N Chandrasekharan: ಏರ್​ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ಎನ್​ ಚಂದ್ರಶೇಖರನ್ ನೇಮಕ​

| Updated By: Srinivas Mata

Updated on: Mar 14, 2022 | 11:48 PM

ಟಾಟಾ ಸಮೂಹದ ಮುಖ್ಯಸ್ಥರಾದ ನಟರಾಜನ್ ಚಂದ್ರಶೇಖರನ್ ಅವರನ್ನು ಏರ್​ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

N Chandrasekharan: ಏರ್​ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ಎನ್​ ಚಂದ್ರಶೇಖರನ್ ನೇಮಕ​
ಎನ್​ ಚಂದ್ರಶೇಖರನ್ (ಸಂಗ್ರಹ ಚಿತ್ರ)
Follow us on

ಟಾಟಾ ಸನ್ಸ್ ಮುಖ್ಯಸ್ಥರಾದ ನಟರಾಜನ್ ಚಂದ್ರಶೇಖರನ್ (N Chandrasekharan) ಅವರನ್ನು ಏರ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಂದ ಹಾಗೆ 69 ವರ್ಷಗಳ ನಂತರ ಟಾಟಾ ಸಮೂಹವು ಕಳೆದ ಜನವರಿಯಲ್ಲಿ ಏರ್​ ಇಂಡಿಯಾವನ್ನು ಮರಳಿ ಪಡೆದಿದೆ. ಚಂದ್ರಶೇಖರನ್ ಅವರನ್ನು ಫೆಬ್ರವರಿಯಲ್ಲಿ ಮತ್ತೆ ಐದು ವರ್ಷಗಳ ಕಾಲ ಟಾಟಾ ಸನ್ಸ್​ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2016ರ ಅಕ್ಟೋಬರ್​ನಲ್ಲಿ ಅವರು ಟಾಟಾ ಸನ್ಸ್ ಮಂಡಳಿಗೆ ಸೇರಿದರು ಮತ್ತು ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ನಿರ್ಗಮನದ ನಂತರ 2017ರ ಜನವರಿಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡರು. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪೆನಿಗಳ ಮಂಡಳಿಗಳಿಗೆ ಜನವರಿ ಅಧ್ಯಕ್ಷರಾಗಿದ್ದಾರೆ – ಇವುಗಳಿಗೆ ಅವರು 2009ರಿಂದ 2017ರ ಮಧ್ಯೆ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು.

ತಮ್ಮ ನೇಮಕಾತಿಯನ್ನು “ಅನಪೇಕ್ಷಿತ ಬಣ್ಣಗಳೊಂದಿಗೆ” ಚಿತ್ರಿಸಲು “ಪ್ರಯತ್ನಗಳು” ನಡೆಯುತ್ತಿವೆ ಎಂದು ಉಲ್ಲೇಖಿಸಿ ವಿಮಾನಯಾನವನ್ನು ಮುನ್ನಡೆಸುವ ಟಾಟಾ ಗ್ರೂಪ್​ನ ಪ್ರಸ್ತಾವವನ್ನು ಈ ತಿಂಗಳ ಆರಂಭದಲ್ಲಿ ಇಲ್ಕರ್ ಅಯ್ಸಿ ಅವರು ನಿರಾಕರಿಸಿದರು. “ಟಾಟಾ ಗ್ರೂಪ್‌ನಲ್ಲಿ ಏರ್ ಇಂಡಿಯಾದ (ಸಿಇಒ) ನನ್ನ ನೇಮಕಾತಿಯನ್ನು ಏಪ್ರಿಲ್​ 1ರಂದು ಪ್ರಾರಂಭ ದಿನಾಂಕದೊಂದಿಗೆ ಫೆಬ್ರವರಿಯಲ್ಲಿ ಘೋಷಿಸಲಾಯಿತು. ಈ ಪ್ರಕಟಣೆಯ ನಂತರ ನನ್ನ ನೇಮಕಾತಿಯನ್ನು ಅನಪೇಕ್ಷಿತ ಎಂದು ಬಣ್ಣಿಸಲು ಪ್ರಯತ್ನಿಸುತ್ತಿರುವ ಮಾಧ್ಯಮದ ಕೆಲವು ವಿಭಾಗಗಳಲ್ಲಿನ ಸುದ್ದಿಯನ್ನು ನಾನು ದುಃಖದಿಂದ ಗಮನಿಸುತ್ತಿದ್ದೇನೆ,” ಎಂಬುದಾಗಿ ಅಯ್ಸಿ ಹೇಳಿಕೆಯಲ್ಲಿ ತಿಳಿಸಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟಾಟಾ ಗ್ರೂಪ್​ನಿಂದ ಏರ್ ಇಂಡಿಯಾದ ಶೇ 100ರಷ್ಟು ಷೇರು ಖರೀದಿಯ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿತ್ತು (ಬಜೆಟ್ ಏರ್‌ಲೈನ್ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಏರ್‌ಲೈನ್‌ನ ಶೇ 100ರಷ್ಟು ಪಾಲನ್ನು ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಸಂಸ್ಥೆ AI-SATSನಲ್ಲಿ ಶೇ 50ರ ಪಾಲನ್ನು ಒಳಗೊಂಡಂತೆ). 18,000 ಕೋಟಿ ರೂಪಾಯಿ ಬಿಡ್​ ಮಾಡಿತ್ತು. ಈ ಮೊತ್ತದಲ್ಲಿ ಟಾಟಾದಿಂದ 15,300 ಕೋಟಿ ರೂಪಾಯಿ ಸಾಲವನ್ನು ತೆಗೆದುಕೊಳ್ಳಬೇಕಾಗಿತ್ತು ಮತ್ತು 2,700 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನಗದು ರೂಪದಲ್ಲಿ ಪಾವತಿಸಬೇಕಾಗಿತ್ತು.

ಇದನ್ನೂ ಓದಿ: Air India: ಏರ್​ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಯ ಇಲ್ಕರ್ ಅಯ್ಸಿ