AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 10 ವರ್ಷದಲ್ಲಿ ಒಮ್ಮೆಯೂ ನೆಗಟಿವ್ ರಿಟರ್ನ್ಸ್ ಕೊಟ್ಟಿಲ್ಲ 36 ಈಕ್ವಿಟಿ ಮ್ಯೂಚುವಲ್ ಫಂಡ್ಸ್

Mutual Funds with no negative returns: ಕಳೆದ 10 ವರ್ಷಗಳಿಂದಲೂ ಭಾರತದಲ್ಲಿ ಇರುವ ಈಕ್ವಿಟಿ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 293. ಈ ಪೈಕಿ 2014ರಿಂದ ಒಂದು ವರ್ಷವೂ ನೆಗಟಿವ್ ತೋರದ, ಅಂದರೆ ನಷ್ಟ ಕಾಣದ 36 ಮ್ಯೂಚುವಲ್ ಫಂಡ್​ಗಳಿವೆ. ಇನ್ನುಳಿದ ಈಕ್ವಿಟಿ ಫಂಡ್​ಗಳು ಒಂದಲ್ಲ ಒಂದು ವರ್ಷ ಮೈನಸ್ ಬೆಳವಣಿಗೆ ತೋರಿವೆ. ಇದು ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್​ಗಳು ಎಷ್ಟು ರಿಸ್ಕಿ ಹಾಗೂ ಲಾಭಕಾರಿ ಎರಡೂ ಹೌದು ಎಂಬುದನ್ನು ತೋರಿಸುತ್ತದೆ.

ಕಳೆದ 10 ವರ್ಷದಲ್ಲಿ ಒಮ್ಮೆಯೂ ನೆಗಟಿವ್ ರಿಟರ್ನ್ಸ್ ಕೊಟ್ಟಿಲ್ಲ 36 ಈಕ್ವಿಟಿ ಮ್ಯೂಚುವಲ್ ಫಂಡ್ಸ್
ಮ್ಯೂಚುವಲ್ ಫಂಡ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2024 | 4:19 PM

Share

ನವದೆಹಲಿ, ಜೂನ್ 2: ಷೇರುಗಳ ಮೇಲೆ ಹೂಡಿಕೆ ಮಾಡುವುದು ಬಹಳ ರಿಸ್ಕಿಯೂ ಹೌದು ಲಾಭಕಾರಿಯೂ ಹೌದು. ಇದು ಷೇರುಗಳ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುವ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೂ (Equity mutual funds) ಅನ್ವಯ ಆಗುತ್ತದೆ. ಷೇರಿನ ಮೇಲೆ ಹೂಡಿಕೆ ಮಾಡಿದಾಕ್ಷಣ ಸಖತ್ ಲಾಭ ಬರುತ್ತೆ ಎಂದು ನಿರೀಕ್ಷಿಸಲು ಆಗುವುದಿಲ್ಲ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್​ಗಳು ವರ್ಷದಲ್ಲಿ ಸರಾಸರಿಯಾಗಿ ಶೇ 12ರಷ್ಟು ಲಾಭ ಮಾಡುತ್ತದೆ ಎನ್ನಲಾಗುತ್ತದೆ. ಹಾಗಂತ ಅದು ಪ್ರತೀ ವರ್ಷವೂ ಶೇ. 12ರ ಆಸುಪಾಸಿನ ದರದಲ್ಲಿ ಲಾಭ ತರುತ್ತದೆ ಎಂದಲ್ಲ. ದೀರ್ಘಾವಧಿಯಲ್ಲಿ ಸರಾಸರಿ ಪಡೆದಾಗ ಶೇ. 12ರ ದರದಲ್ಲಿ ಬೆಳೆದಿರಬಹುದು.

