ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ

The Foundry, the startup factory: ನಿಖಿಲ್ ಕಾಮತ್ ಮತ್ತಿತರರು ಸೇರಿ ದಿ ಫೌಂಡ್ರಿ ಎನ್ನುವ ಸ್ಟಾರ್ಟಪ್ ಕಾರ್ಖಾನೆ ಆರಂಭಿಸಿದ್ದಾರೆ. 26 ಮಂದಿಯ ಮೊದಲ ಬ್ಯಾಚ್ ಆರಂಭವಾಗಿದೆ. 90 ದಿನಗಳ ವಸತಿಯಲ್ಲಿ ಹೊಸ ಸ್ಟಾರ್ಟಪ್ ಕಟ್ಟುವ ಅವಕಾಶ ಇದೆ. ಬ್ಯುಸಿನೆಸ್ ಐಡಿಯಾವನ್ನು ಎಕ್ಸಿಕ್ಯೂಟ್ ಮಾಡಲು ಬೇಕಾದ ತಂತ್ರಜ್ಞಾನ, ಹೂಡಿಕೆ ನೆರವು ಸಿಗುತ್ತದೆ.

ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ
ದಿ ಫೌಂಡ್ರಿ
Image Credit source: thefoundery.in/

Updated on: Jun 29, 2026 | 4:41 PM

ಮುಖ್ಯಾಂಶಗಳು

  • ನಿಖಿಲ್ ಕಾಮತ್ ಮತ್ತಿತರರು ಸೇರಿ ದಿ ಫೌಂಡ್ರಿ ಎನ್ನುವ ಸ್ಟಾರ್ಟಪ್ ಕಾರ್ಖಾನೆ ಆರಂಭಿಸಿದ್ದಾರೆ.
  • 26 ಮಂದಿಯ ಮೊದಲ ಬ್ಯಾಚ್ ಆರಂಭವಾಗಿದೆ.
  • 90 ದಿನಗಳ ವಸತಿಯಲ್ಲಿ ಹೊಸ ಸ್ಟಾರ್ಟಪ್ ಕಟ್ಟುವ ಅವಕಾಶ ಇದೆ.

ಬೆಂಗಳೂರು, ಜೂನ್ 29: ಭಾರತದ ಪ್ರಸಿದ್ಧ ಬಿಲಿಯನೇರ್ ಮತ್ತು ಝೀರೋಧಾ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಫ್ಯೂಚರ್ ಗ್ರೂಪ್‌ನ ಕಿಶೋರ್ ಬಿಯಾನಿ ಮತ್ತು ಅಪ್‌ಗ್ರಾಡ್‌ನ ರೋನಿ ಸ್ಕ್ರೂವಾಲಾ ಮೊದಲಾದವರು ಸೇರಿ ‘ದಿ ಫೌಂಡ್ರಿ’ (The Foundery) ಎಂಬ ವಿನೂತನ ಸ್ಟಾರ್ಟ್‌ಅಪ್ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿದ್ದಾರೆ. ಇದನ್ನು ಸಾಂಪ್ರದಾಯಿಕ ಕಾಲೇಜು ಅಥವಾ ಬಿಸಿನೆಸ್ ಸ್ಕೂಲ್ ಎನ್ನುವ ಬದಲು “ಕೋ-ಫೌಂಡರ್ ಫ್ಯಾಕ್ಟರಿ” (ಸಹ-ಸಂಸ್ಥಾಪಕರನ್ನು ಸೃಷ್ಟಿಸುವ ಕಾರ್ಖಾನೆ) ಎಂದು ಕರೆಯಲಾಗುತ್ತಿದೆ. ಈಗಾಗಲೇ ಮೊದಲ ಬ್ಯಾಚ್ ಮುಗಿದಿದೆ. ಎರಡನೇ ಬ್ಯಾಚ್ ಸದ್ಯದಲ್ಲೇ ಆರಂಭವಾಗಬಹುದು. ಈ ಮೊದಲ ಬ್ಯಾಚ್​ನಿಂದ 20 ಬ್ರ್ಯಾಂಡ್​ಗಳನ್ನು ಹೊರತರಲಾಗುತ್ತಿದೆ ಎನ್ನುವ ಮಾಹಿತಿ ಇದೆ.

‘ದಿ ಫೌಂಡ್ರಿ’ ಎಂದರೇನು?

