಧವಾರದಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿವೆ.

Sensex stocks: ಸತತ ಎರಡು ದಿನದಲ್ಲಿ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000 ಪಾಯಿಂಟ್ಸ್ ಇಳಿಕೆ
ಸಾಂದರ್ಭಿಕ ಚಿತ್ರ
Edited By:

Updated on: Jan 19, 2022 | 5:01 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 19ನೇ ತಾರೀಕಿನ ಬುಧವಾರ ಸಹ ಸತತ ಎರಡನೇ ದಿನ ಇಳಿಕೆ ದಾಖಲಿಸಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ 656.04 ಪಾಯಿಂಟ್ಸ್ ಅಥವಾ ಶೇ 1.08ರಷ್ಟು ಕುಸಿತ ಕಂಡು, 60,098.82 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ 174.60 ಪಾಯಿಂಟ್ಸ್ ಅಥವಾ ಶೇ 0.96ರಷ್ಟು ಇಳಿಕೆಯಾಗಿ, 17,938.40 ಪಾಯಿಂಟ್ಸ್​ನಲ್ಲಿ ವಹಿವಾಟು ಮುಕ್ತಾಯ ಮಾಡಿದೆ. ಇಂದಿನ ವಹಿವಾಟಿನಲ್ಲಿ 1432 ಷೇರುಗಳು ಏರಿಕೆಯನ್ನು ದಾಖಲು ಮಾಡಿದರೆ, 1766 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. 72 ಕಂಪೆನಿಗಳ ಷೇರು ಬೆಲೆಯಲ್ಲಿ ಏನೂ ಬದಲಾವಣೆ ಆಗಲಿಲ್ಲ. ವಲಯವಾರು ನೋಡಿದಾಗ ಮಿಶ್ರ ಫಲಿತಾಂಶ ಕಂಡುಬಂತು. ವಾಹನ, ಲೋಹ, ವಿದ್ಯುತ್ ಮತ್ತು ತೈಲ ಹಾಗೂ ಅನಿಲ ಸೂಚ್ಯಂಕಗಳು ಏರಿಕೆಯಲ್ಲಿ ಕೊನೆಗೊಂಡವು.

ಬ್ಯಾಂಕ್, ಎಫ್​ಎಂಸಿಜಿ, ಮಾಹಿತಿ ತಂತ್ರಜ್ಞಾನ, ಫಾರ್ಮಾ ಮತ್ತು ರಿಯಾಲ್ಟಿ ವಲಯದಲ್ಲಿ ಮಾರಾಟ ಕಂಡುಬಂತು. ಬಿಎಸ್​ಇ ಮಿಡ್​ಕ್ಯಾಪ್​ ಸೂಚ್ಯಂಕ ಶೇ 0.3ರಷ್ಟು ಇಳಿಕೆ ಕಂಡರೆ, ಸ್ಮಾಲ್​ಕ್ಯಾಪ್ ಸೂಚ್ಯಂಕದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೆ ಕೊನೆ ಆಯಿತು. ಈ ಮಧ್ಯೆ 2014ರ ನಂತರ ಕಚ್ಚಾ ತೈಲ ಬೆಲೆಯು ದಾಖಲೆಯ ಮಟ್ಟವನ್ನು ಮುಟ್ಟಿದೆ. ಇರಾಕ್​ನಿಂದ ಟರ್ಕಿಗೆ ಪೈಪ್​ಲೈನ್ ಸಮಸ್ಯೆ ಮತ್ತು ಜಾಗತಿಕ ರಾಜಕೀಯ ಒತ್ತಡ, ಹಣದುಬ್ಬರದ ಆತಂಕ ಇವೆಲ್ಲದರ ಮಧ್ಯೆ ಡಾಲರ್ ವಾರದ ಗರಿಷ್ಠ ಮಟ್ಟದಲ್ಲಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಒಎನ್​ಜಿಸಿ ಶೇ 3.91
ಟಾಟಾ ಮೋಟಾರ್ಸ್ ಶೇ 1.97
ಕೋಲ್ ಇಂಡಿಯಾ ಶೇ 1.93
ಎಸ್​ಬಿಐ ಶೇ 1.78
ಹಿಂಡಾಲ್ಕೋ ಶೇ 1.77

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಇನ್ಫೋಸಿಸ್ ಶೇ -2.80
ಶ್ರೀ ಸಿಮೆಂಟ್ಸ್ ಶೇ -2.77
ಏಷ್ಯನ್ ಪೇಂಟ್ಸ್ ಶೇ -2.77
ಹಿಂದೂಸ್ತಾನ್ ಯುನಿಲಿವರ್ ಶೇ -2.52
ಗ್ರಾಸಿಮ್ ಶೇ -2.47

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