ಕಳೆದ ಎರಡು ಅಥವಾ ಮೂರು ವರ್ಷದಲ್ಲಿ ಬಹಳಷ್ಟು ಫಂಡ್​ಗಳು ವಾರ್ಷಿಕವಾಗಿ ಶೇ. 18ಕ್ಕೂ ಹೆಚ್ಚು ಲಾಭ ತಂದಿವೆ. ಆದರೆ, ಬೇರೆ ವರ್ಷಗಳಲ್ಲಿ ಕೆಲ ಫಂಡ್​ಗಳು ಒಂದು ವರ್ಷದಲ್ಲಿ ನಷ್ಟ ಮಾಡಿರಬಹುದು, ಮತ್ತೊಂದು ವರ್ಷದಲ್ಲಿ ಶೇ. 3ರಷ್ಟು ಬೆಳೆದಿರಬಹುದು, ಇನ್ನೊಂದು ವರ್ಷದಲ್ಲಿ ಶೇ. 50ರಷ್ಟು ಲಾಭ ಮಾಡಿರಬಹುದು. ಅದಕ್ಕೆ ಹೇಳುವುದು ಈಕ್ವಿಟಿ ಮೇಲಿನ ಹೂಡಿಕೆ ರಿಸ್ಕಿಯೂ ಹೌದು ಲಾಭಕಾರಿಯೂ ಹೌದು.

ಎಕನಾಮಿಕ್ ಟೈಮ್ಸ್​ನ ವರದಿಯೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಒಮ್ಮೆಯೂ ನಷ್ಟ ಕಾಣದ 36 ಮ್ಯೂಚುವಲ್ ಫಂಡ್​ಗಳಿವೆಯಂತೆ. ಹತ್ತು ವರ್ಷದಿಂದಲೂ ಮಾರುಕಟ್ಟೆಯಲ್ಲಿ ಇರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ 293 ಇದೆ. ಇವುಗಳ ಪೈಕಿ 36 ಫಂಡ್​ಗಳು ಮಾತ್ರವೇ ಹತ್ತು ವರ್ಷದಲ್ಲಿ ಒಂದು ವರ್ಷವೂ ನಷ್ಟ ತಂದಿಲ್ಲ. ಹಾಗಂತ ಎಲ್ಲವೂ ಅದ್ಭುತವಾಗಿ ಬೆಳೆದಿವೆ ಎಂದಲ್ಲ. ಕೆಲ ವರ್ಷ ಶೇ. 1ರಷ್ಟು ಬೆಳೆದಿರುವುದುಂಟು. ಕೆಲ ವರ್ಷ ಶೇ. 20ಕ್ಕೂ ಹೆಚ್ಚು ಬೆಳೆದಿರುವುದುಂಟು.