ಇದು 90 ದಿನಗಳ ಕಾಲ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ನಡೆಯುವ ವಸತಿ ಸಹಿತ (Residential) ಸ್ಟಾರ್ಟ್‌ಅಪ್ ಕಾರ್ಯಕ್ರಮವಾಗಿದೆ. ಇಲ್ಲಿ ಸಾಂಪ್ರದಾಯಿಕ ತರಗತಿಗಳ ಬದಲಾಗಿ ಪ್ರಾಯೋಗಿಕವಾಗಿ ಉದ್ಯಮವನ್ನು ಹೇಗೆ ಕಟ್ಟುವುದು ಎಂಬುದನ್ನು ಕಲಿಸಲಾಗುತ್ತದೆ. ನಿಖಿಲ್ ಕಾಮತ್ ಅವರ ಪ್ರಕಾರ, “ಯೂನಿವರ್ಸಿಟಿಗಳಲ್ಲಿ ನೀವು ಕಲಿಯುತ್ತೀರಿ, ಆದರೆ ಇಲ್ಲಿ ನೀವು ಗಳಿಸುತ್ತೀರಿ (There, you learn. Here, you earn).”

ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಐಡಿಯಾ ಇಲ್ಲದಿದ್ದರೂ, ದಿ ಫೌಂಡ್ರಿಯ ಬಿಸಿನೆಸ್ ವಾಲ್ಟ್‌ನಲ್ಲಿರುವ ಅತ್ಯುತ್ತಮ ಐಡಿಯಾಗಳನ್ನು ನೀಡಿ, ತಜ್ಞರ ಮಾರ್ಗದರ್ಶನದಲ್ಲಿ ಹೊಸ ಬ್ರ್ಯಾಂಡ್ ಅಥವಾ ಕಂಪನಿಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಲಾಗುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ದೇಶಾದ್ಯಂತ 13 ಬ್ಯಾಂಕ್ ರಜಾ ದಿನಗಳು; ಕರ್ನಾಟಕದಲ್ಲೆಷ್ಟು?

ಫೌಂಡ್ರಿ ಸೇರಲು ಏನು ಅರ್ಹತೆ (Eligibility)?

ಹೊಸದಾಗಿ ಉದ್ಯಮ ಆರಂಭಿಸಬೇಕೆಂಬ ಹಂಬಲವಿರುವ ಯುವಕರು, ವೃತ್ತಿಜೀವನದ ಮಧ್ಯದಲ್ಲಿರುವ ವೃತ್ತಿಪರರು (Mid-career professionals) ಮತ್ತು ಆರಂಭಿಕ ಹಂತದ ಸ್ಟಾರ್ಟ್‌ಅಪ್ ಸಂಸ್ಥಾಪಕರು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ: ಯಾವುದೇ ನಿರ್ದಿಷ್ಟ ಪದವಿ ಅಥವಾ ಕಾಲೇಜು ಸರ್ಟಿಫಿಕೇಟ್‌ಗಳ ಅಗತ್ಯವಿಲ್ಲ.

ಆಯ್ಕೆಯ ಮಾನದಂಡ: ಅಭ್ಯರ್ಥಿಗಳ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ (Problem Solving), ಸೃಜನಶೀಲತೆ, ಬದ್ಧತೆ ಮತ್ತು ಕಠಿಣ ಸನ್ನಿವೇಶಗಳನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು (Resilience) ನೋಡಿ ಆಯ್ಕೆ ಮಾಡಲಾಗುತ್ತದೆ. ಒಟ್ಟು ಸಲ್ಲಿಕೆಯಾಗುವ ಅರ್ಜಿಗಳಿಂದ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೊದಲು 5 ದಿನಗಳ ಬೂಟ್‌ಕ್ಯಾಂಪ್ ನಡೆಸಿ, ಬಳಿಕ ಅಂತಿಮವಾಗಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ದಿ ಫೌಂಡ್ರಿ ಅವಧಿ ಮತ್ತು ಶುಲ್ಕ ಎಷ್ಟಿದೆ?

ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ ‘ದಿ ಫೌಂಡ್ರಿ ಸೆಂಟರ್’ನಲ್ಲಿ 90 ದಿನಗಳ ಕಾಲ ಒಟ್ಟಿಗೆ ವಾಸಿಸುತ್ತಾ, ಉದ್ಯಮದ ಮಾದರಿಯನ್ನು ಸಿದ್ಧಪಡಿಸಬೇಕು.

ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ₹5,000 + GST ನೋಂದಣಿ ಶುಲ್ಕವಿರುತ್ತದೆ.

ತರಬೇತಿ ಶುಲ್ಕ: ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಪ್ರತ್ಯೇಕ ಕಾಲೇಜು ಫೀಸ್ ಇರುವುದಿಲ್ಲ. ಉಳಿದುಕೊಳ್ಳುವ ಮತ್ತು ಕಲಿಯುವ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ.

