Closing Bell: 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 276 ಪಾಯಿಂಟ್ಸ್ ಇಳಿಕೆ
ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 1016 ಪಾಯಿಂಟ್ಸ್ ಮತ್ತು ನಿಫ್ಟಿ 276 ಪಾಯಿಂಟ್ಸ್ ಜೂನ್ 10ನೇ ತಾರೀಕಿನ ಶುಕ್ರವಾರ ಕುಸಿತ ಕಂಡಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜೂನ್ 10ನೇ ತಾರೀಕಿನ ಶುಕ್ರವಾರದಂದು ಭಾರೀ ಕುಸಿತವನ್ನು ದಾಖಲಿಸಿವೆ. ಬಿಎಸ್ಇ ಸೆನ್ಸೆಕ್ಸ್ 1016.84 ಪಾಯಿಂಟ್ಸ್ ನೆಲ ಕಚ್ಚಿ, 54,303.44 ಪಾಯಿಂಟ್ಸ್ ತಲುಪಿದರೆ, ನಿಫ್ಟಿ-50 ಸೂಚ್ಯಂಕವು 276.30 ಪಾಯಿಂಟ್ಸ್ ಇಳಿಕೆಯಾಗಿ, 16,201.80 ಪಾಯಿಂಟ್ಸ್ನವಲ್ಲಿ ವ್ಯವಹಾರ ಮುಗಿಸಿತು. ಅದೇ ರೀತಿ ಬ್ಯಾಂಕ್ ನಿಫ್ಟಿ 601.65 ಪಾಯಿಂಟ್ಸ್ ಅಥವಾ ಶೇ 1.71ರಷ್ಟು ನಷ್ಟ ಕಂಡಿತು. ಇನ್ನು ಈ ದಿನ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಮಟ್ಟಕ್ಕೆ, ಅಂದರೆ 77.87ಕ್ಕೆ ಕುಸಿಯಿತು. ಯುರೋಪ್ ಮತ್ತು ಏಷ್ಯಾದಲ್ಲಿ ಬಹುತೇಕ ಷೇರು ಮಾರುಕಟ್ಟೆಗಳು ಕುಸಿತದಲ್ಲೇ ಇವೆ. ಅಮೆರಿಕದ ಗ್ರಾಹಕ ಹಣದುಬ್ಬರ ಸೂಚ್ಯಂಕ ದತ್ತಾಂಶ ಬಿಡುಗಡೆಗೆ ಮುನ್ನ ಯುಎಸ್ ಫ್ಯೂಚರ್ಸ್ ಸ್ವಲ್ಪ ಬದಲಾವಣೆ ಆಗಿದೆ.
ಜೂನ್ 10ನೇ ತಾರೀಕಿನ ಶುಕ್ರವಾರ ಸೆನ್ಸೆಕ್ಸ್ನಲ್ಲಿ ಮಾರಾಟ ಹೆಚ್ಚಾಗಿದ್ದರ 10 ಅಂಶಗಳು ಇಲ್ಲಿವೆ:
– ಸೆನ್ಸೆಕ್ಸ್ ಷೇರುಗಳ ಪೈಕಿ ರಿಲಯನ್ಸ್, ವಿಪ್ರೋ, ಎಚ್ಡಿಎಫ್ಸಿ, ಕೊಟಕ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಶೇ 3ರಿಂದ 4ರಷ್ಟು ಕುಸಿದವು.
– ಎಲ್ಲ ವಲಯದ ಷೇರುಗಳು ನೆಲ ಕಚ್ಚಿದವು.
– ನಿಫ್ಟಿ ಬ್ಯಾಂಕ್, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳ ಷೇರುಗಳು ಅತಿದೊಡ್ಡ ಪ್ರಮಾಣದಲ್ಲಿ ನಷ್ಟ ದಾಖಲಿಸಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಗ್ರಾಸಿಮ್ ಶೇ 1.33
ಅಪೋಲೋ ಹಾಸ್ಪಿಟಲ್ ಶೇ 0.83
ಏಷ್ಯನ್ ಪೇಂಟ್ಸ್ ಶೇ 0.82
ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 0.66
ಡಿವೀಸ್ ಲ್ಯಾಬ್ಸ್ ಶೇ 0.59
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಕೊಟಕ್ ಮಹೀಂದ್ರಾ ಶೇ -3.94
ಬಜಾಜ್ ಫೈನಾನ್ಸ್ ಶೇ -3.92
ಎಚ್ಡಿಎಫ್ಸಿ ಶೇ -3.78
ಹಿಂಡಾಲ್ಕೋ ಶೇ -3.50
ರಿಲಯನ್ಸ್ ಶೇ -3.02
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 4:44 pm, Fri, 10 June 22