ಇದನ್ನೂ ಓದಿ: ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ

2014ರಿಂದ 2023ರವರೆಗೂ ನೆಗಟಿವ್ ರಿಟರ್ನ್ಸ್ ಕೊಡದ ಈಕ್ವಿಟಿ ಮ್ಯೂಚುವಲ್ ಫಂಡ್ಸ್

  1. ಆದಿತ್ಯ ಬಿರ್ಲಾ ಎಸ್​​ಎಲ್ ಆರ್ಬಿಟ್ರೇಜ್ ಫಂಡ್
  2. ಆದಿತ್ಯ ಬಿರ್ಲಾ ಎಸ್​ಎಲ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್
  3. ಎಕ್ಸಿಸ್ ಆರ್ಬಿಟ್ರೇಜ್ ಫಂಡ್
  4. ಬಂಧನ್ ಆರ್ಬಿಟ್ರೇಜ್ ಫಂಡ್
  5. ಬಂಧನ್ ಈಕ್ವಿಟಿ ಸೇವಿಂಗ್ಸ್ ಫಂಡ್
  6. ಕೆನರಾ ರಾಬ್ ಕನ್ಸೂಮರ್ ಟ್ರೆಂಡ್ಸ್ ಫಂಡ್
  7. ಡಿಎಸ್​ಪಿ ಡೈನಾಮಿಕ್ ಅಸೆಟ್ ಅಲೋಕೇಶನ್ ಫಂಡ್
  8. ಎಡಲ್​ವೀಸ್ ಆರ್ಬಿಟ್ರೇಜ್ ಫಂಡ್
  9. ಎಡಲ್ವೀಸ್ ಈಕ್ವಿಟಿ ಸೇವಿಂಗ್ಸ್ ಫಂಡ್
  10. ಎಡಲ್ವೀಸ್ ಲಾರ್ಜ್ ಕ್ಯಾಪ್ ಫಂಡ್
  11. ಎಚ್​ಡಿಎಫ್​ಸಿ ಆರ್ಬಿಟ್ರೇಜ್ ಡಬ್ಲ್ಯುಪಿ
  12. ಎಚ್​ಡಿಎಫ್​ಸಿ ಈಕ್ವಿಟಿ ಸೇವಿಂಗ್ಸ್ ಫಂಡ್
  13. ಎಚ್​ಎಸ್​​ಬಿಸಿ ಆರ್ಬಿಟ್ರೇಜ್ ಫಂಡ್
  14. ಎಚ್​ಎಸ್​ಬಿಸಿ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್
  15. ಐಸಿಐಸಿಐ ಪ್ರು ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್
  16. ಐಸಿಐಸಿಐ ಪ್ರು ಇಎಲ್​ಎಸ್​ಎಸ್ ಟ್ಯಾಕ್ಸ್ ಸೇವರ್ ಫಂಡ್
  17. ಐಸಿಐಸಿಐ ಪ್ರು ಈಕ್ವಿಟಿ ಸೇವಿಂಗ್ಸ್ ಫಂಡ್
  18. ಐಸಿಐಸಿಐ ಪ್ರು ಈಕ್ವಿಟ ಆರ್ಬಿಟ್ರೇಜ್ ಫಂಡ್
  19. ಐಸಿಐಸಿಐ ಪ್ರು ಎಫ್​ಎಂಸಿಜಿ ಫಂಡ್
  20. ಐಸಿಐಸಿಐ ಪ್ರು ಮಲ್ಟಿಕ್ಯಾಪ್ ಫಂಡ್
  21. ಇನ್ವೆಸ್ಕೋ ಇಂಡಿಯಾ ಆರ್ಬಿಟ್ರೇಜ್ ಫಂಡ್
  22. ಜೆಎಂ ಆರ್ಬಿಟ್ರೇಜ್ ಫಂಡ್
  23. ಕೋಟಕ್ ಈಕ್ವಿಟಿ ಆರ್ಬಿಟ್ರೇಜ್ ಫಂಡ್
  24. ಕೋಟಕ್ ಈಕ್ವಿಟಿ ಸೇವಿಂಗ್ಸ್ ಫಂಡ್
  25. ಎಲ್​​ಐಸಿ ಎಂಎಫ್ ಈಕ್ವಿಟಿ ಸೇವಿಂಗ್ಸ್ ಫಂಡ್
  26. ಮಿರೇ ಅಸೆಟ್ ಗ್ರೇಟ್ ಕನ್ಸೂಮರ್ ಫಂಡ್
  27. ನಿಪ್ಪೋನ್ ಇಂಡಿಯಾ ಆರ್ಬಿಟ್ರೇಜ್ ಫಂಡ್
  28. ನಿಪ್ಪೋನ್ ಇಂಡಿಯಾ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್
  29. ಪಿಜಿಐಎಂ ಇಂಡಿಯಾ ಆರ್ಬಿಟ್ರೇಜ್ ಫಂಡ್
  30. ಪಿಜಿಐಎಂ ಇಂಡಿಯಾ ಈಕ್ವಿಟಿ ಸೇವಿಂಗ್ಸ್ ಫಂಡ್
  31. ಎಸ್​ಬಿಐ ಆರ್ಬಿಟ್ರೇಜ್ ಆಪೋರ್ಚೂನಿಟೀಸ್ ಫಂಡ್
  32. ಸುಂದರಂ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್
  33. ಸುಂದರಂ ಈಕ್ವಿಟಿ ಸೇವಿಂಗ್ಸ್ ಫಂಡ್
  34. ಟಾಟಾ ಈಕ್ವಿಟಿ ಸೇವಿಂಗ್ಸ್ ಫಂಡ್
  35. ಯುಟಿಐ ಆರ್ಬಿಟ್ರೇಜ್ ಫಂಡ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