ಇದನ್ನೂ ಓದಿ: ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು

ಫಂಡಿಂಗ್ ಮತ್ತು ಇಕ್ವಿಟಿ (Equity)

ಯಶಸ್ವಿಯಾಗಿ ಬ್ರ್ಯಾಂಡ್ ನಿರ್ಮಿಸುವ ಸ್ಟಾರ್ಟ್‌ಅಪ್‌ಗಳಿಗೆ ₹4 ಕೋಟಿವರೆಗೆ ಸೀಡ್ ಫಂಡಿಂಗ್ (Seed Funding) ನೀಡಲಾಗುತ್ತದೆ. ಇದರಲ್ಲಿ ಕಂಪನಿಯನ್ನು ಮುನ್ನಡೆಸುವ ಸಂಸ್ಥಾಪಕರಿಗೆ ಶೇ. 25 ರಷ್ಟು ಇಕ್ವಿಟಿ (ಷೇರು) ಸಿಗುತ್ತದೆ, ಉಳಿದ ಭಾಗವನ್ನು ಹೂಡಿಕೆದಾರರು ಮತ್ತು ಇಕೋಸಿಸ್ಟಮ್ ಹಂಚಿಕೊಳ್ಳುತ್ತದೆ.

ಮಾರ್ಗದರ್ಶಕರು (Mentorship): ಪೇಟಿಎಂನ ವಿಜಯ್ ಶೇಖರ್ ಶರ್ಮಾ, ಟೈಟಾನ್ ಕ್ಯಾಪಿಟಲ್‌ನ ಕುನಾಲ್ ಬಹ್ಲ್ ಮತ್ತು ರಾಜನ್ ಆನಂದನ್ ಅವರಂತಹ ಭಾರತದ ಪ್ರಮುಖ ಉದ್ಯಮಿಗಳು ಇಲ್ಲಿ ಭಾಗವಹಿಸುವ ಯುವಕರಿಗೆ ನೇರವಾಗಿ ಉದ್ಯಮದ ಪಾಠಗಳನ್ನು ಹೇಳಿಕೊಡಲಿದ್ದಾರೆ.

90 ದಿನದವರೆಗೂ ಇಲ್ಲದಿದ್ದರೆ ದಂಡ ಇರುತ್ತೆ; ಈ ಷರತ್ತು (Clawback Clause) ಗಮನಿಸಿ

ಒಪ್ಪಂದದ ಪ್ರಕಾರ, ಕಾರ್ಯಕ್ರಮದ ಮಧ್ಯದಲ್ಲೇ ಯಾರಾದರೂ ಕಾರಣವಿಲ್ಲದೆ ಹೊರನಡೆದರೆ ಅಥವಾ ಜವಾಬ್ದಾರಿಗಳನ್ನು ನಿಭಾಯಿಸದಿದ್ದರೆ, ಸಂಸ್ಥೆಯು ಅವರ ಮೇಲೆ ವೆಚ್ಚ ಮಾಡಿದ ಸ್ಥಿರ ಶುಲ್ಕ (ಸುಮಾರು ₹10 ಲಕ್ಷ ಮತ್ತು ದಿನಕ್ಕೆ ₹20,000 ನಂತೆ) ರಿಕವರಿ ಮಾಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

ವರ್ಷದ ಹಿಂದೆ ಆರಂಭವಾದ ದಿ ಫೌಂಡ್ರಿ ಈಗಾಗಲೇ ಕಾರ್ಯಾರಂಭಗೊಂಡಿದೆ. ಮೊದಲ ಬ್ಯಾಚ್ ಶುರುವಾಗಿ ಮುಗಿದುಹೋಗಿದೆ. ಮೂಲ ಪರಿಕಲ್ಪನೆ ಪ್ರಕಾರ 30 ಮಂದಿಯ ಬ್ಯಾಚ್​ನ ಗುರಿ ಹೊಂದಲಾಗಿತ್ತು. ಆದರೆ, 26 ಮಂದಿಯನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ಎರಡನೇ ಬ್ಯಾಚ್ ಇನ್ನೂ ಶುರುವಾಗಿಲ್ಲ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಅದರ ಅಧಿಕೃತ ವೆಬ್​ಸೈಟ್ ನೋಡಿ:  www.thefoundery.in/

ನಿಖಿಲ್ ಕಾಮತ್, ರೋನಿ ಸ್ಕ್ರೂವಾಲಾ ಮೊದಲಾದವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಚರ್ಚೆ ಮಾಡಿರುವ ವಿಡಿಯೋ ಇಲ್ಲಿದೆ:
YouTube video player

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 29 June 26

Follow Us